Moto G24 Power: 8000 ಸಾವಿರಕ್ಕೆ ಖರೀದಿಸಿ 6000 mAh ಬ್ಯಾಟರಿ ಇರುವ ಮೋಟೋ ಮೊಬೈಲ್, ದಾಖಲೆಯ ಬುಕಿಂಗ್

ಹೊಸ ಪವರ್ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ಮೊಟೊರೊಲಾ

Moto G24 Power Smartphone: ಇದು ಸ್ಮಾರ್ಟ್ ಫೋನ್ ಗಳ ಯುಗ ಎಂದರೆ ತಪ್ಪಾಗುವುದಿಲ್ಲ. ಪ್ರಸ್ತುತ ಯಾರ ಕೈಯಲ್ಲಿ ನೋಡಿದರು ಸ್ಮಾರ್ಟ್ ಫೋನ್ ಗಳು ರಾರಾಜಿಸಿರುತ್ತದೆ. ಜನರು ಈಗ ಕಡಿಮೆ ಬೆಲೆಯಲ್ಲಿ ಸಹ ಸ್ಮಾರ್ಟ್ ಫೋನುಗಳನ್ನು ಖರೀದಿಸಬಹುದು. ವಿವಿಧ ಬೆಲೆಯೊಂದಿಗೆ ವಿವಿಧ ರೂಪಾಂತರದಲ್ಲಿ ಸ್ಮಾರ್ಟ್ ಫೋನ್ ಗಳು ಪರಿಚಯವಾಗುತ್ತಿವೆ.

ದೇಶಿಯ ಮಾರುಕಟ್ಟೆಯಲ್ಲಿ ಮೊಟೊರೊಲಾ (Motorola) ಸ್ಮಾರ್ಟ್ ಫೋನ್ ಗಳು ಬಹು ಬೇಡಿಕೆಯ ಫೋನ್ ಗಳಾಗಿದೆ. ಯಾಕೆಂದರೆ ಮೊಟೊರೊಲಾ ಕಂಪನಿಯ ಫೋನ್ ಗಳು ಬಜೆಟ್ ಪ್ರಿಯರಿಗೆ ಹೇಳಿಮಾಡಿಸಿದಂತಿರುತ್ತವೆ. ಕಡಿಮೆ ಬೆಲೆಯ ಫೋನ್ ಆಗಿದ್ದರು ಆಕರ್ಷಕ ಫೀಚರ್ಸ್ ಗಳನ್ನೂ ಮೊಟೊರೊಲಾ ಸ್ಮಾರ್ಟ್ ಫೋನ್ ಒಳಗೊಂಡಿರುತ್ತದೆ.

ಇದೀಗ Motorola ಕಂಪನಿ ಭಾರತದಲ್ಲಿ ತನ್ನ ಜಿ ಸರಣಿಯ ಅಡಿಯಲ್ಲಿ ಹೊಸ ಮೋಟೋ G24 ಪವರ್ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿದೆ. ಈಗ ನಾವು ಈ ಸ್ಮಾರ್ಟ್ ಫೋನ್ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

Moto G24 Power Smartphone Price
Image Credit: India Today

Moto G24 Power Smartphone Feature
ಲೆನೋವಾ ಮಾಲೀಕತ್ವದ ಬ್ರಾಂಡ್ ನಿಂದ ಅನಾವರಣಗೊಂಡ ಬೆಸ್ಟ್ ಬಜೆಟ್ ಸ್ಮಾರ್ಟ್ ಫೋನ್ ಇದಾಗಿದೆ. ಈ Moto G24 Power ಆಂಡ್ರಾಯ್ಡ್ 14 ನಲ್ಲಿ My UX ನೊಂದಿಗೆ ರನ್ ಆಗುತ್ತದೆ. 6.56-ಇಂಚಿನ HD+ IPS LCD ಡಿಸ್​ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 537 nits ಪೀಕ್ ಬ್ರೈಟ್ ನೆಸ್ ಅನ್ನು ಪಡೆದುಕೊಂಡಿದೆ.

ಮೋಟೋ G24 ಪವರ್‌ನಲ್ಲಿನ ಬ್ಲೂಟೂತ್, GPS, A-GPS, 3.5mm ಹೆಡ್ ಫೋನ್ ಜ್ಯಾಕ್, Wi-Fi 802.11 ಮತ್ತು USB ಟೈಪ್ ಸೇರಿವೆ -ಸಿ ಪೋರ್ಟ್. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೋನ್ Side-mounted fingerprint ಅನ್ನು ಹೊಂದಿದೆ. 33W TurboPower ಫಾಸ್ಟ್ ಚಾರ್ಜಿಂಗ್‌ನೊಂದಿಗೆ, 6,000mAh ಬ್ಯಾಟರಿ ಅನ್ನು ಸಹ ಪಡೆದುಕೊಂಡಿದೆ.

Join Nadunudi News WhatsApp Group

Moto G24 Power Smartphone Feature
Image Credit: Mobigyaan

Moto G24 Power Smartphone Camera
Moto G24 Power ಸ್ಮಾರ್ಟ್ ಫೋನ್ ನ ಕ್ಯಾಮರಾ ವಿಚಾರದ ಬಗ್ಗೆ ಮಾತಾಡುದಾದರೆ, ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಪಡೆದುಕೊಂಡಿದೆ. 50-ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, f/2.4 ದ್ಯುತಿರಂಧ್ರದೊಂದಿಗೆ 2-ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್‌ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ f/2.45 ದ್ಯುತಿರಂಧ್ರದೊಂದಿಗೆ 16-ಮೆಗಾ ಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ.

Moto G24 Power Smartphone Price
ಭಾರತದಲ್ಲಿ ಮೋಟೋ G24 ಪವರ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 8999 ರೂಪಾಯಿ, ಹಾಗೆ 8GB RAM + 128GB ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್ ಗೆ 9999 ರೂಪಾಯಿಯನ್ನ ನಿಗದಿಮಾಡಲಾಗಿದೆ. ಈ ಸ್ಮಾರ್ಟ್ ಫೋನ್ Glacier Blue and Ink Blue ಬಣ್ಣಗಳಲ್ಲಿ ಲಭ್ಯವಿದೆ.

Join Nadunudi News WhatsApp Group