Moto G34: ಮೊಟೊ G24 ಪವರ್‌, G34 ಸ್ಮಾರ್ಟ್‌ಫೋನ್ ಫೀಚರ್ಸ್‌ ಲೀಕ್‌! ಆಕರ್ಷಕ ವಿನ್ಯಾಸ

ಮೊಟೊರೊಲಾ ಕಂಪನಿಯ ಆಕರ್ಷಕ ಸ್ಮಾರ್ಟ್ ಫೋನ್ ಗಳ ಬಿಗ್ ಅಪ್ಡೇಟ್ ಲೀಕ್, ಉತ್ತಮ ವಿನ್ಯಾಸದೊಂದಿಗೆ ಗ್ರಾಹಕರ ಗಮನ ಸೆಳೆದ ಮೊಟೊ G24 ಪವರ್‌ ಹಾಗು G34 ಸ್ಮಾರ್ಟ್‌ಫೋನ್

Moto G34 And Moto G24 Power Smart Phone: ದೇಶಿಯ ಮಾರುಕಟ್ಟೆಯಲ್ಲಿ ಮೊಟೊರೊಲಾ (Motorola) ಸ್ಮಾರ್ಟ್ ಫೋನ್ ಗಳು ಬಹು ಬೇಡಿಕೆಯ ಫೋನ್ ಗಳಾಗಿದೆ. ಯಾಕೆಂದರೆ ಮೊಟೊರೊಲಾ ಕಂಪನಿಯ ಫೋನ್ ಗಳು ಬಜೆಟ್ ಪ್ರಿಯರಿಗೆ ಹೇಳಿಮಾಡಿಸಿದಂತಿರುತ್ತವೆ. ಕಡಿಮೆ ಬೆಲೆಯ ಫೋನ್ ಇದಾಗಿದ್ದರೂ ಬಹಳ ಆಕರ್ಷಕ ಫೀಚರ್ಸ್ ಗಳನ್ನೂ ಮೊಟೊರೊಲಾ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಬಹುದು.

ಮೊಟೊರೊಲಾ ಫೋನ್‌ಗಳು ಕಡಿಮೆ ಬೆಲೆ ಹೊಂದಿದ್ದರೂ ಸಹ ಬಳಕೆದಾರರಿಗೆ ಪ್ರೀಮಿಯಂ ಅನುಭವ ನೀಡುವ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಂತೆ ಈಗ ಮೊಟೊ (Moto) ಮತ್ತೆರಡು ಹೊಸ ಫೋನ್‌ಗಳನ್ನು ಆಕರ್ಷಕ ಫೀಚರ್ಸ್‌ನೊಂದಿಗೆ ಲಾಂಚ್‌ ಮಾಡಲು ಸಜ್ಜಾಗಿದೆ. ಸಾಕಷ್ಟು ಜನರು ಹೊಸ ಮೊಟೊ ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗಲು ಕಾತುರದಿಂದ ಕಾಯುತ್ತಿದ್ದಾರೆ. ಅದರಂತೆ ಈಗ ಮೊಟೊರೊಲಾ ಎರಡು ಬಜೆಟ್ ಫೋನ್‌ಗಳನ್ನು ಲಾಂಚ್‌ ಮಾಡಲು ಮುಂದಾಗಿದೆ.

Moto G34 Smart Phone
Image Credit: Nextpit

ಮೊಟೊರೊಲಾ ದ ಹೊಸ ಎರಡು ಸ್ಮಾರ್ಟ್ ಫೋನ್ ಗಳು ಲಾಂಚ್‌

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಮೊಟೊರೊಲಾ ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದ್ದು, ಅದರಂತೆ ಈಗ ಮೊಟೊರೊಲಾ ಎರಡು ಬಜೆಟ್ ಫೋನ್‌ಗಳನ್ನು ಲಾಂಚ್‌ ಮಾಡಲು ಮುಂದಾಗಿದೆ. ಅದುವೇ ಮೊಟೊ G24 ಪವರ್‌ ಮತ್ತು ಮೊಟೊ G34 (Moto G24 Power, Moto G34) ಸ್ಮಾರ್ಟ್‌ಫೋನ್‌. ಈ ಮೊಟೊ G24 ಪವರ್‌ಮತ್ತು ಮೊಟೊ G34 ಸ್ಮಾರ್ಟ್‌ಫೋನ್‌ಗಳ ವಿನ್ಯಾಸ ಹಾಗೂ ಕೆಲವು ಮಾಹಿತಿ ಲೀಕ್‌ ಆಗಿವೆ. ಈ ಎರಡೂ ಫೋನ್‌ಗಳು ಸಹ ಶೀಘ್ರದಲ್ಲೇ ಯುರೋಪಿಯನ್ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎನ್ನಲಾಗಿದೆ.

ಮೊಟೊ G24 ಪವರ್‌ ಸ್ಮಾರ್ಟ್ ಫೋನ್ ನ ರಚನೆ ಹಾಗು ಫೀಚರ್ಸ್

Join Nadunudi News WhatsApp Group

ಮೊಟೊರೊಲಾ ದ ಮೊಟೊ G24 ಪವರ್‌ ಕ್ಲಾಸಿಕ್ ಮೊಟೊ G ಸರಣಿಯ ಶೈಲಿಯನ್ನೇ ಹೊಂದಿರಲಿದೆ ಎಂದು ಹೇಳಲಾಗಿದ್ದು, ಜೊತೆಗೆ ಹೊಳೆಯುವ ರಿಯರ್‌ ಪ್ಯಾನಲ್‌ನೊಂದಿಗೆ ಮಧ್ಯದಲ್ಲಿ ಲೋಗೋ ಕಾಣಿಸಿಕೊಳ್ಳಲಿದ್ದು, 50 ಮೆಗಾಪಿಕ್ಸೆಲ್‌ ಮುಖ್ಯ ಲೆನ್ಸ್ ,ಇದರೊಂದಿಗೆ ಈ ಫೋನ್‌ನ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್-ಹೋಲ್ ಕಟೌಟ್ ಆಯ್ಕೆ ನೀಡಲಾಗಿದೆ. ಬಲ ಅಂಚಿನಲ್ಲಿ ವಾಲ್ಯೂಮ್ ರಾಕರ್ ಮತ್ತು ಪವರ್ ಬಟನ್ ಆಯ್ಕೆ ಪಡೆಯಲಿದ್ದು, ಎಡಭಾಗದಲ್ಲಿ ಸಿಮ್ ಟ್ರೇ ಆಯ್ಕೆ ನೀಡಲಾಗಿದೆ . ಇದರೊಂದಿಗೆ, USB Type-C ಚಾರ್ಜಿಂಗ್ ಪೋರ್ಟ್ ಆಯ್ಕೆ ಹಾಗೂ ಸ್ಪೀಕರ್ ಮತ್ತು ಹೆಡ್‌ಫೋನ್ ಜ್ಯಾಕ್ ಆಯ್ಕೆ ಕೆಳಗೆ ಇದ್ದು, ಈ ಫೋನ್‌ ಬೆಳ್ಳಿ ಮತ್ತು ಗಾಢ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Moto G24 Power Smart Phone
Image Credit: Original Source

ಮೊಟೊ G34 ಸ್ಮಾರ್ಟ್ ಫೋನ್ ನ ರಚನೆ ಹಾಗು ಫೀಚರ್ಸ್

ಮೊಟೊರೊಲಾ ಮತ್ತೊಂದು ಫೋನ್‌ ಆದ ಮೊಟೊ G34 ಕಪ್ಪು ನೀಲಿ ರೂಪಾಂತರದಲ್ಲಿ ಫಾಕ್ಸ್ ಲೆದರ್‌ನೊಂದಿಗೆ ಬರುತ್ತದೆ ಹಾಗು ಈ ಫೋನ್ ಹೊಳೆಯುವ ಫಿನಿಶ್‌ನೊಂದಿಗೆ ತಿಳಿ ನೀಲಿ ಆಯ್ಕೆಯಲ್ಲೂ ಕಾಣಿಸಿಕೊಳ್ಳಲಿದೆ ಎಂದು ಊಹಿಸಲಾಗಿದೆ. G24 ಪವರ್‌ನಂತೆ, ಈ G34 ಸಹ 50 ಮೆಗಾಪಿಕ್ಸೆಲ್‌ ಮುಖ್ಯ ಸೆನ್ಸರ್‌ ಆಯ್ಕೆ ಪಡೆಯಲಿದೆ ಎಂದು ತಿಳಿದು ಬಂದಿದೆ.

ಇದರೊಂದಿಗೆ ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆಯಲಿದೆ ಎನ್ನಲಾಗಿದ್ದು, ನಿಮಗೆ ಅಗತ್ಯವಿರುವ ಎಲ್ಲಾ ಫೀಚರ್ಸ್‌ ಅನ್ನು ಇದು ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಹೆಡ್‌ಫೋನ್ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸ್ಪೀಕರ್ ಆಯ್ಕೆ ಇದೆ. ಈ ಎರಡು ಫೋನ್ ಗಳು ಉತ್ತಮ ಫೀಚರ್ಸ್ ಅನ್ನು ಹೊಂದಿದ್ದು, ಗ್ರಾಹಕರು ಈ ಫೋನ್ ಗಳಿಗೆ ಆಕರ್ಷಿತರಾಗದೇ ಇರಲು ಸಾಧ್ಯವೇ ಇಲ್ಲ ಎನ್ನಬಹುದು.

Join Nadunudi News WhatsApp Group