Moto Watch: 10 ದಿನ ಬ್ಯಾಟರಿ ಚಾರ್ಜ್ ಮಾಡುವ ಅಗತ್ಯ ಇಲ್ಲ, ಅಗ್ಗದ ಬೆಲೆಗೆ ಆಕರ್ಷಕ ಮೋಟೋ ಸ್ಮಾರ್ಟ್ ವಾಚ್

10 ದಿನದ ಬ್ಯಾಟರಿ ಬ್ಯಾಕಪ್ ಹೊಂದಿರುವ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ ಮೊಟೊರೊಲಾ.

Moto Watch 40 Smart Watch: ಜಾಗತಿಕ ಮಾರುಕಟ್ಟೆಯಲ್ಲಿ Motorola ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವಿಭಿನ್ನ ವೈಶಿಷ್ಟ್ಯಗಳಿರುವ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ Motorola ಕಂಪನಿಯು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಕಂಪನಿಯು ಜಾಗತಿಕವಾಗಿ ಸಂಚಲನ ಸೃಷ್ಟಿಸಲು ವಿಭಿನ್ನ ಫೀಚರ್ ಇರುವ Smart Watch ಅನ್ನು ಪರಿಚಯಿಸಿದೆ. ಈ ಮೂಲಕ ಮೊಟೊರೊಲಾ ಇನ್ನುಮುಂದೆ ಸ್ಮಾರ್ಟ್ ವಾಚ್ ತಯಾರಕ ಕಂಪನಿಯಾಗಿಯೂ ಗುರುತಿಸಿಕೊಳ್ಳಲಿದೆ.

Moto Watch 40 Smart Watch
Image Credit: Smartprix

Moto Watch 40 Smart Watch
ಮಾರುಕಟ್ಟೆಯಲ್ಲಿ ಇದೀಗ ಮೊಟೊರೊಲಾ ಕಂಪನಿಯು Moto Watch 40 Smart Watch ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್ ವಾಚ್ ಒಟ್ಟು 85 ಕ್ಕೂ ಹೆಚ್ಚು ವಾಚ್ ಫೇಸ್ ಆಯ್ಕೆಗಳನ್ನು ನೀಡುತ್ತದೆ. ಇದು IP67 ರೇಟಿಂಗ್ ಅನ್ನು ಸಹ ಹೊಂದಿದ್ದು, ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಕಳೆದ ವರ್ಷ ಮೋಟೋ ವಾಚ್ 70 ಮತ್ತು ಮೋಟೋ ವಾಚ್ 200 ಅನ್ನು ಅನಾವರಣಗೊಳಿಸುವ ಮೂಲಕ, ಮೊಟೊರೊಲಾ ಸ್ಮಾರ್ಟ್‌ ಫೋನ್‌ ಗಳಂತೆ ವಾಚ್‌ ಗಳು ಬೇಡಿಕೆ ಪಡೆದುಕೊಂಡಿದ್ದವು. ಪ್ರಸ್ತುತ ಮೋಟೋ ವಾಚ್ 40 ಈಗ ಯುಎಸ್‌ ನಲ್ಲಿ ಬಿಡುಗಡೆಯಾಗಿದೆ. ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೂ ಕೂಡ ಎಂಟ್ರಿ ಕೊಡಲಿದೆದೆ. ಇನ್ನುಮುಂದೆ ಜನರ ಕೈಯಲ್ಲಿ ಮೋಟೋ ಸ್ಮಾರ್ಟ್ ಫೋನ್ ನ ಜೊತೆಗೆ ಸ್ಮಾರ್ಟ್ ವಾಚ್ ಕೂಡ ಕಾಣಿಸಿಕೊಳ್ಳಲಿದೆ.

Moto Watch 40 Smart Watch Price And Feature
Image Credit: Gsmarena

ಆಕರ್ಷಕ ವಿನ್ಯಾಸದೊಂದಿಗೆ ಲಾಂಚ್ ಆಯಿತು ಮೋಟೋ ವಾಚ್
ಈ ಸ್ಮಾರ್ಟ್ ವಾಚ್ 1.57 ಇಂಚಿನ LCD ಕರ್ವ್ಡ್ ಡಿಸ್ಪ್ಲೇಯನ್ನು ಪಡೆದುಕೊಂಡಿದೆ. ಹೃದಯ ಬಡಿತ ಮತ್ತು SpO2 ಮಾನಿಟರಿಂಗ್, ನಿದ್ರೆ ಮತ್ತು ಒತ್ತಡ ಟ್ರ್ಯಾಕಿಂಗ್ ಸೇರಿದಂತೆ ಹಲವಾರು ಆರೋಗ್ಯ ಮತ್ತು ಫಿಟ್‌ ನೆಸ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಅಲ್ಲದೇ ಇದು ಮೋಟೋ ವಾಚ್ ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಅಧಿಸೂಚನೆಗಳನ್ನು ಬೆಂಬಲಿಸುತ್ತದೆಯಾದರೂ, ಸಂದೇಶಗಳಿಗೆ ಪ್ರತಿಕ್ರಿಯಿಸುವ ಅಥವಾ ನೇರವಾಗಿ ಕರೆಗಳನ್ನು ಮಾಡುವ ಸಾಮರ್ಥ್ಯವನ್ನು ಇದು ಪಡೆಯುವುದಿಲ್ಲ.

10 ದಿನದ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಸ್ಮಾರ್ಟ್ ವಾಚ್ ನ ಬೆಲೆ ಎಷ್ಟು…?
ಈ ವಾಚ್ 240mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 10 ದಿನಗಳ ಬ್ಯಾಕಪ್ ಅನ್ನು ಒದಗಿಸುತ್ತದೆ. ಒಂದು ಭಾರಿ ಚಾರ್ಜ್ ಮಾಡಿ ನೀವು 10 ದಿನಗಳವರೆಗೆ ಈ ಸ್ಮಾರ್ಟ್ ವಾಚ್ ಅನ್ನು ಬಳಸಬಹುದು. IP67 ರೇಟಿಂಗ್‌ ನೊಂದಿಗೆ, ಈ ಸಾಧನವನ್ನು ಧೂಳು ಮತ್ತು ನೀರಿನಿಂದ ರಚಿಸಲಾಗಿದೆ. ಇನ್ನು ಈ Moto Watch 40 Smart Watch ನ ಬೆಲೆಯ ಬಗ್ಗೆ ಹೇಳುವುದಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 5393 ರೂ. ಗಳಲ್ಲಿ ಲಾಂಚ್ ಆಗಲಿದೆ.

Join Nadunudi News WhatsApp Group

Join Nadunudi News WhatsApp Group