Motorola G Play: ಸೆಲ್ಫಿ ಪ್ರಿಯರಿಗಾಗಿ ರಾತ್ರೋರಾತ್ರಿ ಅಗ್ಗದ ಮೊಬೈಲ್ ಲಾಂಚ್ ಮಾಡಿದ ಮೋಟೋ, ಕಡಿಮೆ ಬೆಲೆ 5000 mAh ಬ್ಯಾಟರಿ

5000 mAh ಬ್ಯಾಟರಿ ಇರುವ ಅಗ್ಗದ ಮೊಬೈಲ್ ಲಾಂಚ್ ಮಾಡಿದ ಮೋಟೋ

Motorola G Play Smartphone 2024: ಟೆಕ್ ವಲಯದಲ್ಲಿ ಇದೀಗ Motorola ಕಂಪನಿ ನೂತನ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ಹೊಸ ಸ್ಮಾರ್ಟ್ ಫೋನ್ ಖರೀದಿಸುವ ಯೋಜನೆ ಇದ್ದವರಿಗೆ ಇದೀಗ Motorola ಕಂಪನಿ ಹೊಸ ಆಯ್ಕೆಯನ್ನು ನೀಡಿದೆ. ಕಂಪನಿಯು ತನ್ನ ಹಳೆಯ ಮಾದರಿಗಿಂತ ಹೆಚ್ಚಿನ ಫೀಚರ್ ಅನ್ನು ನೂತನ ಮಾದರಿಯಲ್ಲಿ ಅಳವಡಿಸಿದೆ. ಮಾರುಕಟ್ಟೆಯಲ್ಲಿ Motorola ಕಂಪನಿಯ ಈ ಸ್ಮಾರ್ಟ್ ಫೋನ್ ಬಾರಿ ಸಂಚಲನ ಮೂಡಿಸಲಿದೆ.

Motorola G Play Smartphone Price In India
Image Credit: Notebookcheck

Motorola G Play Smartphone
ಇದೀಗ Motorola ಕಂಪನಿಯ ತನ್ನ G ಸರಣಿಯಲ್ಲಿ ಹೊಸ ಮಾದರಿಯನ್ನು ಪರಿಚಯಿಸಿದೆ. ಹೆಚ್ಚಿನ ಸುರಕ್ಷಿತ ಫೀಚರ್ ನೊಂದಿಗೆ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. Motorola G Play ಸ್ಮಾರ್ಟ್‌ ಫೋನ್ 6.5-ಇಂಚಿನ ಪೂರ್ಣ HD ಪ್ಲಸ್ ಡಿಸ್‌ ಪ್ಲೇಯನ್ನು ಹೊಂದಿದೆ. ಈ ಪ್ರದರ್ಶನವು 1,080×2,200 ಪಿಕ್ಸೆಲ್‌ ಗಳ ಸ್ಕ್ರೀನ್ ರೆಸಲ್ಯೂಶನ್‌ ನೊಂದಿಗೆ ಬರುತ್ತದೆ. ಇದು 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು 500 ನಿಟ್‌ ಗಳ ಗರಿಷ್ಠ ಹೊಳಪನ್ನು ಹೊಂದಿರುತ್ತದೆ.

Motorola G Play ಸ್ಮಾರ್ಟ್‌ಫೋನ್ ಸ್ನಾಪ್‌ ಡ್ರಾಗನ್ 680 SoC ಪ್ರೊಸೆಸರ್‌ ನಿಂದ ಚಾಲಿತವಾಗಿದೆ. ಇದು Android 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ವರ್ಚುವಲ್ RAM ಆಯ್ಕೆಯ ಮೂಲಕ RAM ಅನ್ನು 6GB ವರೆಗೆ ವಿಸ್ತರಿಸಬಹುದು. ಹಾಗೆಯೆ ಮೈಕ್ರೋ SD ಕಾರ್ಡ್ ಮೂಲಕ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದು.

Motorola G Play Smartphone 2024
Image Credit: Pcmag

5000mAh ಬ್ಯಾಟರಿ ಸಾಮರ್ಥ್ಯವಿರುವ ಈ ಸ್ಮಾರ್ಟ್ ಫೋನ್ ನ ಬೆಲೆ ಎಷ್ಟು ಗೊತ್ತಾ..?
Motorola G Play ಸ್ಮಾರ್ಟ್‌ ಫೋನ್ 50-ಮೆಗಾಪಿಕ್ಸೆಲ್ ಸಂವೇದಕ ಸಾಮರ್ಥ್ಯವನ್ನು ಹೊಂದಿರುವ ಸಿಂಗಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಎಲ್ ಇಡಿ ಫ್ಲ್ಯಾಶ್ ಯೂನಿಟ್ ಕೂಡ ಇದಕ್ಕೆ ಲಗತ್ತಿಸಲಾಗಿದೆ.ಇನ್ನು ಉತ್ತಮ ಗುಣಮಟ್ಟದ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇನ್ನು ಈ ಸ್ಮಾರ್ಟ್ ಫೋನ್ 15w ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದ್ದು, 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. Motorola G Play ಸ್ಮಾರ್ಟ್ ಫೋನ್ ಫೋನ್ ಕೇವಲ ನೀಲಿ ಬಣ್ಣದ ಆಯ್ಕೆಯನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಸುಮಾರು 12,465 ರೂ. ಗಳಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group