Razr 40 Ultra: ಹೊಸ ವರ್ಷದ ಬಂಪರ್ ಆಫರ್. ಈ ಮೋಟೋ ಮೊಬೈಲ್ ಮೇಲೆ ಭರ್ಜರಿ 10000 ರೂ ಡಿಸ್ಕೌಂಟ್.

ಮೊಟೊರೊಲಾ ಈ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ 10000 ರೂಪಾಯಿ ಕಡಿತಗೊಳಿಸಲಾಗಿದೆ.

Motorola Razr 40 Ultra Smartphone: ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಹೀಗಾಗಿ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹಲವು ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ಸದ್ಯ ಜನಪ್ರಿಯ ಮೊಬೈಲ್ ತಯಾರಕ ಕಂಪನಿಯಾದ Motorola ಈ ಮಾದರಿ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಪಡೆದುಕೊಂಡಿದೆ. ಬೇಡಿಕೆ ಹೆಚ್ಚಿದ್ದಂತೆ ಕಂಪನಿಯು ಈ ಮಾದರಿಯ ಖರೀದಿಗೆ ಆಕರ್ಷಕ ಆಫರ್ ಅನ್ನು ಕೂಡ ನೀಡುತ್ತಿದೆ.

Motorola Razr 40 Ultra Smartphone
Image Credit: Inside-digital

Motorola Razr 40 Ultra Smartphone
ಮಾರುಕಟ್ಟೆಯಲ್ಲಿ Motorola Razr 40 Ultra Smartphone ಸದ್ಯ ಹೆಚ್ಚಿನ ಕ್ರೇಜ್ ಮೂಡಿಸಿದೆ. ಈ ಸ್ಮಾರ್ಟ್ ಫೋನ್ ಫೋಲ್ಡೆಬಲ್ ಸ್ಮಾರ್ಟ್ ಫೋನ್ ಆಗಿದ್ದು ಹೆಚ್ಚಿನ ವೈಶಿಷ್ಟ್ಯಗಳನ್ನು ನೀವು ನೋಡಬಹುದು. ಸದ್ಯ ಕಂಪನಿಯು ತನ್ನ ಈ ಮಾದರಿಯ ಸ್ಮಾರ್ಟ್ ಫೋನ್ ನ ಬೆಲೆಯಲ್ಲಿ ಭರ್ಜರಿ 10,000 ರೂ. ಕಡಿಮೆ ಮಾಡಿದೆ. ಹೊಸ ಸ್ಮಾರ್ಟ್ ಖರೀದಿಸುವವರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

ಮೊಟೊರೊಲಾ ಈ ಸ್ಮಾರ್ಟ್ ಫೋನ್ ಬೆಲೆ 10000 ಇಳಿಕೆ
Motorola Razr 40 Ultra Smartphone ಸ್ನಾಪ್‌ ಡ್ರಾಗನ್ 8+ Gen 1 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ Motorola Razr 40 Ultra Smartphone ರ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ 89,999 ರೂ. ಆಗಿದ್ದು ಸದ್ಯ 10,000 ಇಳಿಕೆಯ ಮೂಲಕ ನೀವು 79,999 ರೂ. ಗಳಲ್ಲಿ ಇದನ್ನು ಖರೀದಿಸಬಹುದು. ಕಂಪನಿಯು ಆಫರ್ ಅನ್ನು December 24 ರವರೆಗೆ ನೀಡುತ್ತಿದೆ. ನೀವು ಈ ದಿನಾಂಕದೊಳಗೆ Motorola Razr 40 Ultra Smartphone ಅನ್ನು 10,000 ರೂ. ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Motorola Razr 40 Ultra Smartphone Price
Image Credit: Androidguys

Motorola Razr 40 Ultra ಸ್ಮಾರ್ಟ್‌ ಫೋನ್ ಫೀಚರ್
Motorola Razr 40 Ultra ಸ್ಮಾರ್ಟ್‌ ಫೋನ್ ಫೋಲ್ಡೆಬಲ್ ಫೋನ್ ಆಗಿದೆ. ಇದು 6.9 ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 165Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು 1,056×1,066 ಪಿಕ್ಸೆಲ್‌ ಗಳ ಸ್ಕ್ರೀನ್ ರೆಸಲ್ಯೂಶನ್‌ ನೊಂದಿಗೆ 3.6-ಇಂಚಿನ ಹೊರ ಪ್ರದರ್ಶನವನ್ನು ಹೊಂದಿದೆ. ಇದು 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಇನ್ನು ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group