Mukesh Ambani Driver Salary: ಮುಕೇಶ್ ಅಂಬಾನಿಯ ಡ್ರೈವರ್ ಸಂಬಳ ದೊಡ್ಡ ಕಂಪನಿಯ ಉದ್ಯೋಗಿಗಳಿಗಿಂತ ಹೆಚ್ಚು.

Mukesh Ambani Driver Salary: ಮುಕೇಶ್ ಅಂಬಾನಿ (Mukesh Ambani ) ಅವರು ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಹಾಗು ಅಂಬಾನಿಯ ಇಡೀ ಕುಟುಂಬದವರು ಐಷಾರಾಮಿ ಜೀವನಕ್ಕೆ ಹೆಸರುವಾಸಿ ಆಗಿದ್ದಾರೆ. ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಕಾರು ಸಂಗ್ರಹಣವನ್ನು ಇಷ್ಟಪಡುತ್ತಾರೆ. ಅವರ ಬಳಿ ಒಂದೊಂದು ದುಬಾರಿ ಮತ್ತು ದೊಡ್ಡ ವಾಹನಗಳಿವೆ.

Mukesh Ambani Driver Salary
Image Source: India Today

ಮಧ್ಯಮಾ ವರದಿಗಳ ಪ್ರಕಾರ, ಅಂಬಾನಿ ಕುಟುಂಬವು 500 ವಗಗಳನ್ನು ಹೊಂದಿದೆ. ಹಾಗೆಯೆ ಅವರ ಕಾರು ಚಾಲಕರು ಸಕ್ಲಷ್ಟು ಕಠಿಣ ತರಬೇತಿಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಅವರ ಡ್ರೈವರ್ ನ ಸಂಬಳವೂ ತುಂಬಾ ಹೆಚ್ಚಾಗಿದೆ. ಮುಕೇಶ್ ಅಂಬಾನಿ ಚಾಲಕರು ದೊಡ್ಡ ಕಂಪನಿಯಲ್ಲಿ ಗಳಿಸಿದ ಆದಾಯಕ್ಕಿಂತ ಹೆಚ್ಚಿನದನ್ನು ಗಳಿಸುತ್ತಾರೆ.

ಕಠಿಣ ತರಬೇತಿ ಪಡೆದ ನಂತರವೇ ಅಂಬಾನಿ ಕುಟುಂಬಕ್ಕೆ ಸೇರಿದ ಕಾರು ಓಡಿಸುವ ಅವಕಾಶ ಸಿಗುತ್ತದೆ. ಮಾಧ್ಯಮಗಳ ವರದಿಯ ಪ್ರಕಾರ ಮುಕೇಶ್ ಅಂಬಾನಿ ಮನೆಯಲ್ಲಿ ಸುಮಾರು 600 ರಿಂದ 700 ಸೇವಕರು ಕೆಲಸ ಮಾಡುತ್ತಾರೆ. ಅವರು 500 ಕ್ಕೂ ಹೆಚ್ಚು ಚಾಲಕರನ್ನು ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರ ಸಂಬಳ 2 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಇದರೊಂದಿಗೆ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯಂತೆ ವೈದ್ಯಕೀಯ ವಿಮೆಯಂತಹ ಸೌಲಭ್ಯಗಳು ಸಿಗುತ್ತದೆ.

Mukesh Ambani Driver Salary
Image Source: India Today

ಅಂಬಾನಿ ಮನೆಯಲ್ಲಿ ಕೆಲಸ ಪಡೆಯುವುದು ಅಷ್ಟು ಸುಲಭವಲ್ಲ. ಅವರ ಮನೆಯಲ್ಲಿ ಕೆಲಸ ಮಾಡಲು ನೀವು ಕಂಪನಿ ನೀಡುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಚಾಲಕರನ್ನು ಆಯ್ಕೆ ಮಾಡುವಾಗ ದಾರಿಯಲ್ಲಿನ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದುನ್ನು ಕೂಡ ನೋಡಲಾಗುತ್ತದೆ. ಕೆಲಸವನ್ನು ಪಡೆಯಲು ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಕೂಡ ಉತ್ತೀರ್ಣರಾಗಬೇಕು.

Mukesh Ambani Driver Salary
Image Source: India Today

ಮಾಧ್ಯಮದ ವರದಿಗಳ ಪ್ರಕಾರ, ಅಂಬಾನಿ ಕುಟುಂಬವು ತನ್ನ ಹೆಚ್ಚಿನ ಉದ್ಯೋಗಿಗಳನ್ನು ಏಜೆನ್ಸಿಗಳ ಮೂಲಕ ನೇಮಿಸಿಕೊಳ್ಳುತ್ತಾರೆ. ಏಕೆಂದರೆ ಅಂತಹ ಶ್ರೀಮಂತ ಮನೆಗಳಿಗೆ ಯಾರನ್ನಾದರೂ ಕಳುಹಿಸುವ ಮೊದಲು ಏಜೆನ್ಸಿಗಳು ವ್ಯಕ್ತಿಯ ಸಂಪೂರ್ಣ ಪರಿಶೀಲನೆಯನ್ನು ಮಾಡುತ್ತದೆ. ಅವನ ಸಂಪೂರ್ಣ ಹಿನ್ನಲೆಯನ್ನು ಪರಿಶೀಲಿಸಿ ಮತ್ತು ಈ ವ್ಯಕ್ತಿ ಕೆಲಸ ಮಾಡಲು ಅರ್ಹನೇ ಎಂದು ನಿರ್ಧರಿಸುತ್ತದೆ.

Join Nadunudi News WhatsApp Group

Mukesh Ambani Driver Salary
Image Source: Times Of India

 

 

Join Nadunudi News WhatsApp Group