Ambani Car: ಭದ್ರತೆಗಾಗಿ ಮುಕೇಶ್ ಅಂಬಾನಿ ಖರೀದಿಸಿದ ಈ ಕಾರಿನ ಬೆಲೆ ಎಷ್ಟು ಗೊತ್ತಾ…..? ವರ್ಲ್ಡ್ ಸೇಫ್ಟಿ ಕಾರ್.

ಭದ್ರತೆಗಾಗಿ ಇನ್ನೊಂದು ಹೊಸ ಐಷಾರಾಮಿ ಕಾರ್ ಖರೀದಿ ಮಾಡಿದ ಮುಕೇಶ್ ಅಂಬಾನಿ.

Mukesh Ambani Bulletproof Car: ರಿಲಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಅವರು ದೇಶದ ಶ್ರೀಮಂತ ವ್ಯಕ್ತಿ ಆಗಿದ್ದರೆ. ಹಾಗೆ ವಿಶ್ವದ 11ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಜಿಯೋ ಸೇರಿದಂತೆ ಹಲವಾರು ಉದ್ಯಮಗಳನ್ನು ಮುನ್ನೆಡೆಸುತ್ತಿದ್ದಾರೆ. ವಿಶ್ವದಲ್ಲಿ ಎಷ್ಟೇ ಭಾರತೀಯ ಕೈಗಾರಿಕೋದ್ಯಮಿಗಳಿದ್ದರೂ, ಅಂಬಾನಿಯವರಷ್ಟು ಖ್ಯಾತಿ ಗಳಿಸಿಲ್ಲ.

Mukesh Ambani Bulletproof Car
Image Credit: Hindustantimes

ಭಾರತೀಯ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ ಅವರು ತಮ್ಮ ಕುಟುಂಬದ ಭದ್ರತೆ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸುತ್ತಾರೆ. ಅದಕ್ಕಾಗಿ ಭಾರೀ ಹಣವನ್ನು ಖರ್ಚು ಮಾಡುತ್ತಾರೆ. ಕಾಲಕಾಲಕ್ಕೆ ತಮ್ಮ ಕುಟುಂಬದ ಭದ್ರತೆಗೆ ಹೊಸ ವಾಹನಗಳನ್ನು ಖರೀದಿ ಮಾಡುತ್ತಾರೆ.

ಮುಂಬೈನಲ್ಲಿ ಅಂಬಾನಿ ಪತ್ನಿ ನೀತಾ ಅಂಬಾನಿ, ಪುತ್ರರಾದ ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿ, ಸೊಸೆ ಶ್ಲೋಕಾ ಮೆಹ್ತಾ ಅಂಬಾನಿ ಮತ್ತು ಮೊಮ್ಮಕ್ಕಳು ಎಲ್ಲಿಯಾದರೂ ಹೋಗಬೇಕಾದರೆ ಬೆಂಗಾವಲು ಪಡೆಯ ವಾಹನಗಳು, ಅವರು ಹೋಗುವ ಐಷಾರಾಮಿ ಕಾರನ್ನು ಹಿಂಬಾಲಿಸುತ್ತವೆ.

ಭದ್ರತೆಗಾಗಿ 10 ಕೋಟಿಯ ಕಾರ್ ಖರೀದಿಸಿದ ಅಂಬಾನಿ
ಇದೀಗ ನಾವು ಮುಖೇಶ್ ಅಂಬಾನಿ ಖರೀದಿಸಿದ ಎರಡನೇ ಐಷಾರಾಮಿ ಕಾರ್ ಇದಾಗಿದೆ. 10 ಕೋಟಿಯ ಹೊಸ ಬುಲೆಟ್ ಪ್ರೂಫ್ ಮರ್ಸಿಡಿಸ್-ಬೆನ್ಜ್(Mercedes-Benz ) ಕಾರ್ ಅನ್ನು ಮುಖೇಶ್ ಅಂಬಾನಿ ಖರೀದಿಸಿದ್ದಾರೆ. ಅಂಬಾನಿ ಅವರ ಬೆಂಗಾವಲಿಗೆ ಮಹಿಂದ್ರಾ ಸ್ಕಾರ್ಪಿಯೋ, ರೇಂಜ್ ರೋವರ್ ಕಾರ್ ಗಳಿರುತ್ತದೆ.

mukesh ambani Mercedes-Benz car
Image Credit: Dnaindia

Mercedes-Benz Car Features
Mercedes-Benz S 680 Guard ವಿಶೇಷತೆ ಬಗ್ಗೆ ಮಾತನಾಡುದಾದರೆ, ಇದು ಮರ್ಸಿಡಿಸ್-ಬೆನ್ಜ್ ಎಸ್ ಕ್ಲಾಸ್ ಗೆ ಹೋಲಿಕೆಯಾಗುತ್ತದೆ. ಶಕ್ತಿಯುತ ಕಾರಾಗಿದ್ದು, ಗಟ್ಟಿಮುಟ್ಟಾದ ಟೈಯರ್ ಹೊಂದಿದೆ. 6.0 – ಲೀಟರ್ ವಿ 12 ಎಂಜಿನ್‌ ಒಳಗೊಂಡಿದ್ದು, 612 Ps ಗರಿಷ್ಠ ಪವರ್ ಹಾಗೂ 830 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ. ಹಾಗೆ ಬುಲೆಟ್ ಪ್ರೂಫ್ ವಿಶೇಷತೆಯನ್ನು ಪಡೆದುಕೊಂಡಿದೆ.

Join Nadunudi News WhatsApp Group

ಇದಷ್ಟೇ ಅಲ್ಲದೆ Mukesh Ambani ಅವರು ಸಾಕಷ್ಟು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಭಾರತದ ಅತ್ಯಂತ ದುಬಾರಿ ಎಸ್‌ಯುವಿಗಳಲ್ಲಿ ಒಂದಾದ ರೋಲ್ಸ್ ರಾಯ್ಸ್ ಫ್ಯಾಂಟಮ್, ಅಂಬಾನಿ ಅವರ ಬಳಿಯಿದ್ದು, ಇದರ ಬೆಲೆ 13.50 ಕೋಟಿ ಆಗಿದೆ. Mukesh Ambani ಅವರ ಭದ್ರತೆಗೆಂದು ಇರುವ ಮತ್ತೊಂದು ಕಾರು ಬಿಎಂಡಬ್ಲ್ಯೂ 760 LI. ಈ ಕಾರು ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರ ಬೆಲೆ 8.9 ಕೋಟಿ ಆಗಿದೆ.

Join Nadunudi News WhatsApp Group