Ambani Tips: ನೀವು ಶ್ರೀಮಂತರಾಗಬೇಕಾ, ಅಂಬಾನಿಯ ಈ ಐದು ತತ್ವದ ಬಗ್ಗೆ ತಿಳಿದುಕೊಳ್ಳಿ.

ಮುಕೇಶ್ ಅಂಬಾನಿಯ ಯಶಸ್ಸಿನ ತತ್ವಗಳ ಬಗ್ಗೆ ತಿಳಿಯಿರಿ.

Mukesh Ambani Tips: ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ (Mukesh Ambani) ಅವರು ಸಾಕಷ್ಟು ಉದ್ಯಮದಲ್ಲಿ ತೊಡಗಿಸಿಕೊಂಡು ಬಹಳಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಉದ್ಯಮದ ಬಗ್ಗೆ ಮಾತನಾಡುವುದಾದರೆ ಯಾರಾದರೂ ಯಾವುದೇ ಉದ್ಯಮಕ್ಕೆ ಕೈ ಹಾಕುವುದಾದರೂ ಮುಖೇಶ್ ಅಂಬಾನಿ ಅವರನ್ನು ನೆನಪಿಸಿಕೊಳ್ಳಬೇಕು. ಅವರು ಉದ್ಯಮ ನಡೆಸಿದ ರೀತಿ ಹೇಗೆ ಅನ್ನುವುದನ್ನು ತಿಳಿದುಕೊಳ್ಳಬೇಕು.

ಮುಖೇಶ್ ಅಂಬಾನಿ ಅವರು ಉದ್ಯಮ ಮಾಡಿ ಯಶಸ್ಸು ಕಂಡು ದೇಶದ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಉದ್ಯಮ ಮಾಡುವ ಪ್ರತಿಯೊಬ್ಬರಿಗೆ ಮುಕೇಶ್ ಅಂಬಾನಿಯ ಯಶಸ್ಸಿನ ತತ್ವಗಳನ್ನು ತಿಳಿದುಕೊಳ್ಳುವ ಆಸೆ ಇದ್ದೆ ಇರುತ್ತದೆ. ನೀವು ಮುಖೇಶ್ ಅಂಬಾನಿ ಅವರ ತತ್ವಗಳನ್ನು ಪಾಲಿಸಿ ಉದ್ಯಮಕ್ಕೆ ಕೈ ಹಾಕಿದರೆ ಯಶಸ್ಸು ಕಾಣಬಹುದು. 

Learn about these five principles of Ambani.
Image Credit: Thehindu

ನಿಮ್ಮ ಯೋಚನೆಯನ್ನು ಬದಲಿಸಿ
ಯಾವುದೇ ಒಬ್ಬ ವ್ಯಕ್ತಿ ಯಶಸ್ಸು ಪಡೆಯಬೇಕಾದರೆ ಅವನು ಬೇರೆಯವರಿಗಿಂತ ವಿಭಿನ್ನವಾಗಿ ಯೋಚನೆ ಮಾಡಬೇಕು. ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಸಹ ಇಂತಹ ಗುಣವನ್ನು ಹೊಂದಿದ್ದಾರೆ. ನೀವು ಸಹ ಜೀವನದಲ್ಲಿ ಯಶಸ್ಸು ಕಾಣಲು ನೀವು ಅಂಬಾನಿಯವರ ಮಂತ್ರವನ್ನು ತಿಳಿದುಕೊಳ್ಳಿ.

ನಿಮ್ಮ ಗುರಿಯ ಕಡೆ ಗಮನ ಕೊಡಿ
ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಅನೇಕ ಸಮಸ್ಯೆಗಳಿರುತ್ತದೆ. ಇದರಿಂದಾಗಿ ಜನರು ಗುರಿಯನ್ನು ಮರೆತು ಬಿಡುತ್ತಾರೆ. ಆದರೆ ನಿಮ್ಮ ಗುರಿಯನ್ನು ನೀವು ಮರೆಯದಿದ್ದಾಗ ಮಾತ್ರ ನಿಮಗೆ ಯಶಸ್ಸು ಸಿಗುತ್ತದೆ. ಮುಖೇಶ್ ಅಂಬಾನಿಯವರು ಸಹ ತಮ್ಮ ಗುರಿಯನ್ನು ಇಟ್ಟುಕೊಂಡು ಅದೇ ಗುರಿಯತ್ತ ಕೆಲಸ ಮಾಡಿ ಯಶಸ್ಸು ಕಂಡಿದ್ದಾರೆ.

Learn about these five principles of Ambani.
Image Credit: Bloomberg

ನಿಮ್ಮ ಕೆಲಸದತ್ತ ಗಮನ ಕೊಡಿ
ಇನ್ನು ಕೆಲವರು ಕೆಲಸದಲ್ಲಿ ತುಂಬಾ ನಿರತರಾಗುತ್ತಾರೆ. ಅವರು ತಮ್ಮ ದಿನನಿತ್ಯದ ಕೆಲಸಗಳನ್ನು ಬಿಡಲು ಪ್ರಾರಂಭಿಸುತ್ತಾರೆ. ಆದರೆ ಮುಖೇಶ್ ಅಂಬಾನಿ ಯಶಸ್ಸಿನ ಶಿಖರವನ್ನು ತಲುಪಿದ ನಂತರವೂ ಅವರು ತುಂಬಾ ಸಂಯಮದಿಂದ ಇರುತ್ತಾರೆ ಮತ್ತು ತಮ್ಮ ನಿತ್ಯದ ಕೆಲಸದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ದುಡಿಯುವುದರ ಜೊತೆಗೆ ತಮ್ಮ ವಯಕ್ತಿಕ ಜೀವನದಲ್ಲೂ ಸಹ ಸಮಯ ಕಳೆಯುತ್ತಾರೆ. ಇನ್ನು ಶಿಸ್ತು ಇದ್ದರೆ ಎಲ್ಲವನ್ನು ನಿಭಾಯಿಸಲು ಸಾಧ್ಯ.

Join Nadunudi News WhatsApp Group

ಧನಾತ್ಮಕವಾಗಿ ಆಲೋಚನೆಯನ್ನು ಮಾಡಿ
ಇನ್ನು ಯಾವುದೇ ಕೆಲಸದಲ್ಲಿ ನಿಮ್ಮ ಆಲೋಚನೆ ಧನಾತ್ಮಕವಾಗಿದ್ದಾಗ ಮಾತ್ರ ನೀವು ಯಶಸ್ಸು ಕಾಣಲು ಸಾಧ್ಯ. ಅದಕ್ಕಾಗಿಯೇ ನಕಾರಾತ್ಮಕ ವಿಷಯಗಳಿಗೆ ಗಮನ ಕೊಡುವ ಬದಲು, ಅವುಗಳಿಂದ ದೂರ ಇರುವುದು ಉತ್ತಮ.

Learn about these five principles of Ambani.
Image Credit: Bizadda360

ಹಿರಿಯವರನ್ನು ಗೌರವಿಸಿ
ಇನ್ನು ನೀವು ಎಷ್ಟೇ ಯಶಸ್ವಿ ಅಥವಾ ಶ್ರೀಮಂತರಾಗಿದ್ದರು ಸಹ ನೀವು ಹಿರಿಯರನ್ನು ಗೌರವಿಸುವುದು ಉತ್ತಮ. ಇದರಿಂದ ನಿಮಗೆ ಯಶಸ್ಸು ಸಿಗುತ್ತದೆ. ಏಕೆಂದರೆ ಯಶಸ್ಸಿನಲ್ಲಿ ನಿಮ್ಮ ಪರಿಶ್ರಮದ ಜೊತೆಗೆ ಹಿರಿಯರ ಆಶೀರ್ವಾದವು ಇದ್ದೆ ಇರುತ್ತದೆ.

ಮುಖೇಶ್ ಅಂಬಾನಿ ಅವರು ಸಹ ಹಿರಿಯರನ್ನು ಗೌರವಿಸುತ್ತಾರೆ. ಇವರು ಹಿರಿಯರ ಮಾತನ್ನು ಕಡೆಗಣಿಸುವುದಿಲ್ಲ. ಅನೇಕ ಬಾರಿ ಭಾಷಣ ಮತ್ತು ಸಂದರ್ಶನದಲ್ಲಿ ಅವರು ತಮ್ಮ ತಂದೆಯ ಬಗ್ಗೆ ಹೇಳಿದ್ದಾರೆ. ಇಂದಿಗೂ ತಂದೆಯಿಂದ ಕಲಿತ ವಿಷಯಗಳನ್ನು ಪಾಲಿಸುತ್ತಿದ್ದೇನೆ ಎನ್ನುತ್ತಾರೆ.

Join Nadunudi News WhatsApp Group