Mumbai Indians: ಸತತ ಸೋಲಿನ ನಂತರ ದೊಡ್ಡ ನಿರ್ಧಾರಕ್ಕೆ ಮುಂದಾದ MI ಮಾಲೀಕರು, ರೋಹಿತ್ ಫ್ಯಾನ್ಸ್ ಖುಷ್
ಸತತ ಸೋಲಿನ ನಂತರ ಬಹುದೊಡ್ಡ ನಿರ್ಧಾರ ತಗೆದುಕೊಳ್ಳಲು ಮುಂದಾದ ಮುಂಬೈ ಇಂಡಿಯನ್ಸ್
Mumbai Indians Captain: ಪ್ರಸ್ತುತ ಕ್ರಿಕೆಟ್ ಪ್ರಿಯರ ಬಹುನಿರೀಕ್ಷಿತ IPL ನಡೆಯುತ್ತಿದೆ. ಈ ಬಾರಿಯ 17 ನೇ ಆವೃತ್ತಿಯ IPL ನಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆಟದ ನಿಯಮದ ಬದಲಾವಣೆಯ ಜೊತೆಗೆ ಟೀಮ್ ಕ್ಯಾಪ್ಟನ್ ಕೂಡ ಬದಲಾಗಿದ್ದಾರೆ. Mumbai Indians ತಂಡ IPL 2024 ರಲ್ಲಿ ಯಾಕೋ ಹಿನ್ನಡೆ ಕಾಣುತ್ತಿದೆ.
ಬರೋಬ್ಬರಿ 5 ಬಾರಿ ಕಪ್ ಗೆದ್ದ Mi ತಂಡ ಈ ಬಾರಿ IPL ನಲ್ಲಿ ಬಾರಿ ಹಿಂದುಳಿದಿದೆ. ಇನ್ನು Mi ತಂಡದ ಕ್ಯಾಪ್ಟನ್ ಬದಲಾದ ಕಾರಣ ಅಭಿಮಾನಿಗಳು ಬೇಸರ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇನ್ನು IPL 2024 ರಲ್ಲಿ ನಡೆದ ಮೂರು ಪಂದ್ಯದ್ಲಲಿ Mi ತಂಡ ಸೋಲು ಕಂಡಿದೆ. ಈ ಕಾರಣಕ್ಕೆ MI ಮಾಲೀಕರು ಮಹತವಾದ ನಿರ್ಧಾರ ಕೈಗೊಂಡಿದ್ದಾರೆ. MI ಮಾಲೀಕರ ಈ ನಿರ್ಧಾರ ರೋಹಿತ್ ಫ್ಯಾನ್ಸ್ ಗಳಿಗೆ ಖುಷಿ ನೀಡಲಿದೆ ಎನ್ನಬಹುದು.
![Mumbai Indians Captain](https://nadunudi.in/wp-content/uploads/2024/04/Mumbai-Indians-Captain.jpg)
ಸತತ ಸೋಲಿನ ನಂತರ ದೊಡ್ಡ ನಿರ್ಧಾರಕ್ಕೆ ಮುಂದಾದ MI ಮಾಲೀಕರು
ಇನ್ನು IPL ನಲ್ಲಿ ಗುಜರಾತ್ ವಿರುದ್ಧ 6 ರನ್ ಗಳಿಂದ ಸೋತ ನಂತರ ಮುಂಬೈ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 31 ರನ್ ಗಳಿಂದ ಹೀನಾಯ ಸೋಲು ಅನುಭವಿಸಿತು. ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾರ್ದಿಕ್ ಪಾಂಡ್ಯ ಪಡೆ ಹೀನಾಯ ಸೋಲು ಕಂಡಿದೆ.
ಈ ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ನಾಯಕತ್ವ ಬಿಡುತ್ತಾರಾ..? ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಇನ್ನು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರ ಮಾತನ್ನು ತಂಡದ ಆಟಗಾರರು ಕೇಳುತ್ತಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ತೊರೆಯಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
![Rohit Sharma Back As Mumbai Captain](https://nadunudi.in/wp-content/uploads/2024/04/Rohit-Sharma-Back-As-Mumbai-Captain.jpg)
ಮತ್ತೆ ಮುಂಬೈ ತಂಡದ ಕ್ಯಾಪ್ಟನ್ ಆಗ್ತಾರಾ ರೋಹಿತ್ ಶರ್ಮ
ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರೀ ಜಗಳ ಏರ್ಪಟ್ಟಿತ್ತು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಈ ನಡುವೆ ಅಭಿಮಾನಿಗಳು ಕೂಡ ನಮಗೆ ಹಾರ್ದಿಕ್ ಪಾಂಡ್ಯ ನಾಯಕತ್ವ ಬೇಡ ಮತ್ತು ರೋಹಿತ್ ಶರ್ಮಾ ನಾಯಕತ್ವ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಸತತ 3 ಪಂದ್ಯಗಳಲ್ಲಿ ಸೋತಿದೆ. ಹಾಗಾದರೆ ಈಗ ರೋಹಿತ್ ಶರ್ಮಾ ಮತ್ತೆ ಮುಂಬೈ ತಂಡದ ನಾಯಕರಾಗುತ್ತಾರಾ…? ಎನ್ನುವುದು ಸದ್ಯದ ಹಾಟ್ ಟಾಪಿಕ್ ಆಗಿದೆ. ಕಾಪ್ಟನ್ಸಿ ವಿಚಾರವಾಗಿ ಬಾರಿ ಚರ್ಚೆ ನಡೆಯುತ್ತಿರುವ ಕರಣ ಸದ್ಯದಲ್ಲೇ ಈ ವಿಷ್ಯಕ್ಕೆ ಬ್ರೇಕ್ ಬೀಳಲಿದೆ. ಮತ್ತೆ ರೋಹಿತ್ ಶರ್ಮ ಮುಂಬೈ ತಂಡದ ಕ್ಯಾಪ್ಟನ್ ಆಗುವ ಸಾಧ್ಯತೆ ಹೆಚ್ಚಿದೆ.
![Mumbai Indians latest News](https://nadunudi.in/wp-content/uploads/2024/04/Mumbai-Indians-latest-News.jpg)