Naga Chaitanya: ಸಮಂತಾಗೆ ಮಾಡಿದ ಮೋಸ ಒಪ್ಪಿಕೊಂಡ ನಾಗ ಚೈತನ್ಯ, ಅಷ್ಟಕ್ಕೂ ಮಾಡಿದ ಮೋಸ ಏನು.

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನಕ್ಕೆ ಕಾರಣವೇನು..?

Naga Chaitanya And Samantha Divorce Story: ಸೌತ್ ಇಂಡಸ್ಟ್ರಿಯಲ್ಲಿ ಕ್ಯೂಟ್ ಕಪಲ್ ಆಗಿ ಮಿಂಚಿದ್ದ ಸಮಂತಾ ಹಾಗೂ ನಾಗ ಚೈತನ್ಯ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಒಂದು ಕಾಲದಲ್ಲಿ ಈ ಜೋಡಿ ಬೆಸ್ಟ್ ಆಗಿ ಗುರುತಿಸಿಕೊಂಡಿದ್ದರು. ಆದರೆ ವೈಯಕ್ತಿಕ ಕಾರಣದಿಂದಾಗಿ ಈ ಜೋಡಿ ತಮ್ಮ ಸಾಂಸಾರಿಕ ಜೀವನದಿಂದ ಬೇರೆಯಾಗಿದ್ದರೆ.

ಸಮಂತಾ ಹಾಗೂ ನಾಗ ಚೈತನ್ಯ ದಂಪತಿ ವಿಚ್ಛೇದನ ಪಡೆದು ಮೂರ್ ನಾಲ್ಕು ವರ್ಷ ಕಳೆಯುತ್ತಾ ಬಂದರು ಆಗಾಗ ಈ ಜೋಡಿಯ ಬಗ್ಗೆ ಸುದ್ದಿ ವೈರಲ್ ಆಗುತ್ತಾ ಇರುತ್ತದೆ. ವಿಚ್ಛೇದನ ನಂತರವೂ ಕೂಡ ಈ ಜೋಡಿ ಒಂದಾಗುವ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಸದ್ಯ ನಾಗ ಚೈತನ್ಯ ವಿಚ್ಛೇದನದ ಬಳಿಕ ಮಾಡಿದ ಮೋಸದ ಬಗ್ಗೆ ಮನದಾಳದ ಮಾತನ್ನು ಆಡಿದ್ದಾರೆ.

Naga Chaitanya And Samantha Divorce Story
Image Credit: Timesofindia

ಸಮಂತಾಗೆ ಮಾಡಿದ ಮೋಸ ಒಪ್ಪಿಕೊಂಡ ನಾಗ ಚೈತನ್ಯ
ಸಂಬಂಧದ ಪ್ರಶ್ನೆಗೆ ಉತ್ತರಿಸಿದ ನಾಗ ಚೈತನ್ಯ ಸಮಂತಾಗೆ ಮಾಡಿದ ಮೋಸದ ಬಗ್ಗೆ ಒಪ್ಪಿಕೊಂಡಿದ್ದಾರೆ. ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕು. ಸಂಬಂಧದ ಬಗ್ಗೆ ಮಾತನಾಡುವಾಗ ನಾನು ಕೂಡ ಮೋಸ ಮಾಡಿದ್ದೇನೆ ಎಂದು ನಾಗ ಚೈತನ್ಯ ಹೇಳಿದ್ದಾರೆ. ನೀವು ಬೆಳೆದಾಗ, ನೀವು ಅದನ್ನು ಲೆಕ್ಕಾಚಾರ ಮಾಡಿದಾಗ ಎಲ್ಲವೂ ಅರ್ಥವಾಗುತ್ತದೆ. ನನಗೆ ಎಲ್ಲಾ ಅನುಭವವಿದೆ. ಎಲ್ಲದಕ್ಕೂ ಉತ್ತರಿಸುವ ಸಮಯ ಬಂದಿದೆ ಎಂದು ನಾಗ ಚೈತನ್ಯ ಹೇಳಿದ್ದಾರೆ.

ನಾಗ ಚೈತನ್ಯ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೇ ಎಂದು ಸಮಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ವಿಚ್ಛೇದನಕ್ಕೂ ಮುನ್ನ ನಾಗ ಚೈತನ್ಯ ಮಾತನಾಡಿರುವ ವಿಡಿಯೋ ಇದಾಗಿದೆ ಎಂದು ಕೆಲ ನೆಟಿಜನ್‌ ಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಾಗ ಚೈತನ್ಯ ಮಾತನಾಡಿರುವ ವಿಡಿಯೋ ಸದ್ಯ ಭಾರೀ ಸದ್ದು ಮಾಡುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

Naga Chaitanya And Samantha
Image Credit: Onmanorama

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನಕ್ಕೆ ಕಾರಣವೇನು..?
ಮದುವೆಯ ನಂತರವೂ ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಇಷ್ಟವಿಲ್ಲದ ಕಾರಣ ನಾಗ ಚೈತನ್ಯ ಸಮಂತಾಗೆ ವಿಚ್ಛೇದನ ನೀಡಿದ್ದಾರೆ ಎಂಬ ವರದಿಗಳೂ ಬಂದಿದ್ದವು. ಅಲ್ಲದೆ, ತಾಯಿಯಾಗಲು ಬಯಸದೆ ಈ ನಿರ್ಧಾರ ತೆಗೆದುಕೊಂಡಿದ್ದಾರೇ ಎನ್ನಲಾಗುತ್ತಿದೆ. ಆಕೆ ತನ್ನ ಪರ್ಸನಲ್ ಸ್ಟೈಲಿಸ್ಟ್ ಪ್ರೀತಮ್ ಜುಕಲ್ಕರ್ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ವದಂತಿಗಳಿವೆ, ಆದರೆ ಇದೆಲ್ಲ ಸುಳ್ಳು. ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಧಾರ ರಹಿತ ಸುದ್ದಿಗಳು ಹರಿದಾಡುತ್ತಿವೆ. ವದಂತಿಗಳ ಬಗ್ಗೆ ಸಮಂತಾ ದೂರು ನೀಡಿದ್ದರು. ಕಾನೂನು ಕ್ರಮವನ್ನೂ ಕೈಗೊಳ್ಳಲಾಗಿದೆ.

Join Nadunudi News WhatsApp Group

ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಯೂಟ್ಯೂಬ್ ಚಾನೆಲ್‌ ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಆಯಾ ಚಾನೆಲ್‌ ಗಳ ವಿಷಯವನ್ನು ತೆಗೆದುಹಾಕಲಾಗಿದೆ. ಸಮಂತಾ ಖಿನ್ನತೆಯಿಂದ ಬಳಲುತ್ತಿದ್ದರು. ವಿಚ್ಛೇದನದ ಒತ್ತಡದಿಂದ ಪಾರಾಗಲು ಸಮಂತಾ ಸ್ನೇಹಿತರೊಂದಿಗೆ ಸಮಯ ಕಳೆಯುತ್ತಿದ್ದರು. ಸದ್ಯ ಸಮಂತಾ ಅನೇಕ ಹೊಸ ಹೊಸ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಗ್ ಕಮ್​ ಬ್ಲ್ಯಾಕ್ ಮಾಡಲು ಸಮಂತಾ ಪ್ಲಾನ್ ಮಾಡಿದ್ದು, ಬಂಗಾರಂ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪಸ್ಟ್ ಪೋಸ್ಟರ್ ಕೂಡ ರಿವೀಲ್ ಆಗಿದ್ದು, ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

Naga Chaitanya And Samantha Divorce
Image Credit: Zoomtventertainment

Join Nadunudi News WhatsApp Group