Namratha Gowda: ನಟಿ ನಮೃತಾ ಗೌಡ ಅಭಿಮಾನಿಗಳಿಗೆ ಬಿಗ್ ಶಾಕ್, ದಿಢೀರ್ ಆಸ್ಪತ್ರೆಗೆ ದಾಖಲಾದ ಬಿಗ್ ಬಾಸ್ ನಮೃತಾ.
ದಿಢೀರ್ ಆಸ್ಪತ್ರೆಗೆ ದಾಖಲಾದ ಬಿಗ್ ಬಾಸ್ ನಮೃತಾ
Namratha Gowda Health Issue: ಕಿರುತೆರೆಯ ಸ್ಟಾರ್ ನಟಿ ನಮೃತಾ ಗೌಡ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಆದ ಬಿಗ್ಗ್ ಬಾಸ್ ನಲ್ಲಿ ನಮೃತಾ ಸ್ಪರ್ದಿಯಾಗಿದ್ದು, ಎಲ್ಲರಿಗು ಚಿರಪರಿಚಿತರಗಿದ್ದಾರೆ. ಬಿಗ್ ಬಾಸ್ ಎಂಟ್ರಿಗೂ ಮುನ್ನ ನಟಿ ಕನ್ನಡದ ಕಿರುತೆರೆಯಲ್ಲಿ ಮಿಂಚಿ ಮನೆಮಾತಾಗಿದ್ದರು.
ಪುಟ್ಟ ಗೌರಿ ಮದುವೆ, ನಾಗಿಣಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ ಎಲ್ಲರ ಗಮನ ಸೆಳೆದಿದ್ದರು. ಸೀರಿಯಲ್ ನ ಬಳಿಕ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ನಮೃತಾ ಗೌಡ ಟಾಪ್ 5 ಕಂಟೆಸ್ಟಂಟ್ ಗಳಲ್ಲಿ ಒಬ್ಬರಾಗಿದ್ದರು.
ಬಿಗ್ ಬಾಸ್ ನ ನಂತರ ನಟಿ ಇನ್ನಷ್ಟು ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ ನಮೃತಾ ಗೌಡ ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಮೃತಾ ಫೋಟೋಗಳನ್ನು ನೋಡುತ್ತಾ ಅಭಿಮಾನಿಗಳು ಖುಷಿಪಡುತ್ತಾರೆ. ಹೀಗಿರುವಾಗ ಇದೀಗ ನಮೃತಾ ಅಭಿಮಾನಿಗಳಿಗೆ ಅವರ ಇತ್ತೀಚಿನ ಪೋಸ್ಟ್ ಒಂದು ಆತಂಕವನ್ನು ತರಿಸಿದೆ. ಅದೇನು ಎನ್ನುವ ಬಗ್ಗೆ ತಿಳಿಯೋಣ.
![Actress Namratha Gowda hospitalized](https://nadunudi.in/wp-content/uploads/2024/06/Actress-Namratha-Gowda-hospitalized.png)
ನಟಿ ನಮೃತಾ ಗೌಡ ಅಭಿಮಾನಿಗಳಿಗೆ ಬಿಗ್ ಶಾಕ್
ಹೌದು, ನಟಿ ನಮೃತಾ ಗೌಡ ಬಿಗ್ಗ್ ಬಾಸ್ ಬಳಿಕ ಹೆಚ್ಚಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಹಾಗೆ ಬಿಗ್ ಬಾಸ್ ಸ್ಪರ್ಧಿಗಳನ್ನು ಭೇಟಿಯಾಗುತ್ತ ಅವರ ಜೊತೆಗಿನ ಫೋಟೋಗಳನ್ನು ಕೂಡ ಪೋಸ್ಟ್ ಮಾಡುತ್ತಿದ್ದರು. ಇತ್ತೀಚೆಗಷ್ಟೇ ನಟಿ ನಮೃತಾ ಗೋವಾ ಟ್ರಿಪ್ ಹೋಗಿದ್ದು, ಅಲ್ಲಿನ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಆದರೆ ಇದೀಗ ನಟಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ದಿಢೀರ್ ಆಸ್ಪತ್ರೆಗೆ ದಾಖಲಾದ ಬಿಗ್ ಬಾಸ್ ನಮೃತಾ
ಇದೀಗ ನಟಿ ನಮೃತಾ ಗೌಡ ಇದ್ದಕ್ಕಿದ್ದಂತೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೇ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ನಟಿ ನಮ್ರತಾ ಗೌಡ ಬೆಡ್ ಮೇಲೆ ಮಲಗಿದ್ದಾರೆ. ಅವರ ಪಕ್ಕದಲ್ಲಿ ನಮ್ರತಾ ಗೌಡ ಅವರ ತಾಯಿ ಇದ್ದಾರೆ. ಈ ಫೋಟೋ ಶೇರ್ ಮಾಡಿರುವ ನಮ್ರತಾ ಗೌಡ ಚೇತರಿಸಿಕೊಳ್ಳುತ್ತಿದ್ದೇನೆ, ನಾನು ಈಗ ಹೆಚ್ಚು ವಿಶ್ರಾಂತಿ ಪಡೆಯುತ್ತೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಬೇಗ ಗುಣಮುಖರಾಗಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
![Namratha Gowda Health Issue](https://nadunudi.in/wp-content/uploads/2024/06/Namratha-Gowda-Health-Issue.png)