Modi Guarantee: ನರೇಂದ್ರ ಮೋದಿ ಮತ್ತೊಂದು ಘೋಷಣೆ, ಮತ್ತೆ ಪ್ರಧಾನಿಯಾದರೆ ಈ ರೀತಿಯ ತೆರಿಗೆ ರದ್ದು.

ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ಈ ರೀತಿಯ ತೆರಿಗೆ ರದ್ದಾಗಲಿದೆ, ಕೇಂದ್ರದ ಘೋಷಣೆ

Modi Guarantee Latest Update: ದೇಶದಲ್ಲಿ ಇದೀಗ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹತ್ತು ವರ್ಷದಿಂದ ಅಧಿಕಾರದಲ್ಲಿರುವ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಆಸೆಯೊಂದಿಗೆ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.

ಇನ್ನು ಹತ್ತು ವರ್ಷಗಳಿಂದ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರವನ್ನು ಪಡೆಯುವ ಪಣ ತೊಟ್ಟಿದೆ. ಇನ್ನು ಮತದಾರರ ಮತ ಓಲೈಕೆಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಹಲವಾರು ಗ್ಯಾರಂಟಿ ಘೋಷಣೆಯನ್ನ ಘೋಘಿಸುತ್ತಿವೆ. ಇನ್ನು ಈ ಬಾರಿ ಯಾವ ಸರ್ಕಾರ ಅಧಿಕಾರವನ್ನು ಪಡೆದುಕೊಳ್ಳುತ್ತದೆ ಎನ್ನುವುದನ್ನು ತಿಳಿಯಲು ಜನರು ಕಾಯುತ್ತಿದ್ದಾರೆ.

narendra modi cancel property tax
Image Credit: Original Source

ನರೇಂದ್ರ ಮೋದಿ ಮತ್ತೊಂದು ಘೋಷಣೆ
ಸದ್ಯ ಮೋದಿ ಸರ್ಕಾರ ದೇಶದಲ್ಲಿ ಮತ್ತೆ ಅಧಿಕಾರವನ್ನು ಪಡೆಯುವ ಉದ್ದೇಶದಿಂದ ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿದೆ. ಈಗಾಗಲೇ ಸರ್ಕಾರ ಜನರಿಗಾಗಿ ವಿವಿಧ ರೀತಿಯ ಉಚಿತ ಗ್ಯಾರಂಟಿ ಘೋಷಣೆಯನ್ನು ಹೊರಡಿಸಿದೆ. ಇನ್ನು ಮೋದಿ ಸರ್ಕಾರ ಮೂರನೇ ಅವಧಿಗೆ ಆಯ್ಕೆಯಾದರೆ ಪಿತ್ರಾರ್ಜಿತ ತೆರಿಗೆ ವಿಧಿಸುವುದಿಲ್ಲ ಎನ್ನುವ ಘೋಷಣೆಯನ್ನು ಹೊರಡಿಸಿತ್ತು. ಇದೀಗ ಮೋದಿ ಸರ್ಕಾರ ತನ್ನ ಈ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದೆ.

ಮತ್ತೆ ಪ್ರಧಾನಿಯಾದರೆ ಈ ರೀತಿಯ ತೆರಿಗೆ ರದ್ದು
ದಾಖಲೆಯ ಮೂರನೇ ಅವಧಿಗೆ ಪುನರಾಯ್ಕೆಯಾದರೆ ಪಿತ್ರಾರ್ಜಿತ ತೆರಿಗೆಯನ್ನು ಪರಿಚಯಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದರು. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರ ಇತ್ತೀಚಿನ ಹೇಳಿಕೆಗಳನ್ನು ಚರ್ಚಿಸಲಾಗಿದೆ.

narendra modi latesta nnouncement on tax
Image Credit: Original Source

ಸಂಪತ್ತಿನ ಮರುಹಂಚಿಕೆಯ ಮೂಲಕ ಅಸಮಾನತೆಯನ್ನು ಕಡಿಮೆ ಮಾಡಲು ಭಾರತದಲ್ಲಿ ಯುಎಸ್ ಶೈಲಿಯ ಪಿತ್ರಾರ್ಜಿತ ತೆರಿಗೆಯ ಅಗತ್ಯವನ್ನು ಕಾಂಗ್ರೆಸ್ಸಿನ ವಿದೇಶಿ ವಿಭಾಗದ ಯುಎಸ್ ಮೂಲದ ಅಧ್ಯಕ್ಷರು ಪ್ರತಿಪಾದಿಸಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಸಂಪತ್ತು ಮರುಹಂಚಿಕೆ ಯೋಜನೆ ಯಾರ ಬಳಿ ಎಷ್ಟು ಹಣ ಮತ್ತು ಚಿನ್ನವಿದೆ ಎಂಬುದನ್ನು ಪತ್ತೆಹಚ್ಚಿ ಅದನ್ನು ಮುಸ್ಲಿಮರು ಮತ್ತು ಒಳನುಸುಳುಕೋರರಿಗೆ ಹಂಚುವ ತಂತ್ರವಾಗಿದೆ ಎಂದು ಆರೋಪಿಸಿದರು.

Join Nadunudi News WhatsApp Group

Join Nadunudi News WhatsApp Group