Loksabha Election 2024: ದೇಶದ ಎಲ್ಲಾ ಬಡಜನರಿಗೆ ಆಸ್ತಿ ಹಂಚಿಕೆ ಮಾಡಲು ಕೇಂದ್ರದ ನಿರ್ಧಾರ, ನರೇಂದ್ರ ಮೋದಿ ಘೋಷಣೆ.

ದೇಶದ ಜನರಿಗೆ ಆಸ್ತಿ ಹಂಚಿಕೆ ಮಾಡುವ ಬಗ್ಗೆ ಘೋಷಣೆ ಮಾಡಿದ ನರೇಂದ್ರ ಮೋದಿ

Loksabha Election 2024 Latest News: ಲೋಕಸಭಾ ಚುನಾವಣೆಯ ಕಾರಣ ದೇಶದಲ್ಲಿ ಹಲವಾರು ಘೋಷಣೆಗಳು ಮೊಳಗುತ್ತಿವೆ. ರಾಜಕೀಯ ಪಕ್ಷಗಳು ಮುಂದಿನ 5 ವರ್ಷ ಕೇಂದ್ರದಲ್ಲಿ ಅಧಿಕಾರವನ್ನು ಪಡೆದುಕೊಳ್ಳಲು ಹೊಸ ರೀತಿಯಲ್ಲಿ ಪ್ರಯತ್ನಿಸುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಗ್ಯಾರಂಟಿ ಅಸ್ತ್ರವನ್ನು ಇದೀಗ ಲೋಕಸಭಾ ಚುನಾವಣೆಯಲ್ಲಿ ಕೂಡ ಬಳಸಲಾಗಿದೆ. ಈ ಕಾರಣಕ್ಕೆ ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಹಲವಾರು ಘೋಷಣೆಯನ್ನ ಹೊರಡಿಸಿದೆ. ಇನ್ನು ಕೇಂದ್ರದ ಮೋದಿ ಸರಕಾರ ಕೂಡ ಈ ಬಾರಿ ಗ್ಯಾರಂಟಿ ಬಾಣವನ್ನು ಜನರಿಗಾಗಿ ಸಿದ್ಧಪಡಿಸುತ್ತಿದೆ. ಈಗಾಗಲೇ ಸರ್ಕಾರ ಗ್ಯಾರಂಟಿಗಳ ಬಗ್ಗೆ ಘೋಷಣೆ ಕೂಡ ಹೊರಡಿಸಿದೆ.

Loksabha Election 2024 Latest News
Image Credit: Business-standard

ದೇಶದ ಎಲ್ಲಾ ಬಡಜನರಿಗೆ ಆಸ್ತಿ ಹಂಚಿಕೆ ಮಾಡಲು ಕೇಂದ್ರದ ನಿರ್ಧಾರ
ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರಿಗೆ ಮಾತ್ರವಲ್ಲದೆ ದೇಶದ ಎಲ್ಲ ಬಡವರಿಗೂ ಆಸ್ತಿ ಹಂಚಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಬಿಹಾರದ ಅರಾರಿಯಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ದೇಶದ ಸಂಪನ್ಮೂಲಗಳ ಮೇಲೆ ಎಲ್ಲಾ ಬಡವರಿಗೆ ಮೊದಲ ಹಕ್ಕಿದೆ. ಅವರು ಯಾವುದೇ ಧರ್ಮಕ್ಕೆ ಸೇರಿದವರಾಗಿರಬಹುದು ಎಂದರು.

ತಮ್ಮ ಮತ ಬ್ಯಾಂಕ್‌ ಗಾಗಿ ಭಾರತದ ಹಿಂದೂಗಳ ವಿರುದ್ಧ ಕಾಂಗ್ರೆಸ್ ಪಕ್ಷಪಾತ ತೋರಿದ್ದು ಹೇಗೆ ಎಂಬುದು ಇಂದು ಬಹಿರಂಗವಾಗಿದೆ. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಹಕ್ಕುಗಳನ್ನು ಕಸಿದುಕೊಳ್ಳುವ ಷಡ್ಯಂತ್ರದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಗುಡುಗಿದರು.

ಭಾರತವು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದರು. ಆದರೆ ಕಾಂಗ್ರೆಸ್ ಧಾರ್ಮಿಕ ಮೀಸಲಾತಿಗೆ ಒತ್ತಾಯಿಸುವ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನ ಕರ್ನಾಟಕದಲ್ಲಿ ಜಾರಿಯಲ್ಲಿರುವ ಮೀಸಲಾತಿ ಮಾದರಿಗೆ ಕನ್ನಡಿ ಹಿಡಿಯುತ್ತದೆ. ಅಲ್ಲಿ ಕಾಂಗ್ರೆಸ್ ದ್ರೋಹ ಮಾಡಿದೆ. ಕರ್ನಾಟಕದ ಎಲ್ಲಾ ಮುಸ್ಲಿಮರನ್ನು ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಒಬಿಸಿ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.

Join Nadunudi News WhatsApp Group

lok sabha election 2004
Image Credit: Aajtak

Join Nadunudi News WhatsApp Group