Modi in Dwarka: ಮೋದಿ ಅವರು ಸಮುದ್ರದ ಆಳಕ್ಕೆ ಹೋಗಿ ದ್ವಾರಕಾ ದರ್ಶನ ಮಾಡಿದ್ದು ಯಾಕೆ…? ಇಲ್ಲಿದೆ ಅಸಲಿ ಕಾರಣ

ನರೇಂದ್ರ ಮೋದಿ ದ್ವಾರಕಾ ದರ್ಶನ ಮಾಡಿರುವುದರ ಹಿಂದಿನ ಕಾರಣ ಏನು...? ಮುಂದಿನ ಯೋಜನೆ ಏನು

Reason For Narendra Modi Dwarka Visit: ನರೇಂದ್ರ ಮೋದಿ (Narendra Modi) ದೇಶಕಂಡ ಹೆಮ್ಮೆಯ ನಾಯಕ ಎಂದು ಹೇಳಬಹುದು. ಸತತ ಎರಡನೆಯ ಬಾರಿ ಭಾರತದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರ ಸಾಧನೆ ಸಾಕಷ್ಟು ಎಂದು ಹೇಳಬಹುದು. ಸಾಕಷ್ಟು ಹೊಸ ಹೊಸ ಯೋಜನೆ, ದೇಶದ ಸೈನ್ಯ ಬಲದ ವೃದ್ಧಿ ಸೇರಿದಂತೆ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನ ಮಾಡುತ್ತಿರುವ ನರೇಂದ್ರ ಮೋದಿ ಅವರು ವಿಶ್ವದ ಶಕ್ತಿಶಾಲಿ ನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು.

ಕೆಲವು ಸಮಯಗಳ ಹಿಂದೆ ಅಯೋಧ್ಯಾ ರಾಮನ ಮಂದಿರ ಉದ್ಘಾಟನೆ ಮಾಡಿ ಸಾಕಷ್ಟು ಸುದ್ದಿಯಾಗಿದ್ದ ನರೇಂದ್ರ ಮೋದಿ ಅವರು ಸಮುದ್ರದ ಆಳಕ್ಕೆ ಹೋಗಿ ಶ್ರೀಕೃಷ್ಣನ ದ್ವಾರಕಾ ದರ್ಶನವನ್ನ ಮಾಡಿದ್ದಾರೆ. ಇನ್ನು ನರೇಂದ್ರ ಮೋದಿಯವರು ದ್ವಾರಕಾ ದರ್ಶನ ಮಾಡಿದ್ದೆ ತಡ ದೇಶದಲ್ಲಿ ಸಾಕಷ್ಟು ಹೊಸ ಹೊಸ ಚರ್ಚೆಗಳು ಉದ್ಭವ ಆಗಿದೆ ಅಂತಾನೆ ಹೇಳಬಹುದು. ಹಾಗಾದರೆ ನರೇಂದ್ರ ಮೋದಿ ದ್ವಾರಕಾ ದರ್ಶನ ಮಾಡಿರುವುದರ ಹಿಂದೆ ಏನು ಕಾರಣ ಇರಬಹುದು ಅನ್ನುವುದರ ಬಗ್ಗೆ ನಾವೀಗ ತಿಳಿಯೋಣ.

Reason For Narendra Modi Dwarka Visit
Image Credit: ABP Live

ಕೆಲವು ಸಮಯದಲ್ಲಿ ಲಕ್ಷದ್ವೀಪ ಪ್ರವಾಸ ಮಾಡಿ ಸುದ್ದಿಯಾದ ಮೋದಿ
ಹೌದು ನರೇಂದ್ರ ಮೋದಿ ಅವರು ಕೆಲವು ಸಮಯಗಳ ಹಿಂದೆ ಲಕ್ಷ ದ್ವೀಪಕ್ಕೆ ಪ್ರವಾಸ ಮಾಡಿ ಅಲ್ಲಿದ್ದ ಸುಂದರ ತಾಣಗಳಗಳನ್ನ ವರ್ಣಿಸಿದ್ದರು. ಮೋದಿಯವರ ಲಕ್ಷ ದ್ವೀಪ ಪ್ರವಾಸ ಮಾಡಿದ ಬೆನ್ನಲ್ಲೇ ಮಾಲ್ಡಿವ್ಸ್ ಕೆಲವು ಗಣ್ಯರು ಮೋದಿಯವರನ್ನ ಟಿಕೆ ಮಾಡಿ ಸಮಸ್ಯೆಗೆ ಸಿಲುಕಿಕೊಂಡರು ಎಂದು ಹೇಳಬಹುದು. ಮೋದಿಯವರ ಲಕ್ಷದ್ವೀಪದ ಪ್ರವಾಸದ ಬೆನ್ನಲ್ಲೇ ಮಾಲ್ಡಿವ್ಸ್ ಗೆ ಹೋಗುವ ಭಾರತೀಯ ಸಂಖ್ಯೆ ಸಾಕಷ್ಟು ಕಡಿಮೆ ಎಂದು ಹೇಳಬಹುದು. ಸದ್ಯ ಲಕ್ಷದ್ವೀಪವನ್ನ ಅಭಿವೃದ್ಧಿ ಮಾಡಲಾಗುತ್ತಿದ್ದು ಮುಂದೊಂದು ದಿನ ಲಕ್ಷ ದ್ವೀಪ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣ ಆಗುವುದರಲ್ಲಿ ಎರಡು ಮಾತಿಲ್ಲ

ಸಮುದ್ರದ ಆಳಕ್ಕೆ ಹೋಗಿ ಕೃಷ್ಣನ ದ್ವಾರಕಾ ದರ್ಶನ ಮಾಡಿದ ಮೋದಿ
ಇದೀಗ ಅಯೋದ್ಯೆಯಲ್ಲಿ ರಾಮನ ದರ್ಶನ ಪಡೆದಿರುವ ಮೋದಿ ದ್ವಾರಕಕ್ಕೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನವನ್ನು ಪಡೆದಿದ್ದಾರೆ. ಆಳ ಸಮುದ್ರಕ್ಕೆ ಹೋಗಿ ಶ್ರೀಕೃಷ್ಣನ ದ್ವಾರಕೆಗೆ ಭೇಟಿ ನೀಡಿದರು. ಸಮುದ್ರದ ಅಡಿಯಲ್ಲಿರುವ ದ್ವಾರಕಾಗೆ ತೆರಳಿದ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಮಯದಲ್ಲಿ ನವಿಲು ಗರಿಗಳನ್ನು ಸಮುದ್ರಕ್ಕೆ ತೆಗೆದುಕೊಂಡು ಹೋಗಿ ಶ್ರೀಕೃಷ್ಣನಿಗೆ ಅರ್ಪಿಸಿದ್ದಾರೆ.

Narendra Modi Dwarka Visit
Image Credit: Indian Express

ಮೋದಿ ದ್ವಾರಕಾ ಪ್ರವಾಸ ಹಿಂದಿನ ಕಾರಣ ಏನಿರಬಹುದು
ಹೌದು ನರೇಂದ್ರ ಮೋದಿ ದ್ವಾರಕಾ ದರ್ಶನ ವಿಡಿಯೋ ಶೇರ್ ಮಾಡಿ ಆಧ್ಯಾತ್ಮಿಕ ಭವ್ಯತೆ ಮತ್ತು ಸಮಯಾತೀತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಆಳವಾದ ಸಂಪರ್ಕವನ್ನು ಅನುಭವಿಸಿದೆ. ಪ್ರಧಾನಿ ಮೋದಿಯವರು ತಮ್ಮ ದ್ವಾರಕಾ ಡೈವ್ ಅನ್ನು ‘ದೈವಿಕ ಅನುಭವ’ ಎಂದು ಕರೆದರು ಅವರು 2.32 ಕಿಲೋಮೀಟರ್ ವ್ಯಾಪಿಸಿರುವ ಸುದರ್ಶನ ಸೇತುವನ್ನು ಉದ್ಘಾಟಿಸಿದರು.

Join Nadunudi News WhatsApp Group

ಮುಂದಿನ ದಿನಗಳಲ್ಲಿ ಈ ಸೇತುವೆಯ ಮೂಲಕ ಜನರು ದ್ವಾರಕಾ ದರ್ಶನ ಮಾಡಬಹುದಾಗಿದೆ. ರಾಮ ಮಂದಿರದ ಬೆನ್ನಲ್ಲೇ ಈಗ ಜನರಿಗೆ ಶ್ರೀಕೃಷ್ಣನ ದ್ವಾರಕಾ ದರ್ಶನ ಮಾಡಿರುವ ದೊಡ್ಡ ಯೋಜನೆಯನ್ನ ನರೇಂದ್ರ ಮೋದಿ ಹಾಕಿಕೊಂಡಿದ್ದಾರೆ ಎಂದು ಹೇಳಬಹುದು.

ಇದು ದೇಶದಲ್ಲೇ ಅತಿ ಉದ್ದದ ಕೇಬಲ್ ತಂಗುವ ಸೇತುವೆಯಾಗಿದೆ ಎಂದು ವರದಿಯಾಗಿದೆ. ಪ್ರಧಾನಿಯವರು ತಮ್ಮ ಪ್ರವಾಸದ ಸಮಯದಲ್ಲಿ ದ್ವಾರಕಾಗೆ ಮೀಸಲಾದ 4150 ಕೋಟಿ ರೂ.ಗಳ ಯೋಜನೆಗಳಿಗೆ ಅಡಿಪಾಯ ಹಾಕಿದರು. ಮುಂದಿನ ದಿನಗಳಲ್ಲಿ ಈ ಸೇತುವೆಯ ಕೆಲಸ ಆರಂಭ ಆಗಲಿದ್ದು ಆದಷ್ಟು ಬೇಗ ಜನರಿಗೆ ಶ್ರೀಕೃಷ್ಣನ ದ್ವಾರಕಾ ದರ್ಶನ ಆಗಲಿದೆ ಎಂದು ಹೇಳಬಹುದು.

Join Nadunudi News WhatsApp Group