Snake Robot: ಇನ್ನೊಂದು ಗ್ರಹಕ್ಕೆ ಹಾವನ್ನ ಕಳುಹಿಸಲು ಮುಂದಾದ ನಾಸಾ, ಇದರ ಹಿಂದಿನ ಉದ್ದೇಶ ಏನು…?

ಮತ್ತೊಂದು ಸಾಧನೆ ಮಾಡಲು ಮುಂದಾದ ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ.

Nasa Snake Robot: ಇಡೀ ಜಗತ್ತೇ ಆಶ್ಚರ್ಯ ಪಡುವಂತೆ ಪ್ರಪಂಚದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಭಾರತದಲ್ಲಿ ಚಂದ್ರಯಾನವನ್ನು ಮಾಡಲಾಯಿತು. ಈ Chandraya 3 ಯಶಸ್ಸು ಭಾರತದ ಹೆಸರಿನಲ್ಲಿ ಹೊಸ ಇತಿಹಾಸವನ್ನು ಬರೆದಿದೆ.

ಅದೇ ರೀತಿ ಪ್ರಪಂಚದಲ್ಲಿ ಎಲ್ಲ ದೇಶದಲ್ಲೂ ಕೂಡ ಹೊಸ ಹೊಸ ಅನ್ವೇಷಣೆ ಬಗ್ಗೆ ಸದಾ ಯೋಚಿಸುತ್ತಿರುತ್ತದೆ. ಅದರಲ್ಲೂ ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ (Nasa) ಪ್ರತಿದಿನ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ.

National Aeronautics and Space Administration
Image Credit: Kannadaprabha

ಮತ್ತೊಂದು ಸಾಧನೆ ಮಾಡಲು ಮುಂದಾದ ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ
ಇದೀಗ ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಂದು ಸಾಧನೆ ಮಾಡಲು ಹೊರಟಿದೆ. ಪ್ರಸ್ತುತ ನಾಸಾ ಹಾವಿನ ಆಕಾರದ ರೋಬೋಟ್‌ಗಳನ್ನು ತಯಾರಿಸುವ ಮತ್ತು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ .ಪ್ರಮುಖವಾದ ವಿಷಯವೆಂದರೆ ಈ Snake Robot ಗಳು ಶನಿಯ ಒಂದು ಚಂದ್ರನ ಬಳಿಗೆ ಹೋಗಿ ಅಲ್ಲಿನ ಜೀವವನ್ನು ಪತ್ತೆ ಮಾಡುತ್ತವೆ.

Snake Robot
ಶನಿಯು 83 ಚಂದ್ರರನ್ನು ಹೊಂದಿದೆ. ಇವುಗಳಲ್ಲಿ ಎನ್ಸೆಲಾಡಸ್ ಎಂಬ ಹೆಸರಿನ ಮೇಲೆ ಜೀವಿಗಳಿರುವ ಸಾಧ್ಯತೆಯಿದೆ. ಈ ಚಂದ್ರನ ಮೇಲೆ ಸಂಶೋಧನೆ ಮಾಡಲು ವಿಜ್ಞಾನಿಗಳು ಈಗ ಹಾವಿನಂತೆ ಕಾಣುವ ರೋಬೋಟ್‌ ಗಳನ್ನು ತಯಾರಿಸುತ್ತಿದ್ದಾರೆ. ಆದರೆ ಅವರು ಇದನ್ನು ಕೇವಲ ತಂತ್ರಜ್ಞಾನದ ಕಾರಣದಿಂದ ಮಾಡುತ್ತಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಾವುಗಳು ಇತರ ಗ್ರಹಗಳಿಗೆ ಸಂಬಂಧಿಸಿವೆ ಎಂದು ಭಾವಿಸಿ ವಿಜ್ಞಾನಿಗಳು ಈ ರೀತಿ ಮಾಡಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

Snake Robot
Image Credit: Popularmechanics

Snake Robot ಹೇಗೆ ಕಾರ್ಯನಿರ್ವಹಿಸಲಿದೆ
ಈ ಗ್ರಹಕ್ಕಾಗಿ ವಿಶೇಷವಾಗಿ ಈ ಹಾವಿನ ರೋಬೋಟ್‌ ಗಳನ್ನು ರಚಿಸಿದ್ದಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ವಾಸ್ತವವಾಗಿ ಅಲ್ಲಿನ ರೀತಿಯ ಪರಿಸರದಲ್ಲಿ ಈ ರೋಬೋಟ್ ಉತ್ತಮ ಬಳಕೆಯನ್ನು ಸಾಬೀತುಪಡಿಸುತ್ತದೆ. ಈ ರೋಬೋಟ್‌ಗಳು ತುಂಬಾ ಫ್ಲೆಕ್ಸಿಬಲ್ ಆಗಿರುತ್ತವೆ ಮತ್ತು ಚಂದ್ರನ ಮೇಲ್ಮೈಯನ್ನು ಅಗೆಯಲು ಮತ್ತು ಭೂಗತಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Join Nadunudi News WhatsApp Group

Snake Robot ನ ವಿಶೇಷವೆಂದರೆ ಅದರ ಉದ್ದ. ಇದು ಸಾಮಾನ್ಯ ಹಾವು ಅಥವಾ ಎರೆಹುಳದಂತೆಯೇ ಇರುತ್ತದೆ. ಅಂದರೆ ಸುಮಾರು 10 ಸೆಂ.ಮೀ. ಉದ್ದವಾಗಿರುತ್ತದೆ. ನಾಸಾದ ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಇತರ ಗ್ರಹಗಳಿಗೂ ಇದೇ ರೀತಿಯ ಯೋಜನೆಗಳನ್ನು ಮಾಡುವ ಬಗ್ಗೆ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

Join Nadunudi News WhatsApp Group