Neeraj Chopra: ಇನ್ನೊಂದು ವಿಶ್ವದಾಖಲೆ ಮಾಡಿದ ನೀರಜ್ ಚೋಪ್ರಾ, ಡೈಮಂಡ್ ಗೆದ್ದ ನೀರಜ್.

ಇನ್ನೊಂದು ವಿಶ್ವ ದಾಖಲೆ ಮಾಡುವುದರ ಮೂಲಕ ಇಡೀ ಭಾರತವೇ ಹೆಮ್ಮೆ ಪಡುವ ಕೆಲಸವನ್ನ ಮಾಡಿದ್ದಾರೆ ನೀರಜ್ ಚೋಪ್ರಾ.

Neeraj Chopra Achievements DohaDL: ನೀರಜ್ ಚೋಪ್ರಾ (Neeraj Chopra) ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತರು ಮತ್ತು ಜಾವಲಿನ್ ಎಸೆತದಲ್ಲಿ ಡೈಮೆಂಡ್ ಲೀಗ್ ಚಾಂಪಿಯನ್ ಆಗಿದ್ದಾರೆ. ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಒಲಂಪಿಕ್ ಚಿನ್ನದ ಪದಕ ಗೆದ್ದ ಏಷ್ಯಾದ ಮೊದಲ ಅಥ್ಲೀಟ್ ಆಗಿದ್ದಾರೆ.

Diamond League champion Neeraj Chopra
Image Credit: timesnownews

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ
ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಮ್ಮ ಹೊಸ ಸೀಸನ್ ಗೆ ಉತ್ತಮ ಆರಂಭ ನೀಡಿದ್ದಾರೆ. ನೀರಜ್ ಚೋಪ್ರಾ ಶುಕ್ರವಾರ ದೊಹಾದಲ್ಲಿ ನಡೆದ ಡೈಮಂಡ್ ಲೀಗ್ ನಲ್ಲಿ ಜಾವೆಲಿನ್ ಅನ್ನು 88 .67 ಮೀಟರ್ ದೂರಕ್ಕೆ ಎಸೆಯುವ ಮೂಲಕ ದೋಹಾ ಡೈಮೆಂಡ್ ಲೀಗ್ 2023 ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಜಾವಲಿನ್ ಅನ್ನು ದೂರಕ್ಕೆ ಎಸೆಯುವಲ್ಲಿ ದೋಹಾ ಡೈಮೆಂಡ್ ಲೀಗ್ 2023 ಪ್ರಶಸ್ತಿ ಪಡೆದ ನೀರಜ್ ಚೋಪ್ರಾ
ದೋಹಾದ ಕತಾರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್ ಮೊದಲ ಪ್ರಯತ್ನದಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆದರು. ನೀರಜ್ ಅವರ ಈ ಮೊದಲ ಥ್ರೋ ಸ್ಪರ್ಧೆಯ ಅತ್ಯುತ್ತಮ ಎಸೆತವಾಗಿತ್ತು. ಆದರೆ, ಮತ್ತೊಮ್ಮೆ ನೀರಜ್ ಜಾವಲಿನ್‌ ಅನ್ನು ಇನ್ನೂ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಲಿಲ್ಲ. ಜಾವೆಲಿನ್ ಅನ್ನು 88.67 ಮೀಟರ್ ದೂರಕ್ಕೆ ಎಸೆಯುವ ಮೂಲಕ ದೋಹಾ ಡೈಮೆಂಡ್ ಲೀಗ್ 2023 ಪ್ರಶಸ್ತಿಯನ್ನು ಗೆದ್ದಿದ್ದಾರೆ.

Neeraj Chopra created another record by winning the Diamond League
Image Credit: indiatvnews

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚೆಕ್ ಆಟಗಾರ ಚಾಕೋಬ್ ವಡ್ಲೆಜ್ ಎರಡನೇ ಸ್ಥಾನ ಪಡೆದರು. ಗ್ರೆನಡಾದ ಆಯಾಂಡರ್ಸನ್ ಪೀಟರ್ಸ್ ಮೂರನೇ ಸ್ಥಾನ ಪಡೆದರು. ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನೀರಜ್ ಚೋಪ್ರಾ ಅವರನ್ನು ಸೋಲಿಸಿ ಆಂಡರ್ಸನ್ ಪೀಟರ್ಸ್ ಚಿನ್ನ ಗೆದ್ದಿದ್ದರು.

Join Nadunudi News WhatsApp Group

Join Nadunudi News WhatsApp Group