Neha: ನೇಹಾ ಪ್ರಕರಣದಲ್ಲಿ ಇನ್ನೊಂದು ತಿರುವು, ಕೃತ್ಯಕ್ಕೂ ಮೊದಲೇ ದೊಡ್ಡ ಸ್ಕೆಚ್ ಹಾಕಿದ್ದ ಫಯಾಜ್

ನೇಹಾ ಹತ್ಯಕ್ಕೂ ಮೊದಲೇ ದೊಡ್ಡ ಪ್ಲಾನ್ ಹಾಕಿಕೊಂಡಿದ್ದ ಫಯಾಜ್

Neha Case Latest Update: ಸದ್ಯ ರಾಜ್ಯದಲ್ಲಿ ನೇಹಾ ಹಿರೇಮಠ್ ಹ ತ್ಯೆಯ ಪ್ರಕರಣ ಸಾಕಷ್ಟು ತಿರುವು ಪಡೆಯುತ್ತಿದೆ. ನೇಹಾ ಸಾವಿಗೆ ನ್ಯಾಯಕ್ಕಾಗಿ ಸಾಕಷ್ಟು ಪ್ರತಿಭಟನೆ ಈಗಲೂ ನಡೆಯುತ್ತಿದೆ. ಆರೋಪಿ ಫಯಾಜ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಪೊಲೀಸರು ಫಯಾಜ್ ಬಳಿ ನೇಹಾ ಹ ತ್ಯೆಯ ಕೃತ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಫಯಾಜ್ ನೇಹಾಳ ಹ ತ್ಯೆಗೆ ಯಾವ ರೀತಿ ಪ್ಲಾನ್ ಹಾಕಿಕೊಂಡಿದ್ದ ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ. ನೇಹಾ ಹಿರೇಮಠ್ ಹ ತ್ಯೆಗೆ ಪ್ಲಾನ್ ಬಗ್ಗೆ ಫಯಾಜ್ ಸಂಪೂರ್ಣ ಮಾಹಿತಿ ನೀಡಿದ್ದಾನೆ.

Neha Murder Latest Update
Image Credit: India Today

ನೇಹಾ ಪ್ರಕರಣದಲ್ಲಿ ಇನ್ನೊಂದು ತಿರುವು
ಕಳೆದ ಏಪ್ರಿಲ್ 18ರಂದು ಫಯಾಜ್ ನೇಹಾ ಹಿರೇಮಠ ಅನ್ನು ಭೀಕರ ರೀತಿಯಲ್ಲಿ ಕೊಂದಿದ್ದ. ಆದರೆ ಹ ತ್ಯೆಗೆ 5 ದಿನಗಳ ಮೊದಲು ಚಾಕು ಖರೀದಿಸಿದ್ದರು. ಧಾರವಾಡದಲ್ಲಿ ನೇಹಾ ಕೊ ಲೆ ಮಾಡುವ ಉದ್ದೇಶದಿಂದ ಚಾಕು ಖರೀದಿಸಿ ಬ್ಯಾಗ್ ನಲ್ಲಿಟ್ಟಿದ್ದನು. ನನಗೆ ಸಿಗದ ನೇಹಾ ಮತ್ಯಾರಿಗೂ ಸಿಗಬಾರದು ಎನ್ನುವ ಹಗೆ ಫಯಾಜ್ ನಲ್ಲಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಆರೋಪಿ ಫಯಾಜ್ ನೇಹಾಳ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಮೊದಲೇ ಸ್ಕೆಚ್ ಹಾಕಿದಂತೆ ಏಪ್ರಿಲ್ 18ರಂದು ಎರಡೂವರೆ ಗಂಟೆ ಕಾದು ಕೊ ಲೆ ಮಾಡಿದ್ದಾನೆ. ಕೊ ಲೆ ಮಾಡಲು ನಿರ್ಧರಿಸಿದ್ದ ಫಯಾಜ್ ತನ್ನ ತಾಯಿಯ ಸ್ಕೂಟಿ ತೆಗೆದುಕೊಂಡು ಧಾರವಾಡಕ್ಕೆ ಬಂದಿದ್ದಾನೆ. ಪರೀಕ್ಷಾ ಕೇಂದ್ರದ ಮುಂದೆ ಕಾದು ನಿಂತಿದ್ದ ಆರೋಪಿ ಫಯಾಜ್ ನೇಹಾ ಹಿರೇಮಠ್ ಅವರನ್ನು ಕೊಲೆ ಮಾಡಿದ್ದಾನೆ.

Neha Murder Latest Update
Image Credit: Enavabharat

ಕೃತ್ಯಕ್ಕೂ ಮೊದಲೇ ದೊಡ್ಡ ಸ್ಕೆಚ್ ಹಾಕಿದ್ದ ಫಯಾಜ್
ನೇಹಾ ಹ ತ್ಯೆಗೂ ಮುನ್ನ ಫಯಾಜ್ ಸ್ಕೂಟಿಯ ಹ್ಯಾಂಡಲ್ ಅನ್ನು ಅನ್‌ ಲಾಕ್ ಮಾಡಿಯೇ ಬಿಟ್ಟಿದ್ದ. ಏಕೆಂದರೆ ಕೊಲೆ ಮಾಡಿದ ನಂತರ ತಪ್ಪಿಸಿಕೊಳ್ಳುವ ಸಲುವಾಗಿ ಹ್ಯಾಂಡಲ್ ಅನ್ನು ಹಾಗೆಯೇ ಬಿಟ್ಟಿದ್ದ. ಕಾಲೇಜು ಆವರಣದಿಂದ ಪರಾರಿಯಾಗೋಕೆ ರಸ್ತೆಗೆ ಮುಖಮಾಡಿ ಸ್ಕೂಟಿಯನ್ನು ನಿಲ್ಲಿಸಿದ. ಆದರೆ ಅಲ್ಲಿಗೆ ತಲುಪಲು ಸಾಧ್ಯವಾಗದಿದ್ದಾಗ ಮುಖ್ಯದ್ವಾರದಿಂದ ಓಡಿಹೋಗಿದ್ದಾನೆ. 5 ದಿನಗಳ ಹಿಂದೆ ಸ್ಕೆಚ್ ಹಾಕಿದ್ದ ಫಯಾಜ್ ನೇಹಾ ಹಿರೇಮಠಳನ್ನು ಬರ್ಬರವಾಗಿ ಹ ತ್ಯೆ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Join Nadunudi News WhatsApp Group

ಆರೋಪಿ ಫಯಾಜ್ ನನ್ನು ವಶಕ್ಕೆ ಪಡೆದಿರುವ ಸಿಐಡಿ ಪೊಲೀಸರು ನಿನ್ನೆಯಷ್ಟೇ ನೇಹಾ ಹ ತ್ಯೆಯಾದ ಸ್ಥಳವನ್ನು ಶೋಧಿಸಿದ್ದಾರೆ. ಸಿಐಡಿ ಪೊಲೀಸರು ಫಯಾಜ್ ಅವರನ್ನು ಅಪರಾಧ ಸ್ಥಳಕ್ಕೆ ಕರೆದೊಯ್ದು ಭಾರೀ ಪೊಲೀಸ್ ಭದ್ರತೆಯಲ್ಲಿ ಸ್ಥಳವನ್ನು ಭದ್ರಪಡಿಸಿದ್ದಾರೆ. ಸದ್ಯ ಧಾರವಾಡ ಜೈಲಿನಲ್ಲಿದ್ದ ಫಯಾಜ್ ನನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬದುಕಿ ಬಾಳಬೇಕಾದ ನೇಹಾಳನ್ನು ಹ ತ್ಯೆಗೈದ ಫಯಾಜ್ ಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಾಕಷ್ಟು ಪ್ರತಿಭಟನೆ ನಡೆಯುತ್ತಲೇ ಇದೆ. ಫಯಾಜ್ ಗೆ ನ್ಯಾಯಾಲಯ ಯಾವ ಶಿಕ್ಷೆಯನ್ನು ನೀಡುತ್ತದೆ ಎನ್ನುವುದು ಕಾದು ನೋಡಬೇಕಿದೆ.

neha hiremath death case
Image Credit: Kannadaprabha

Join Nadunudi News WhatsApp Group