Actor Prem: ಹೆಂಡತಿ ಮಾಡಿದ ತ್ಯಾಗದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ ನಟ ಪ್ರೇಮ್, ಪ್ರೇಮ್ ಗೆ ತಾಯಿಯಾದ ಹೆಂಡತಿ

ಪತ್ನಿಯ ತ್ಯಾಗವನ್ನು ನೆನೆದು ಕಣ್ಣೀರು ಹಾಕಿದ ನೆನಪಿರಲಿ ಪ್ರೇಮ್,

Actor Prem Emotion About His Wife: ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ರಿಯಾಲಿಟಿ ಶೋ ಗಳುಪ್ರಸಾರವಾಗುತ್ತಿದೆ. ವಾರಾಂತ್ಯದಲ್ಲಿ ವೀಕ್ಷಕರನ್ನು ಮನೋರಂಜಿಸಲು ವಿವಿಧ ಕಾರ್ಯಗಳು ಪ್ರಸವಾಗುತ್ತದೆ. ಜೀ ವಾಹಿನಿಯಲ್ಲಿ ಪ್ರಸ್ತುತ Jodi Number 1 ಸೀಸನ್ 2 ನಡೆಯುತ್ತಿದೆ. ಈ ಕಾರ್ಯಕ್ರಯವು ಅತಿ ಹೆಚ್ಚು ಪ್ರೇಕ್ಷರನ್ನು ಪಡೆದುಕೊಂಡಿದೆ ಎನ್ನಬಹುದು. ದಂಪತಿಗಳ ಪ್ರೀತಿ, ಕಾಳಜಿ, ಆಟ ಎಲ್ಲವನ್ನು ಕೂಡ ನಾವು ಈ ಕಾರ್ಯಮದಲ್ಲಿ ನೋಡಬಹುದು.

Actor Prem Emotion
Image Credit: Vijay Karnataka

ಜೋಡಿ ನಂಬರ್ ಒನ್ ವೇದಿಕೆಯಲ್ಲಿ ಕಣ್ಣೀರುಹಾಕಿದ ಪ್ರೇಮ್
ಇನ್ನು ಜೋಡಿ ನಂಬರ್ 1 ಶೋ ನಲ್ಲಿ ನೆನಪಿರಲಿ ಪ್ರೇಮ್ ಹಾಗೂ ಮಾಳವಿಕಾ ಅವಿನಾಶ್ ಅವರು ತೀರ್ಪುಗಾರರಾಗಿ ಕಾರ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಸದ್ಯ ಈ ವಾರದ ಸಂಚಿಕೆಯಲ್ಲಿ ಜೋಡಿ ನಂಬರ್ ಒನ್ ವೇದಿಕೆಯಲ್ಲಿ ಪ್ರೇಮ್ ಅವರ ದಾಂಪತ್ಯ ಜೀವನದ ಬಗ್ಗೆ ಮಾತುಕತೆ ನಡೆಯುತ್ತಿದೆ. ತಮ್ಮ ದಾಂಪತ್ಯ ಜೀವನದ ನೋವು ನಲಿವುಗಳನ್ನು ನೆನಪಿಸಿಕೊಂಡು ಪ್ರೇಮ್ ಅವರು ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಪ್ರೇಮ್ ಅವರ ಜೀವನದ ಕಷ್ಟ ಕೇಳಿ ವೀಕ್ಷಕರು ಕಣ್ಣಂಚಿನಲ್ಲಿ ನೀರು ತರಿಸಿಕೊಂಡಿದ್ದಾರೆ ಎನ್ನಬಹುದು.

ಸಾಲ ತೀರಿಸಲು ಹೆಂಡತಿ ತಾಳಿ ಅಡ ಇಟ್ಟಿದ್ರಂತೆ ಪ್ರೇಮ್..!
ಕನ್ನಡ ಸ್ಟಾರ್ ನಟರಾದ ಪ್ರೇಮ್ ಅವರು ಜೋಡಿ ನಂಬರ್ ಒನ್ ವೇದಿಕೆಯಲ್ಲಿ ತಮ್ಮ ಪತ್ನಿ ಜ್ಯೋತಿ ಅವರ ತ್ಯಾಗವನ್ನು ನೆನೆದು ಭಾವುಕರಾಗಿದ್ದಾರೆ. “ಸಾಕಷ್ಟು ಸಾಲ ಮಾಡಿಕೊಂಡಿದ್ದೆ. ಸಾಲ ತೀರಿಸಲು ತಾಳಿ ತೆಗೆದುಕೊಟ್ಟರು. ನನಗೆ ನಾನ್ ವೆಜ್ ಕೊಡಿಸಲು ಪ್ರತಿ ವಾರ ಓವರ್ ಟೈಮ್ ಕೆಲಸ ಮಾಡುತ್ತಿದ್ದರು. ಫೋನ್ ಮಾಡಲು ಒಂದು ರೂಪಾಯಿಯೂ ಇರಲಿಲ್ಲ. ಈಕೆ ಹೆಂಡತಿಯಾಗಿ ಬಂದವಳಲ್ಲ ತಾಯಿಯಾಗಿ ಬಂದಳು” ಎಂದು ಪ್ರೇಮ್ ತನ್ನ ಪತ್ನಿಯ ತ್ಯಾಗವನ್ನು ನೆನೆದು ಕಣ್ಣೀರಾಕಿದ್ದಾರೆ.

Nenapirali Prem About Wife Jyothi Sacrifice
Image Credit: Karnataka News

ಪ್ರೇಮ್ ಮತ್ತು ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಮನೆಯವರ ವಿರೋಧದ ನಡುವೆ ಈ ಇಬ್ಬರು ಮದುವೆಯಾಗಿದ್ದರು. ಕಳೆದ ವರ್ಷ ಮೇ ತಿಂಗಳಿನಲ್ಲಿ ತಮ್ಮ ಪ್ರೀತಿಗೆ 25 ವರ್ಷ ತುಂಬಿದಾಗ ಪ್ರೇಮ್ ತಮ್ಮ ದಾಂಪತ್ಯ ಜೀವನದ ನೆನಪುಗಳನ್ನು ನೆನಪಿಸಿಕೊಂಡಿದ್ದರು. ಪತ್ನಿ ಜ್ಯೋತಿ ಅವರ ಜೊತೆ ಬಾಳಿಗೆ ಪ್ರಯಾಣ ಬೆಳಿಸಿ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಪ್ರೇಮ್ ಹಾಗೂ ಜ್ಯೋತಿ ಅವರ ಪ್ರೀತಿಯನ್ನು ಎಲ್ಲರು ಕೂಡ ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group