Bajaj CNG: ಕಾರ್ ಜೊತೆಗೆ ಬಂತು ಬಜಾಜ್ CNG ಬೈಕ್, ಕಡಿಮೆ ಬೆಲೆ ಮತ್ತು ದಿನಪೂರ್ತಿ ಓಡಿಸಿದರು ನಿಲ್ಲದ ಮೈಲೇಜ್.

BAJAJ ಇದೀಗ ತನ್ನ ಮೊದಲ CNG ಚಾಲಿತ ಬೈಕ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

New Bajaj CNG Bike: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ Petrol, Diesel ಚಾಲಿತ ವಾಹನಗಳ ಬೇಡಿಕೆ ಕಡಿಮೆ ಆಗಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ ತೈಲ ಬೆಲೆಯ ಏರಿಕೆಯ ಕಾರಣದಿಂದಾಗಿ ಇಂಧನ ಚಾಲಿತ ವಾಹನಗಳ ಮಾರಾಟ ಕಡಿಮೆ ಆಗುತ್ತಿದೆ.

ಇನ್ನು ಇಂಧನ ಚಾಲಿತ ವಾಹನಗಳ ಬೇಡಿಕೆ ಕಡಿಮೆಯಾಗಿ ಪ್ರಸ್ತುತ Electric ವಾಹನಗಳ ಬೇಡಿಕೆ ಹೆಚ್ಚುತ್ತಿದೆ. Electric ಹಾಗೂ CNG ಚಾಲಿತ ವಾಹನಗಳು ಮಾರುಕಟ್ಟೆಯಲ್ಲಿ ಹೆಚ್ಚುತ್ತಿವೆ. ಇನ್ನು Electric ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಅದರ ಬೆಲೆ ಕೊಂಚ ಅಧಿಕವಾಗಿದೆ ಎನ್ನಬಹುದು.

First CNG Bike
Image Credit: Other Source

ಮೊದಲ CNG ಚಾಲಿತ ಬೈಕ್ ಪರಿಚಯಿಸಲಿದೆ BAJAJ
ಇನ್ನು Electric ವಾಹನಗಳ ಜೊತೆ CNG ಚಾಲಿತ ವಾಹನಗಳು ಕೂಡ ಬೇಡಿಕೆ ಪಡೆದುಕೊಂಡಿದೆ. ಇನ್ನು ಕಾರ್ ಹಾಗೂ ಬೈಕ್ ಗಳು Electric ರೂಪಾಂತರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಯಿದೆ. ಆದರೆ CNG ಚಾಲಿತ ಕಾರ್ ಗಳು ಮಾತ್ರ ಇಲ್ಲಿಯವರೆಗೂ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿತ್ತು. ಆದರೆ ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ BAJAJ ಇದೀಗ ತನ್ನ ಮೊದಲ CNG ಚಾಲಿತ ಬೈಕ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ CNG ಚಾಲಿತ ಬೈಕ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕಾರ್ ಜೊತೆಗೆ ಮಾರುಕಟ್ಟೆಗೆ ಬರಲಿದೆ ಬಜಾಜ್ CNG ಬೈಕ್
ಬಜಾಜ್ ನಿರ್ದೇಶಕ ರಾಜೀವ್ ಅವರು ಕಂಪನಿಯು ಶೀಘ್ರದಲ್ಲೇ ಅಗ್ಗದ CNG ಚಾಲಿತ ಮೋಟಾರ್‌ ಸೈಕಲ್ ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಜಾಜ್ ಬಿಡುಗಡೆ ಮಾಡಲು ನಿರ್ಧರಿಸಿರುವ CNG ಬೈಕ್ ಬಿಡುಗಡೆ ಯಶಸ್ವಿಯಾದರೆ ಜಗತ್ತಿನಲ್ಲೇ ಮೊದಲ CNG ಚಾಲಿತ ಬೈಕ್ ಬಿಡುಗಡೆ ಮಾಡಿದ ಹೆಗ್ಗಳಿಕೆಯನ್ನು BAJAJ ಪಡೆಯಲಿದೆ. Petrol , Electric ಮಾದರಿಗಳಿಗೆ ಹೋಲಿಸಿದರೆ CNG ಚಾಲಿತ ವಾಹನಗಳು ಅಗ್ಗದ ಬೆಲೆಯಲ್ಲಿ ಲಭ್ಯವಾಗಬಹುದು.

New Bajaj CNG Bike
Image Credit: Aajtak

ಇತ್ತೀಚಿಗೆ ಕೇಂದ್ರ ಸರ್ಕಾರ ದೇಶದಲ್ಲಿನ ವಾಯುಮಾಲಿನ್ಯವನ್ನು ತಡೆಗಟ್ಟಲು ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಇಳಗಾಗಲೇ ದೇಶದಲ್ಲಿ Ethanal ಚಾಲಿತ ವಾಹನಗಳ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಇದೀಗ CNG ಚಾಲಿತ ಬೈಕ್ ಬಿಡುಗಡೆಯ ಬಗ್ಗೆ ಸುದ್ದಿ ಹರಿದಾಡುತ್ತಿದೆ.

Join Nadunudi News WhatsApp Group

ಇನ್ನು ಭಾರತೀಯ ಆಟೋ ವಲಯದಲ್ಲಿ ಶಿಘ್ರದಲ್ಲೇ ಬಜಾಜ್ CNG ಬೈಕ್ ಪ್ರವೇಶಿಸಲಿದೆ. ಕಂಪನಿಯು ಬಜಾಜ್ CNG ಬೈಕ್ ತಯಾರಿಕೆಯಲ್ಲಿ ತೊಡಗಿಕೊಂಡಿದೆ ಎಂದು ಬಜಾಜ್ ನಿರ್ದೇಶಕ ರಾಜೀವ್ ಬಜಾಜ್ ಅವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group