Railway Rules 2023: ರೈಲಿನಲ್ಲಿ ಪ್ರಯಾಣ ಮಾಡುವ ಜನರಿಗೆ ಹೊಸ ನಿಯಮ, ನಿಯಮದಲ್ಲಿ ಬದಲಾವಣೆ.

ರೈಲಿನಲ್ಲಿ ಪ್ರಯಾಣ ಮಾಡುವ ಅಂಗವಿಕಲರಿಗೆ ಮತ್ತು ವಿಕಲ ಚೇತನರಿಗೆ ಹೊಸ ನಿಯಮ.

Indian Railway Passengers: ಇತ್ತೀಚಿನ ದಿನಗಳಲ್ಲಿ ರೈಲ್ವೆ ನಿಯಮದಲ್ಲಿ (Railway Rule) ಬಾರಿ ಬದಲಾವಣೆಗಳು ಆಗಿವೆ. ಹೊಸ ನಿಯಮಗಳನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತಲೇ ಇದೆ. ಹೊಸ ನಿಯಮಗಳ ಜೊತೆಗೆ ಪ್ರಯಾಣಿಕ ಅನುಕೂಲಕ್ಕಾಗಿ ಹೊಸ ಹೊಸ ಸೌಲಭ್ಯವನ್ನು ಜಾರಿಗೊಳಿಸುತ್ತಿದೆ. ಇದೀಗ ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ರೈಲ್ವೆ ಇಲಾಖೆಯ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Indian Railway Passengers
Image Source: India Today

ದೈಹಿಕ ವಿಕಲ ಚೇತನರಿಗೆ ಹೊಸ ಸೌಲಭ್ಯ
ಸಾಮಾನ್ಯವಾಗಿ ದೂರದ ಪ್ರಯಾಣ ಮಾಡುವವರು ರೈಲಿನ ಪ್ರಯಾಣವನ್ನು ಬಯಸುತ್ತಾರೆ. ರೈಲಿನ ಪ್ರಯಾಣವು ಆರಾಮದಾಯಕ ಹಾಗೂ ಸೂಕರಕ್ಷಿತವಾಗಿರುತ್ತದೆ. ಇನ್ನು ರೈಲಿನಲ್ಲಿ ಹೆಚ್ಚಾಗಿ ದೈಹಿಕ ವಿಕಲಚೇತನರು (Physically Disabled Person) ಪ್ರಯಾಣಿಸುತ್ತಾರೆ.

ಭಾರತೀಯ ರೈಲ್ವೆ ಇಲಾಖೆ ತಮ್ಮ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ. ಇದೀಗ ದೈಹಿಕ ವಿಕಲ ಚೇತನರಿಗೆ ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ನೀಡಿದೆ.

Indian Railway Passengers
Image Source: India Today

ದೈಹಿಕ ವಿಕಲಚೇತನರಿಗಾಗಿ ಲೋವರ್ ಬರ್ತ್ ಸೌಲಭ್ಯ
ದೈಹಿಕ ವಿಕಲ ಚೇತನರ ಪ್ರಯಾಣದ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಹೊಸ ಸೌಲಭ್ಯವನ್ನು ಒದಗಿಸಲಿದೆ. ಮೆಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವ ದೈಹಿಕ ವಿಕಲಚೇತನರಿಗೆ ಲೋವರ್ ಬರ್ತ್ (Lower Berth) ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಸ್ಲೀಪರ್ ಕ್ಲಾಸ್ ನಲ್ಲಿ ನಾಲ್ಕು ಆಸನಗಳು, ಎಸಿ 3 ಕಂಪಾರ್ಟ್ ಮೆಂಟ್ ನಲ್ಲಿ ಎರಡು ಆಸನಗಳು, ಎಸಿ 3 ವಿಭಾಗದಲ್ಲಿ ಎರಡು ಆಸನಗಳನ್ನು ದೈಹಿಕ ವಿಕಲಚೇತನರಿಗೆ ಮೀಸಲಿಡಬೇಕು ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಗರ್ಭಿಣಿಯರು, ಹಿರಿಯರು, ಮಹಿಳೆರಿಗೂ ಈ ಸೌಲಭ್ಯ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Join Nadunudi News WhatsApp Group

Indian Railway Passengers
Image Source: India Today

Join Nadunudi News WhatsApp Group