Property Registration: ಸ್ವಂತ ಆಸ್ತಿ ಇದ್ದವರು ಇನ್ಮುಂದೆ ಮನೆಯಲ್ಲಿ ಈ ಕೆಲಸ ಮಾಡಬಹುದು, ಸರ್ಕಾರದ ಇನ್ನೊಂದು ಯೋಜನೆ ಜಾರಿ

ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರದ ಹೊಸ ಯೋಜನೆ

New Facility For Property Registration: ಸದ್ಯ ದೇಶದಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ಸರ್ಕಾರ ಸಾಕಷ್ಟು ಬದಲಾವಣೆಯನ್ನು ತಂದಿದೆ. ಇತ್ತೀಚೆಗಂತೂ ದೇಶದಲ್ಲಿ ಆಸ್ತಿ ನೋಂದಣಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಫ್ರಾಡ್ ನಡೆಯುತ್ತಿದೆ.

ಇನ್ನು ವಂಚನೆಯ ತಡೆಗಾಗಿಯೇ ಸರ್ಕಾರ ಆಸ್ತಿ ನೋಂದಾಣಿ ನಿಯಮವನ್ನು ಬದಲಿಸುತ್ತಿದೆ ಏನಾದರೆ ತಪ್ಪಾಗಲಾರದು. ಸದ್ಯ ಸ್ವಂತ ಆಸ್ತಿ ಇದ್ದವರಿಗೆ ಸರ್ಕಾರ ಹೊಸ ಸೇವೆಯನ್ನು ನೀಡಲು ನಿರ್ಧರಿಸಿದೆ. ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.

Property Registration Latest News Update
Image Credit: Blogs Assetscan

ಸ್ವಂತ ಆಸ್ತಿ ಇದ್ದವರು ಇನ್ಮುಂದೆ ಮನೆಯಲ್ಲಿ ಈ ಕೆಲಸ ಮಾಡಬಹುದು
ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸೇವೆಯನ್ನು ಸರಳ ಮತ್ತು ಜನಸ್ನೇಹಿಯಾಗಿಸುವ ಉದ್ದೇಶದಿಂದ ಸ್ಟ್ಯಾಂಪ್ ತಿದ್ದುಪಡಿ ವಿದೇಯಕ-2024 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಬುಧವಾರ ವಿಧಾನಸಭೆಯಲ್ಲಿ Stamp ತಿದ್ದುಪಡಿ ವಿದೇಯಕ-2024 ಮಂಡಿಸಿ ಮಾತನಾಡಿದ ಅವರು ನೋಂದಣಿ ಕಚೇರಿಗಳಲ್ಲಿ ಜನಸಂದಣಿ ನಿಯಂತ್ರಿಸುವ ನಿಟ್ಟಿನಲ್ಲಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. ಮಾರಾಟಗಾರ ಮತ್ತು ಖರೀದಿದಾರರ ಉಪಸ್ಥಿತಿ ಇಲ್ಲದೆ ಸ್ಥಳದಲ್ಲೇ ತಾಂತ್ರಿಕವಾಗಿ ಆಸ್ತಿಯನ್ನು ನೋಂದಾಯಿಸಲು ವಿದೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ Krishna Byre Gowda ಅವರು ಹೇಳಿಕೆ ನೀಡಿದ್ದಾರೆ.

New Facility For Property Registration
Image Credit: Roofandfloor

ಸರ್ಕಾರದ ಇನ್ನೊಂದು ಯೋಜನೆ ಜಾರಿ
ಈ ಹಿಂದೆ ಉಪನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರ ಹಾಜರಾತಿ ಅತ್ಯಗತ್ಯವಾಗಿತ್ತು.ಇದರಿಂದ ಸರಕಾರಿ ಕಚೇರಿಯಲ್ಲಿ ಜನಜಂಗುಳಿ ಇತ್ತು. ಎಲ್ಲರಿಗೂ ಮೂಲ ಸೌಕರ್ಯ ಕಲ್ಪಿಸಲು ಅಸಾಧ್ಯವಾಗಿತ್ತು. ಹೀಗಾಗಿ ಜನ ಸಾಮಾನ್ಯರು ಅನವಶ್ಯಕವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಓಡಾಡುವುದನ್ನು ತಪ್ಪಿಸಲು ತಾಂತ್ರಿಕ ನೋಂದಣಿ ಆರಂಭಿಸಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಕರ್ನಾಟಕ ಹೌಸಿಂಗ್ ಬೋರ್ಡ್, ಸ್ಲಂ ಬೋರ್ಡ್ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ ಗಳಂತಹ ವಿಶ್ವಾಸಾರ್ಹ ಮೂಲಗಳ ಸಹಾಯದಿಂದ ನಾಗರಿಕರು ತಾಂತ್ರಿಕವಾಗಿ ತಮ್ಮ ಆಸ್ತಿಯನ್ನು ನೋಂದಾಯಿಸಿಕೊಳ್ಳಬಹುದು ಎಂದಿದ್ದಾರೆ.

Join Nadunudi News WhatsApp Group

Join Nadunudi News WhatsApp Group