Petrol Bunk: ಇನ್ನುಮುಂದೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಜೊತೆಗೆ ಸಿಗಲಿದೆ ಈ ಎಲ್ಲ ವಸ್ತುಗಳು.

ಇನ್ನುಮುಂದೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಡೀಸೆಲ್ ಜೊತೆಗೆ ಮಕ್ಕಳ ಆಟಿಕೆಯ ವಸ್ತುಗಳು ಕೂಡ ಸಿಗಲಿದೆ

New Facilities In Petrol Bunk: ದೇಶದಾದ್ಯಂತ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿವಿಧ ಮಾದರಿಯ ವಾಹನಗಳು ಮಾರುಕಟ್ಟೆಗೆ ಬಂದು ಜನರನ್ನು ಆಕರ್ಷಿಸುತ್ತಲೇ ಇವೆ. ಇನ್ನು ವಾಹನಗಳಿಗೆ ಪೆಟ್ರೋಲ್ (Petrol) ಅಥವಾ ಡೀಸೆಲ್ ಬಳಸುವುದು ತಿಳಿದಿರುವ ವಿಷಯ. ದೇಶದಲ್ಲಿ ಅದೆಷ್ಟೋ ಸಾವಿರ ಪೆಟ್ರೋಲ್ ಬಂಕ್ ಗಳ ವ್ಯವಸ್ಥೆ ಇದೆ.

ಇನ್ನು ಕೆಲವು ಪೆಟ್ರೋಲ್ ಬಂಕ್ ಗಳಲ್ಲಿ ವಿಶೇಷ ಸೌಲಭ್ಯ ಕೂಡ ಇದೆ. ಇದೀಗ ತಿಳಿದು ಬಂದ ಮಾಹಿತಿಯ ಪ್ರಕಾರ, ಪೆಟ್ರೋಲ್ ಬಂಕ್ ನಲ್ಲಿ ಇನ್ನುಮುಂದೆ ಹೊಸ ಸೌಲಭ್ಯ ಸಿಗಲಿದೆ. ಈ ಹೊಸ ಸೌಲಭ್ಯದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

New Facilities In Petrol Bunk
Image Source: News18

ಪೆಟ್ರೋಲ್ ಬಂಕ್ ನಲ್ಲಿ ಹೊಸ ಸೌಲಭ್ಯ
ಕೆಲವು ಪೆಟ್ರೋಲ್ ಬಂಕ್ ಗಳು ಹೈಫೈ ಆಗಿರುತ್ತದೆ. ನಿಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಲು ಪೆಟ್ರೋಲ್ ಬಂಕ್ ಗಳಿಗೆ ಈಗಾಗಲೇ ನೀವು ಭೇಟಿ ನೀಡಿರುತ್ತೀರಿ. ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್, ಡೀಸೆಲ್, ಟೈರ್ ಏರ್ ಪ್ರೆಶರ್ ಹಾಗೆ ಶೌಚಾಲಯದ ಸೌಲಭ್ಯಗಳು ಇರುತ್ತದೆ. ಇನ್ನುಮುಂದೆ ನೀವು ಪೆಟ್ರೋಲ್ ಬಂಕ್ ನಲ್ಲಿ ಈ ಹೊಸ ಸೌಲಭ್ಯವನ್ನು ಕೂಡ ಪಡೆಯಬಹುದು.

New Facilities In Petrol Bunk
Image Source: India Today

ಇನ್ನುಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಆಟಿಕೆ ಅಂಗಡಿಗಳ ವ್ಯವಸ್ಥೆ
ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಪೆಟ್ರೋಲ್ ಬಂಕ್ ಗಳಲ್ಲಿ ಆಟಿಕೆ ಅಂಗಡಿಗಳ ತೆರೆಯುವ ಬಗ್ಗೆ ಮಾಹತಿ ನೀಡಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL ) ಪೆಟ್ರೋಲ್ ಬಂಕ್ ಗಳಲ್ಲಿ ಆಟಿಕೆ ಅಂಗಡಿಗಳನ್ನು ತೆರೆಯಲು ಸ್ಥಳಾವಕಾಶವನ್ನು ಒದಗಿಸಲು ಸ್ಟಾರ್ಟ್ ಅಪ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈಗಾಗಲೇ ಚಂಡೀಗಢ, ಮೊಹಾಲಿ ಮತ್ತು ಪಂಚಕುಲದಲ್ಲಿ ಮೊದಲ 5 ಅರ್ಬನ್ ಟಾಟ್ಸ್ ಸ್ಟೋರ್ ಗಳನ್ನೂ ಪ್ರಾರಂಭಿಸಲಾಗಿದೆ. ದೇಶದಾದ್ಯಂತ ಈ ವ್ಯವಸ್ಥೆಯನ್ನು ವಿಸ್ತರಿಸಲು ಯೋಜನೆ ಹೂಡಲಾಗಿದೆ. ನಿಮ್ಮ ಮಕ್ಕಳನ್ನು ಪೆಟ್ರೋಲ್ ಬಂಕ್ ಗೆ ಕರೆದುಕೊಂಡು ಹೋದಾಗ ಅವರಿಗೆ ಆಟಿಕೆಗಳನ್ನು ಕೊಡಿಸುವ ಅನಿವಾರ್ಯ ಇನ್ನುಮುಂದೆ ಬರುತ್ತದೆ.

Join Nadunudi News WhatsApp Group

New Facilities In Petrol Bunk
Image Source: India Today

Join Nadunudi News WhatsApp Group