Swift 2024: ಹೊಸ ತಂತ್ರಜ್ಞಾನ ಮತ್ತು ಹೊಸ ಫೀಚರ್, 2024 ರ ಸ್ವಿಫ್ಟ್ ಕಾರಿಗೆ ಈಗಲೇ ಶುರುವಾಗಿದೆ ಡಿಮ್ಯಾಂಡ್

ಹೊಂಸ ತಂತ್ರಜ್ಞಾನ ಇರುವ ಹೊಸ ಸ್ವಿಫ್ಟ್ ಕಾರಿಗೆ ಸಕತ್ ಡಿಮ್ಯಾಂಡ್

Maruti Suzuki Swift 2024: ಪ್ರಸ್ತುತ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಮಾರುತಿ ತನ್ನ ನೂತನ ಮಾದರಿಯ Swift ಅನ್ನು ಲೇಟೆಸ್ಟ್ ಡಿಸೈನ್ ನಲ್ಲಿ ಮಾರುಕಟ್ಟೆಗೆ ತರಲಿದೆ. ಇನ್ನು 2024 ರಲ್ಲಿ ಬಿಡುಗಡೆಗೊಳ್ಳುವ ಕಾರ್ ಗಳ ಪಟ್ಟಿಯಲ್ಲಿ ಸ್ವಿಫ್ಟ್ ಮಾದರಿಗೆ ಹೆಚ್ಚಿನ ಬೇಡಿಕೆ ಇದೆ. ಬಿಡುಗಡೆಗೂ ಮುನ್ನ Swift ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಿದೆ.

ನಾವೀಗ 2024 ರಲ್ಲಿ ಬಿಡುಗಡೆಗೊಳ್ಳಲಿರುವ ಬಹುನಿರೀಕ್ಷಿತ ಸ್ವಿಫ್ಟ್ ಮಾದರಿಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಕೂಡ ಒಂದಾಗಿದ್ದು, ಕಂಪನಿಯು ಇದೀಗ ಸ್ವಿಫ್ಟ್ ನ ನವೀಕರಿಸಿದ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ. ಹೊಸ ಅವತಾರದಲ್ಲಿ ಮಾರುತಿ ಸ್ವಿಫ್ಟ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Maruti Suzuki Swift 2024
Image Credit: Cardekho

ಹೊಸ ತಂತ್ರಜ್ಞಾನ ಮತ್ತು ಹೊಸ ಫೀಚರ್
ಮಾರುತಿ ಸುಜುಕಿಯ ಹೊಸ ಸ್ವಿಫ್ಟ್ 2024 ಅದರ ಸ್ಟೈಲಿಶ್ ಲುಕ್‌ ಗಾಗಿ ಬಾರಿ ಟ್ರೆಂಡ್ ನಲ್ಲಿದೆ. ಅತ್ಯಾಧುನಿಕ ವೈಶಿಷ್ಟ್ಯಗಳ ಜೊತೆಗೆ ಹೊಸ ಸ್ವಿಫ್ಟ್ ಮೊದಲಿನಂತೆಯೇ ಅದೇ 1.2-ಲೀಟರ್ K12N ಡ್ಯುಯಲ್ಜೆಟ್ ಎಂಜಿನ್ ಅನ್ನು ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಮೈಲೇಜ್ ಭರವಸೆ ನೀಡುತ್ತದೆ. ಮೈಲೇಜ್ ವಿಷಯದಲ್ಲಿಯೂ ಹೊಸ ಸ್ವಿಫ್ಟ್ ಬೆಸ್ಟ್ ಆಗಿದೆ. ಇದರ ಮೈಲೇಜ್ ವಿವಿಧ ರೂಪಾಂತರಗಳಲ್ಲಿ 24.4 kmpl ನಿಂದ 26 kmpl ವರೆಗೆ ಇರುತ್ತದೆ. ಹೊಸ ಸ್ವಿಫ್ಟ್ ಸುರಕ್ಷತೆಯ ವಿಷಯದಲ್ಲಿ ಯಾವುದೇ ತೊಂದರೆ ಇಲ್ಲ.

ಎಲೆಕ್ಟ್ರಾನಿಕ್ ಬ್ರೇಕ್‌ ಫೋರ್ಸ್ ವಿತರಣೆ (ಇಬಿಡಿ), ಬ್ರೇಕ್ ಅಸಿಸ್ಟ್ (ಬಿಎ) ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ) ಜೊತೆಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ನಂತಹ ವೈಶಿಷ್ಟ್ಯಗಳನ್ನು ಸ್ವಿಫ್ಟ್ ಮಾದರಿಯಲ್ಲಿ ನೀಡಲಾಗಿದೆ.  ಇಲ್ಲಿಯವರೆಗೆ ಯಾವುದೇ ಮಾರುತಿ ಸುಜುಕಿ ಕಾರಿನಲ್ಲಿ 6 ಏರ್‌ ಬ್ಯಾಗ್‌ ಗಳನ್ನು ಒದಗಿಸಲಾಗಿಲ್ಲ. ಆದರೆ ಇವುಗಳನ್ನು ಹೊಸ ಸ್ವಿಫ್ಟ್ 2024 ರಲ್ಲಿ ಸೇರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಅತ್ಯುತ್ತಮ ಮೈಲೇಜ್, ಅತ್ಯುತ್ತಮ ಸುರಕ್ಷತಾ ರೇಟಿಂಗ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ, ಸ್ವಿಫ್ಟ್ 2024 ಟಾಟಾ ಪಂಚ್, ಹುಂಡೈ ಗ್ರಾಂಡ್ ಐ10 ನಿಯೋಸ್ ಮತ್ತು ಹ್ಯುಂಡೈ ಎಕ್ಸ್‌ಟಿಆರ್‌ ನಂತಹ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಬಹುದು.

Maruti Suzuki Swift 2024 Features
Image Credit: Hindustan Times

2024 ರ ಸ್ವಿಫ್ಟ್ ಕಾರಿಗೆ ಈಗಲೇ ಶುರುವಾಗಿದೆ ಡಿಮ್ಯಾಂಡ್
ಹೊಸ ಸುಜುಕಿ ಸ್ವಿಫ್ಟ್ 2024 Z-ಸರಣಿಯನ್ನು 1.2-ಲೀಟರ್, 3-ಸಿಲಿಂಡರ್ ಎಂಜಿನ್‌ ನೊಂದಿಗೆ ಒದಗಿಸಲಾಗುವುದು. ಈ ಕಾರು ನಾಲ್ಕು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.  LXi, VXi, ZXi ಮತ್ತು ZXi ರೂಪಾಂತರಗಳ ಆಯ್ಕೆ ನಿಮಗಾಗಿ ಇದೆ. ಅವುಗಳ ಅಂದಾಜು ಎಕ್ಸ್ ಶೋ ರೂಂ ಬೆಲೆ ರೂ. 6.50 ಲಕ್ಷದಿಂದ ರೂ. 10.00 ಲಕ್ಷದವರೆಗೆ ಇರಬಹುದು. ಮೈಲೇಜ್ ಕುರಿತು ಮಾತನಾಡುವುದಾದರೆ, LXi ರೂಪಾಂತರವು 26 km/ಲೀಟರ್, VXi 25.4 km/ಲೀಟರ್, ZXi 25 km/ಲೀಟರ್ ಮತ್ತು ZXi 24.4 km/ಲೀಟರ್ ಮೈಲೇಜ್ ನೀಡುವುದಾಗಿ ಹೇಳಿಕೊಂಡಿದೆ. ಹೊಸ ಸ್ವಿಫ್ಟ್ ಖರೀದಿಯ ಬಗೆ ಯೋಜನೆ ಹಾಕಿಕೊಂಡವರಿಗೆ ಇದು ಬೆಸ್ಟ್ ಆಗಿದೆ ಎನ್ನಬಹುದು.

Join Nadunudi News WhatsApp Group

Maruti Swift Price And Features
Image Credit: Carwale

Join Nadunudi News WhatsApp Group