HF Deluxe: 70 Km ಮೈಲೇಜ್ ಕೊಡುವ ಹೊಸ ಹೀರೋ ಬೈಕ್, ಕೇವಲ 7000 ರೂ ಕೊಟ್ಟು ಮನೆಗೆ ತನ್ನಿ.

HF Deluxe ನವೀಕರಿಸಿದ ಬೈಕ್ ಅನ್ನು ಪರಿಚಯಿಸಲಿರುವ ಹೀರೋ.

Hero HF Deluxe Bike Price And EMI: ಸಾಮಾನ್ಯವಾಗಿ ಬೈಕ್ ಖರೀದಿಸಲು ಯುವಕರು ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನುದೇಶಿಯ ಮಾರುಕಟ್ಟೆಗೆ ವಿವಿಧ ಮಾದರಿಯ ಬೈಕ್ ಗಳು ಎಂಟ್ರಿ ಕೊಡುತ್ತಿವೆ. ಕೆಲವು ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಾಹನಗಳ ಖರೀದಿಯ ಮೇಲೆ ವಿವಿಧ ರೀತಿಯ ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡುತ್ತಿವೆ. ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ಸುಲಭವಾಗಿ ಬೈಕ್ ಅನ್ನು ಖರೀದಿಸಬಹುದಾಗಿದೆ.

ಹೊಚ್ಚ ಹೊಸ ಹೀರೋ ಬೈಕ್ ಬಿಡುಗಡೆ
ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್ (Hero) ಕಂಪನಿಯ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಹೆಚ್ಚುತ್ತಿದ್ದು ಮಾರಾಟ ಕೂಡ ಹೆಚ್ಚಾಗಿವೆ.

Hero HF Deluxe will introduce an updated bike.
Image Credit: Rishibikebazar

ಹೊಸ ಹೊಸ ಬೈಕ್ ಗಳನ್ನೂ ಮಾರುಕಟ್ಟೆಗೆ ಪರಿಚಯಿಸಿ ಹೀರೋ ಕಂಪನಿ ತನ್ನ ಮಾರಾಟವನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಇದೀಗ ಹೀರೋ HF Deluxe ನವೀಕರಿಸಿದ ಬೈಕ್ ಅನ್ನು ಪರಿಚಯಿಸಲಿದೆ. ಹೀರೋ HF Deluxe ನ ವೈಶಿಷ್ಟ್ಯಗಳ ಕುರಿತು ವಿವರವನ್ನು ತಿಳಿಯೋಣ.

ಹೀರೋ HF Deluxe ಬೈಕ್ ಬೆಲೆ ಮತ್ತು ವಿಶೇಷತೆ
ಹೀರೋ HF Deluxe ಬೈಕ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 60,760 ರೂ. ಆಗಿದೆ. ಈ ಬೈಕ್ ಅನ್ನು ಹೊಸ ಕ್ಯಾನ್ವಾಸ್ ಬ್ಲಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್ ಬ್ಲಾಕ್ ಥೀಮ್‌ನೊಂದಿಗೆ ಪರಿಚಯಿಸಿದೆ.

ಹೀರೋ HF Deluxe ಬೈಕ್ ಖರೀದಿದಾರರಿಗೆ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್, ಹೆವಿ ಗ್ರೇ ವಿತ್ ಬ್ಲ್ಯಾಕ್ ಮತ್ತು ಬ್ಲ್ಯಾಕ್ ವಿತ್ ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರು ಈ ಬೈಕ್ ಅನ್ನು ಖರೀದಿಸಬಹುದು.

Join Nadunudi News WhatsApp Group

Hero HF Deluxe will introduce an updated bike.
Image Credit: Srbpost

ಹೀರೋ HF Deluxe ಬೈಕ್ ವಿಶೇಷತೆ
ಈ ಬೈಕ್ ಬಲಿಷ್ಠ ಎಂಜಿನ್ ಅನ್ನು ಹೊಂದಿದ್ದು 7.9 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.

ಹೀರೋ HF ಡೀಲಕ್ಸ್ ಬೈಕ್ 1,965mm ಉದ್ದ, 720mm ಅಗಲ ಮತ್ತು 1,045mm ಎತ್ತರವನ್ನು ಹೊಂದಿದೆ. ಹ್ಯಾಲೋಜೆನ್ ಲೈಟಿಂಗ್ ಯುನಿಟ್ ಹೊಂದಿದ್ದು, ಹೀರೋ HF Deluxe ಬೈಕ್ 805 ಮಿಮಿ ಸೀಟ್ ಅನ್ನು ಹೊಂದಿದೆ.

EMI ಮೂಲಕ ಖರೀದಿಸಿ ಹೊಸ ಹೀರೋ ಡೀಲಕ್ಸ್ 

ಹೀರೋ ಡೀಲಕ್ಸ್ ಬೈಕ್ ಅನ್ನು ಕಡಿಮೆ ಡೌನ್ ಪೇಮೆಂಟ್ ಮಾಡುವುದರ ಮೂಲಕ ಮನೆಗೆ ತರಬಹುದಾಗಿದೆ. ಹಲವು ಹಣಕಾಸು ಸಂಸ್ಥೆಗಳು ಹೀರೋ ಡೀಲಕ್ಸ್ ಬೈಕ್ ಮೇಲೆ ಕಡಿಮೆ ಇಂಟರೆಸ್ಟ್ ನಲ್ಲಿ ಸಾಲ ಕೊಡಲಿದ್ದು ಜನರು ಕೇವಲ 7000 ರೂ ಡೌನ್ ಪೇಮೆಂಟ್ ಮಾಡುವುದರ ಮೂಲಕ ಹೊಸ ಹೀರೋ ಡೀಲಕ್ಸ್ ಮನೆಗೆ ತರಬಹುದಾಗಿದೆ. ಬೈಕ್ ಬೆಲೆ ಸುಮಾರು 60 ಸಾವಿರ ಆಗಿದ್ದು EMI ಮೂಲಕ ಬೈಕ್ ಖರೀದಿ ಮಾಡಬಹುದು.

Join Nadunudi News WhatsApp Group