ಇನ್ನುಮುಂದೆ ವಾರದಲ್ಲಿ 4 ದಿನ ಕೆಲಸ 3 ದಿನ ರಜೆ, ಹೊಸ ಕಾರ್ಮಿಕ ನೀತಿ ಜಾರಿಗೆ ಕೇಂದ್ರ ಸರ್ಕಾರ, ಸಂಬಳ ಎಷ್ಟು ನೋಡಿ.

ಈಗಿನ ಕಾಲದಲ್ಲಿ ಜನರು ಹಣವನ್ನ ಸಂಪಾಧನೆ ಮಾಡಲು ದುಡಿಯುತ್ತಾರೆ ಮತ್ತು ಅವರು ಅವರು ತಮ್ಮ ಆರೋಗ್ಯದ ಕಡೆ ಮತ್ತು ಕುಟುಂಬದ ಕಡೆ ಹೆಚ್ಚಿನ ಗಮನವನ್ನ ಕೊಡದೆ ತಮ್ಮ ಜೀವನವನ್ನ ಕೆಲಸ ಮಾಡುವುದರಲ್ಲಿಯೇ ಕಳೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕೆಲವು ಕಂಪನಿಗಳು ತಮ್ಮ ಕೆಲಸದವರನ್ನ ತಮಗೆ ಮನಬಂದಂತೆ ದುಡಿಸಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಕೇಂದ್ರ ಸರ್ಕಾರ ಹಲವು ನಿಯಮಗಳನ್ನ ಜಾರಿಗೆ ತಂದಿದ್ದು ಈ ನಿಯಮಗಳು ಜುಲೈ ಮೊದಲ ವಾರದಿಂದಲೇ ದೇಶಾದ್ಯಂತ ಜಾರಿಗೆ ಬರುವ ಬಹುತೇಕ ಎಲ್ಲಾ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ.

ಹೌದು ಇನ್ನುಮುಂದೆ ವಾರದಲ್ಲಿ ನಾಲ್ಕು ದಿನ ಕೆಲಸ ಮತ್ತು ಮೂರೂ ದಿನ ರಜೆ ನೀಡುವ ಹೊಸ ಕಾರ್ಮಿಕ ನೀತಿಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾದರೆ ಹೊಸ ಕಾರ್ಮಿಕ ನೀತಿಯಲ್ಲಿ ಏನೇನಿದೆ ಮತ್ತು ಈ ನಿಯಮವನ್ನ ಜಾರಿಗೆ ತರಲು ಅಸಲಿ ಕಾರಣ ಏನು ಅನ್ನುವುದನ್ನ ತಿಳಿಯೋಣ ಬನ್ನಿ. ಹೌದು ದೇಶದಲ್ಲಿ ಜುಲೈ 1 ನೇ ತಾರೀಕಿನಿಂದ ಹೊಸ ಕಾರ್ಮಿಕ ಜಾರಿಗೆ ಬರುವ ಎಲ್ಲಾ ಲಕ್ಷಣ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಹೊಸ ಕಾರ್ಮಿಕ ನೀತಿ ಜಾರಿಗೆ ಬಂದರೆ ಕಾರ್ಮಿಕ ವಾರದಲ್ಲಿ ನಾಲ್ಕು ದಿನ ಕೆಲಸವನ್ನ ಮಾಡಿ ಮೂರೂ ದಿನಗಳ ಕಾಲ ರಜೆಯನ್ನ ಪಡೆದುಕೊಳ್ಳಬಹುದಾಗಿದೆ.

New karmika niti

ಪ್ರಸ್ತುತ ದಿನಗಳಲ್ಲಿ ದಿನಕ್ಕೆ 8 ಘಂಟೆಗಳ ಕಾಲ ಕೆಲಸವನ್ನ ಕಡ್ಡಾಯವಾಗಿ ಮಾಡಬೇಕು, ಆದರೆ ಹೊಸ ಕಾರ್ಮಿಕ ನೀತಿಯ ಕಾರಣ ಜನರು ದಿನಕ್ಕೆ 12 ಗಂಟೆಗಳ ಕಾಲ ಕೆಲಸವನ್ನ ಮಾಡಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜುಲೈ 1 ರಿಂದ ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಆಧಾರದ ಮೇಲೆ ನಾಲ್ಕು ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.

ಹೊಸ ಕಾರ್ಮಿಕ ನೀತಿಯ ಕಾರಣ ಉದ್ಯೋಗಿಗಳ ಕೆಲಸದ ಅವಧಿ, ವೇತನ, ಭವಿಷ್ಯ ನಿಧಿಯಲ್ಲಿ ಕೊಡುಗೆ, ಗಳಿಕೆ ರಜೆ, ನಗದೀಕರಣ ಮೊದಲಾದವು ಬದಲಾವಣೆಯಾಗುವ ಸಾಧ್ಯತೆ ಇದೆ. ಹೊಸ ಕಾರ್ಮಿಕ ನೀತಿ ಜಾರಿಗೆ ಬಂದರೆ ಜನರ ವೇತನದಲ್ಲಿ ಕಡಿಮೆ ಆಗಲಿದೆ, ಆದರೆ ಅವರ ಪಿಎಫ್ ಮತ್ತು ಗ್ರಾಚುಟಿ ಪ್ರಮಾಣದಲ್ಲಿ ಬಹಳ ಏರಿಕೆಯಾಗಲಿದೆ. ವಾರದಲ್ಲಿ ನಾಲ್ಕು ದಿನ ಕೆಲಸವನ್ನ 12 ಘಂಟೆಗಳ ಕಾಲ ಮಾಡಿ ಮೂರೂ ದಿನಗಳ ಕಾಲ ಕಾರ್ಮಿಕರು ರಜೆಯನ್ನ ಪಡೆದುಕೊಳ್ಳಬಹುದು. ಇನ್ನು ಸರ್ಕಾರಿ ಇಲಾಖೆಗಳ ನೌಕರರಿಗೆ ವರ್ಷದಲ್ಲಿ 30 ದಿನ ರಜೆ, ರಕ್ಷಣಾ ಸಿಬ್ಬಂದಿಗೆ 60 ದಿನ ರಜೆ ಸೌಲಭ್ಯ ಇರಲಿದೆ. ಉದ್ಯೋಗಿಗಳು 300 ಗಳಿಕೆ ರಜೆಯನ್ನು ನಗದೀಕರಣ ಮಾಡಿಕೊಳ್ಳಬಹುದಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಕಾರ್ಮಿಕರಿಗೆ ತಲುಪಿಸಿ.

Join Nadunudi News WhatsApp Group

New karmika niti

Join Nadunudi News WhatsApp Group