Business Loan: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ಸ್ವಂತ ವ್ಯವಹಾರ ಮಾಡಲು ಕೇಂದ್ರದಿಂದ ಸಿಗಲಿದೆ 2 ಲಕ್ಷ.

ಸ್ವಂತ ವ್ಯವಹಾರ ಮಾಡಲು ಕೇಂದ್ರದಿಂದ ಸಿಗಲಿದೆ 2 ಲಕ್ಷ

New Loan Scheme For Own Business: ದೇಶದಲ್ಲಿ ನಿರುದ್ಯೋಗ ಹೋಗಲಾಡಿಸುವುದು ಸರ್ಕಾರದ ದೊಡ್ಡ ಹೊಣೆ ಆಗಿದೆ. ನಿರುದ್ಯೋಗ ಹೋಗಲಾಡಿಸುವುದಕ್ಕಾಗಿ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರತಿಯೊಬ್ಬರು ಉದ್ಯೋಗಿಗಳಾಗಿರಬೇಕು, ಆರ್ಥಿಕವಾಗಿ ಸ್ವಾವಲಂಭಿ ಆಗಿರಬೇಕು ಅನ್ನುವುದು ಸರ್ಕಾರದ ಗುರಿ ಆಗಿದೆ.

ಸರ್ಕಾರ ಸ್ವ ಉದ್ಯೋಗ ಹೊಂದಲು ಹೆಚ್ಚಿನ ಪ್ರೋತ್ಸಹ ನೀಡುತ್ತಿದ್ದು, ಸ್ವ ಉದ್ಯೋಗ ವಿಚಾರವಾಗಿ ಧನ ಸಹಾಯವನ್ನು ಮಾಡಲು ಕೇಂದ್ರ ಸರ್ಕಾರ ಹೊಸ ಹೊಸ ಯೋಜನೆಯನ್ನು ಪರಿಚಯಿಸುತ್ತ ಇರುತ್ತದೆ. ಇದೀಗ ಸ್ವ ಉದ್ಯೋಗ ಮಾಡುವವರಿಗೆ ಸರ್ಕಾರ ಯೋಜನೆಯನ್ನು ಪರಿಚಯಿಸಿದೆ. ಈ ಹೊಸ ಯೋಜನೆಯಡಿ ಸ್ವಂತ ಉದ್ಯೋಗಕ್ಕಾಗಿ ಸಾಲವನ್ನು ಪಡೆದುಕೊಳ್ಳಬಹುದು.

Own Business Loan
Image Credit: ETV Bharat

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್
ಸದ್ಯ ಸ್ವಂತ ವ್ಯವಹಾರ ಮಾಡಲು ಕೇಂದ್ರದಿಂದ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಆರಂಭಗೊಂಡಿದೆ. ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯಕ್ಕಾಗಿ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸ್ವಂತ ವ್ಯವಹಾರ ಮಾಡಲು ಕೇಂದ್ರದಿಂದ ಸಿಗಲಿದೆ 2 ಲಕ್ಷ
100 ಅರ್ಹ ಅಭ್ಯರ್ಥಿಗಳಿಗೆ ವೈಯಕ್ತಿಕ ಸ್ವಯಂ ಉದ್ಯೋಗ ಕೈಗೊಳ್ಳಲು ಸೇವಾ ವಲಯದ ಬ್ಯಾಂಕ್‌ ಗಳಿಂದ ಗರಿಷ್ಠ ರೂ. 2 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ ಮತ್ತು ಸಾಲದ ಮೇಲಿನ ಬಡ್ಡಿ ದರವು 7% ಕ್ಕಿಂತ ಹೆಚ್ಚಿದ್ದರೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ. ಅಭ್ಯರ್ಥಿಯು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಾಗಿರಬೇಕು ಅಥವಾ ಅವರ ಮನೆಯಲ್ಲಿ ಯಾರಾದರೂ ಸಂಘದ ಸದಸ್ಯರಾಗಿರಬೇಕು.

ಎಸ್‌ಜೆಆರ್‌ಎಸ್‌ವೈ ಯೋಜನೆ ಮತ್ತು ಡೇ-ನಲ್ಮ್ ಯೋಜನೆಯಡಿಯಲ್ಲಿ ರಚಿಸಲಾದ 08 ಗುಂಪುಗಳಿಗೆ ಸ್ವ-ಸಹಾಯ ಉದ್ಯಮಗಳು ಅಥವಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸೇವಾ ವಲಯದ ಬ್ಯಾಂಕ್‌ ಗಳ ಮೂಲಕ ರೂ.10 ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುವುದು ಮತ್ತು ಸಾಲದ ಮೇಲಿನ ಬಡ್ಡಿದರವು ಶೇ. 7 ಕ್ಕಿಂತ ಹೆಚ್ಚಿದ್ದರೆ ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ. ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆ ವಲಯ ಕಚೇರಿ – 1 ಡೇ-ನಲ್ಮ್ ಶಾಖೆಗೆ ಜೂನ್ 24 ರೊಳಗೆ ಸಲ್ಲಿಸಬೇಕು.

Join Nadunudi News WhatsApp Group

New Loan Scheme For Own Business
Image Credit: IDFC First Bank

Join Nadunudi News WhatsApp Group