Ration Card: ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಈ ದಾಖಲೆ ಕಡ್ಡಾಯ

New Ration Card Apply: ಜನಸಮಮಾನ್ಯರು BPL Card ನ ಮೂಲಕ ಉಚಿತ ಪಡಿತರನ್ನು ಪಡೆಯುತ್ತಿದ್ದಾರೆ. ಕರೋನ ಸಮಯದಲ್ಲಿ ಮೋದಿ ಸರ್ಕಾರ ದೇಶದ ಜನತೆಗಾಗಿ ಉಚಿತ ಪಡಿತರನ್ನು ನೀಡುವ ಯೋಜನೆಯನ್ನು ಪರಿಚಯಿಸಿತ್ತು. ಇನ್ನು ಆಯಾ ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಉಚಿತ ಪಡಿತರ ಜೊತೆಗೆ ಇನ್ನಿತರ ಸೌಲಭ್ಯವನ್ನು ನೀಡುತ್ತಿದೆ.

ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಪಡಿತರ ಚೀಟಿ ಮುಖ್ಯವಾಗಿರುತ್ತದೆ. ಈ ಕಾರಣಕ್ಕೆ ಸರ್ಕಾರ ಆಗಾಗ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಹಾಗೂ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡುತ್ತಿರುತ್ತದೆ. ಸದ್ಯ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ.

New Ration Card Apply
Image Credit: Deccanherald

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ…?
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಬೆಂಗಳೂರು ಒನ್, ವಿಲೇಜ್ ಒನ್ ಸೇವಾ ಕೇಂದ್ರಗಳ ಮೂಲಕ ಸಲ್ಲಿಕೆಯಾಗುವ ಹೊಸ ಅರ್ಜಿಗಳನ್ನು ಮಾತ್ರ ಪರಿಗಣಿಸಲು ಆಹಾರ ಇಲಾಖೆ ನಿರ್ಧರಿಸಿದೆ. ಹೊಸ ಪಡಿತರ ಚೀಟಿ ತಿದ್ದುಪಡಿಗಾಗಿ ಸೈಬರ್ ಕೇಂದ್ರಗಳು ಅರ್ಜಿದಾರರಿಂದ ಹೆಚ್ಚಿನ ಹಣವನ್ನು ಪಡೆಯುತ್ತಿವೆ.

ಈ ಕಾರಣಕ್ಕೆ ಆಹಾರ ಇಲಾಖೆ ಈ ನಿರ್ಧಾರಕ್ಕೆ ಬಂದಿದ್ದು, ಸೈಬರ್ ಕೇಂದ್ರಗಳಿಂದ ಪರಿಷ್ಕೃತ ಪಡಿತರ ಚೀಟಿಗಳನ್ನು ಬ್ಲಾಕ್ ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ. ಜೂನ್ ಮೊದಲ ವಾರದಲ್ಲಿ ಹೊಸ ಪಡಿತರ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಇನ್ನು ahar.kar.nic.in ವೆಬ್‌ ಸೈಟ್ ಮೂಲಕ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು….?
*ಅರ್ಜಿದಾರರು ಸ್ಥಳೀಯ ನಿವಾಸಿಯಾಗಿರುವುದು ಕಡ್ಡಾಯವಾಗಿರುತ್ತದೆ.

Join Nadunudi News WhatsApp Group

*ಅರ್ಜಿದಾರರು ಈಗಾಗಲೇ ಯಾವುದೇ ಪಡಿತರ ಚೀಟಿ ಹೊಂದಿರಬಾರದು.

*ಕುಟುಂಬದ ಅರ್ಹತೆಗೆ ಅನುಗುಣವಾಗಿ ಪಡಿತರ ಚೀಟಿಯನ್ನೂ ನೀಡಲಾಗುವುದು.

Ration Card latest News
Image Credit: Informalnewz

ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಈ ದಾಖಲೆ ಕಡ್ಡಾಯ
•ಕುಟುಂಬದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಇರುತ್ತದೆ.

•ಪಾಸ್ಪೋರ್ಟ್ ಗಾತ್ರದ ಫೋಟೋ.

•ಗುರುತಿನ ಚೀಟಿ ಅಥವಾ ನಿವಾಸ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ.

•PAN ಕಾರ್ಡ್

•ಬ್ಯಾಂಕ್ ಪಾಸ್ಬುಕ್

•ಜಾತಿ ಪ್ರಮಾಣಪತ್ರ

•ಆದಾಯ ಪ್ರಮಾಣಪತ್ರ

Document Required For Ration Card
Image Credit: Zeenews

Join Nadunudi News WhatsApp Group