Revolt Bike: 499 ರೂಪಾಯಿಗೆ ಬುಕ್ ಮಾಡಿ 150 Km ಮೈಲೇಜ್ ಕೊಡುವ ಬೈಕ್, ಹೊಸ ವರ್ಷದ ಆಫರ್

150 Km ಮೈಲೇಜ್ ಕೊಡುವ ಬೈಕ್ ಅನ್ನು ಈಗ 499 ರೂಪಾಯಿಗೆ ಬುಕ್ ಮಾಡಿ

New Revolt RV400 Bike: ಹೊಸ ಬಣ್ಣದ ಆಯ್ಕೆಯೊಂದಿಗೆ ರಟ್ಟನ್ ಇಂಡಿಯಾ ಎಂಟರ್‌ ಪ್ರೈಸಸ್‌ ನ ಭಾಗವಾಗಿರುವ ರಿವೋಲ್ಟ್ ಮೋಟಾರ್ಸ್ ತನ್ನ RV400 ಮೋಟಾರ್‌ಸೈಕಲ್‌ಗೆ ಹೊಸ ಲುಕ್ ಅನ್ನು ನೀಡಿದೆ. ಇದರೊಂದಿಗೆ ಹೊಸ ಬಣ್ಣದ ಬೈಕ್ ಖರೀದಿಗೆ ಬುಕ್ಕಿಂಗ್ ಪ್ರಾರಂಭ ಆಗಿದೆ.

ಹೊಸ ಲೈಟ್ನಿಂಗ್ ಯೆಲ್ಲೋ ಬಣ್ಣವು RV400 ಮೇಲೆ ಡ್ಯುಯಲ್ ಟೋನ್ ನೀಡುತ್ತದೆ. ಕೆಳಗಿನ ಫೇರಿಂಗ್ ಮತ್ತು ವೀಲ್‌ಗಳು ಸೇರಿದಂತೆ ಬ್ಲಾಕ್ – ಔಟ್ ಶೈನಿಂಗ್‌ನೊಂದಿಗೆ ಪೂರಕವಾಗಿದೆ ಎಂದು ರಿವೋಲ್ಟ್ ಮೋಟಾರ್ಸ್ ಹೇಳಿಕೊಂಡಿದೆ. ಈ ಮೂಲಕ Revolt RV400 ಈಗ ಲೈಟ್ನಿಂಗ್ ಯೆಲ್ಲೋ ಪೇಂಟ್ ಸ್ಕೀಮ್‌ನಲ್ಲಿ ಲಭ್ಯವಿದ್ದು, ಈ ಮೋಟಾರ್ ಸೈಕಲ್‌ ಹೆಚ್ಚಿನ ಆಕರ್ಷಕ ನೋಟವನ್ನು ಪಡೆದುಕೊಂಡಿದೆ.

Revolt RV400 Bike
Image Credit: Bikewale

Revolt RV400 ಬೈಕ್ ನಲ್ಲಿ ಬಣ್ಣ ಆಯ್ಕೆ ಹೊರತು ಪಡಿಸಿ ಬೇರೇನೂ ಬದಲಾವಣೆ ಇಲ್ಲ

ಹೊಸ ಬಣ್ಣದ ಆಯ್ಕೆಯು ಯಾವುದೇ ಯಾಂತ್ರಿಕ ನವೀಕರಣಗಳನ್ನು ಅಥವಾ ಬೆಲೆ ಬದಲಾವಣೆಯನ್ನು ಪಡೆದಿಲ್ಲ. ಮೊದಲಿನಂತೆಯೇ RV400 ಬೆಲೆಯು ಅದೇ ರೂ. 1.19 ಲಕ್ಷದಿಂದ (ಎಕ್ಸ್ ಶೋ ರೂಂ, ದೆಹಲಿ, ಸಬ್ಸಿಡಿ ನಂತರ) ಆರಂಭವಾಗುತ್ತದೆ. ಇನ್ನು ಕಂಪನಿಯು ಈ ಹೊಸ ಬಣ್ಣದ ಜೊತೆಗೆ ಗ್ರಾಹಕರಿಗೆ ಈ ಹಿಂದಿನಿಂದಲೂ ಹಲವು ಬಣ್ಣದ ಆಯ್ಕೆಗಳನ್ನು ನೀಡುತ್ತಿದೆ.ಈ ಹೊಸ ಬಣ್ಣದ ಆಯ್ಕೆಯೊಂದಿಗೆ ಬರುವ ಮೋಟಾರ್‌ಸೈಕಲ್‌ ಬುಕಿಂಗ್‌ಗಳು ಕೂಡ ತೆರೆದಿದ್ದು, 499 ರೂಪಾಯಿ ಪಾವತಿಸಿ ಬುಕಿಂಗ್ ಮಾಡಿಕೊಳ್ಳಬಹುದು ಎಂದು ಕಂಪನಿ ಹೇಳಿಕೊಂಡಿದೆ .

Revolt RV400 ಉತ್ತಮ ಮೈಲೇಜ್ ನೀಡುವ ಬೈಕ್ ಇದಾಗಿದೆ

Join Nadunudi News WhatsApp Group

ರಿವೋಲ್ಟ್ RV400 3 kW (4 bhp) ಮಿಡ್-ಡ್ರೈವ್ ಮೋಟರ್‌ನೊಂದಿಗೆ ಬರಲಿದ್ದು, ಇದು 170 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಬೆಲ್ಟ್ ಡ್ರೈವ್ ಮೂಲಕ ಹಿಂದಿನ ಚಕ್ರಕ್ಕೆ ಪವರ್ ನೀಡುತ್ತದೆ. ಇದರ ಚಾರ್ಜಿಂಗ್ ವಿಷಯಕ್ಕೆ ಬದರೆ ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ಹೇಳಿದೆ. ರಿವೋಲ್ಟ್ RV400 ವೇಗ ಹಾಗೂ ಪರ್ಫಾಮೆನ್ಸ್ ಗರಿಷ್ಠ ವೇಗವು ಗಂಟೆಗೆ 85 ಕಿ.ಮೀ ಎಂದು ರೇಟ್ ಮಾಡಲಾಗಿದೆ. ಈ ಮೋಟಾರ್ ಸೈಕಲ್ ಅನ್ನು ಪ್ರಮಾಣಿತ ಚಾರ್ಜರ್ ಬಳಸಿ ಕೇವಲ 4.5 ಗಂಟೆಗಳಲ್ಲಿ ಶೇ 100 ರಷ್ಟು ಚಾರ್ಜ್ ಮಾಡಬಹುದು .

Revolt RV400 Bike Price
Image Credit: Autocarindia

ಹಲವು ಬಣ್ಣಗಳ ಆಯ್ಕೆಯಲ್ಲಿ Revolt RV400 ಬೈಕ್

ಹೊಸ ಬಣ್ಣದ ಕುರಿತು ರಟ್ಟನ್ ಇಂಡಿಯಾ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಬಿಸಿನೆಸ್ ಚೇರ್ ಪರ್ಸನ್ ಅಂಜಲಿ ರತ್ತನ್ ಮಾತನಾಡಿ, “ಲೈಟ್ನಿಂಗ್ ಯೆಲ್ಲೋ ರೂಪಾಂತರದಲ್ಲಿರುವ RV400 ಸ್ಪೋರ್ಟಿ ವೈಬ್ ಮತ್ತು ಸಮಕಾಲೀನ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಬೈಕ್‌ನ ಮೋಡಿಯನ್ನು ಹೆಚ್ಚಿಸುತ್ತದೆ. ಇದು ಅತ್ಯುತ್ತಮವಾದ ಶಕ್ತಿಯೊಂದಿಗೆ ರಿವೋಲ್ಟ್ ಮೋಟಾರ್ಸ್‌ನ ಬದ್ಧತೆಯನ್ನು ಪ್ರದರ್ಶಿಸುತ್ತದೆ ಎಂದರು.

“ರಿವೋಲ್ಟ್ RV400 ಸ್ಟೆಲ್ತ್ ಬ್ಲ್ಯಾಕ್ ಲಿಮಿಟೆಡ್ ಎಡಿಷನ್, ಇಂಡಿಯಾ ಬ್ಲೂ ಕ್ರಿಕೆಟ್ ಸ್ಪೆಷಲ್ ಎಡಿಷನ್ ಬಣ್ಣಗಳನ್ನು ಕೂಡ ಕಂಪನಿ ಇತ್ತೀಚಗೆ ಪರಿಚಯಿಸಿತ್ತು. ಅದೇ ಸಮಯದಲ್ಲಿ ರಿವೋಲ್ಟ್ RV400 ಸ್ಟಾಂಡರ್ಡ್‌ ಬಣ್ಣಗಳನ್ನು ನೋಡುವುದಾದರೆ- ಕಾಸ್ಮಿಕ್ ಬ್ಲ್ಯಾಕ್ ಮತ್ತು ಮಿಸ್ಟ್ ಗ್ರೇ ಬಣ್ಣಗಳು ಕೂಡ ಲಭ್ಯವಿದೆ. ಈ ಬಣ್ಣಗಳ ಪೈಕಿ ಲಿಮಿಟೆಡ್ ಎಡಿಷನ್ ಹಾಗೂ ಕ್ರಿಕೆಟ್ ಸ್ಪೆಷಲ್ ಎಡಿಷನ್‌ಗೆ ಈ ಹಿಂದೆ ಬೇಡಿಕೆ ಹೆಚ್ಚಾಗಿತ್ತು ಎನ್ನಬಹುದು.

Join Nadunudi News WhatsApp Group