Govt Employees: ರಾತ್ರೋರಾತ್ರಿ ಕೇಂದ್ರದಿಂದ ಎಲ್ಲಾ ಸರ್ಕಾರೀ ನೌಕರರಿಗೆ ಹೊಸ ನಿಯಮ, ಅನುಮತಿ ಇಲ್ಲದೆ ಪಡೆಯುವಂತಿಲ್ಲ

ಸರ್ಕಾರೀ ನೌಕರರು ಪ್ರಶಸ್ತಿ ಪಡೆಯುವಲ್ಲಿ ಹೊಸ ಮಾರ್ಗಸೂಚಿ.

New Rule For Govt Employees: ಸರ್ಕಾರೀ ನೌಕರರು ಕೇಂದ್ರ ಸರ್ಕಾರದ ಪ್ರತಿ ನಿಯಮವನ್ನು ಅನುಸರಿಸಬೇಕಾಗುತ್ತದೆ. ಸರ್ಕಾರದ ಯಾವುದೇ ನಿಯಮವನ್ನು ಉಲ್ಲಘಿಸಬಾರದು. ಕೇಂದ್ರದಿಂದ ಆಗಾಗ ಸರ್ಕಾರೀ ನೌಕರಿಗೆ ಹೊಸ ಹಸ ನಿಯಮಗಳು ಜಾರಿಯಾಗುತ್ತಲೇ ಇರುತ್ತದೆ.

ಸರ್ಕಾರೀ ನೌಕರರಿಗೆ ಎಷ್ಟು ಸೌಲಭ್ಯವನ್ನು ನೀಡಲಾಗುತ್ತದೆಯೋ, ಅಷ್ಟೇ ಕಟ್ಟು ನಿಟ್ಟಿನ ನಿಯಮವನ್ನು ಕೂಡ ರೂಪಿಸಲಾಗುತ್ತದೆ. ಸದ್ಯ ಸರ್ಕಾರೀ ನೌಕರರಿಗೆ ಕೇಂದ್ರದಿಂದ ಖಡಕ್ ಆದೇಶ ಹೊರಬಿದ್ದಿದೆ. ಇನ್ನುಮುಂದೆ ಸರ್ಕಾರೀ ನೌಕರರು ಈ ವಿಷಯವಾಗಿ ಹೆಚ್ಚು ಎಚ್ಚರವಹಿಸಬೇಕಾಗುತ್ತದೆ.

New Rule For Govt Employees
Image Credit: Business-standard

ಕೇಂದ್ರದಿಂದ ಸರ್ಕಾರೀ ನೌಕರರಿಗೆ ಖಡಕ್ ಆದೇಶ
ಸರ್ಕಾರೀ ನೌಕರರು ಇನ್ನುಮುಂದೆ ಯಾವುದೇ ಖಾಸಗಿ ಸಂಸ್ಥೆಗಳಿಂದ ಪ್ರಶಸ್ತಿ ಪಡೆಯುವ ಮುನ್ನ ಕೇಂದ್ರವು ಹೊರಡಿಸಿರುವ ಹೊಸ ಆದೇಶವನ್ನು ಅನುಸರಿಸಬೇಕಾದುದು ಕಡ್ಡಾಯವೆಂದು ಮಾರ್ಗಸೂಚಿ ಹೊರಡಿಸದಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಸರ್ಕಾರೀ ನೌಕರರು ಖಾಸಗಿ ಸಂಸ್ಥೆಗಳಿಂದ ಪ್ರಶಸ್ತಿಯನ್ನು ಪಡೆಯುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಅನಿವಾರ್ಯವಾಗಿದೆ. ಹಾಗೆಯೆ ನೌಕರರು ಸ್ವೀಕರಿಸುವ ಪ್ರಶಸ್ತಿ ಯಾವುದೇ ರೀತಿಯ ಹಣವನ್ನು ಒಳಗೊಂಡಿರಬಾರದು ಎಂದು ಸಚಿವಾಲಯ ಹೇಳಿದೆ.

Govt Employees Latest News
Image Credit: rediff

ಸರ್ಕಾರೀ ನೌಕರರು ಪ್ರಶಸ್ತಿ ಪಡೆಯುವ ಮುನ್ನ ಎಚ್ಚರ
ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಯನ್ನು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ನಂತರವೇ ಸ್ವೀಕರಿಸಬಹುದು ಎಂದು ಕಾರ್ಮಿಕ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಮಾರ್ಗಸೂಚಿ ಹೊರಡಿಸಿದೆ. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಪ್ರಶಸ್ತಿ ಅಥವಾ ಗಿಫ್ಟ್ ಗಳಿಗೆ ಅನುಮೋದನೆಯನ್ನು ನೀಡಬಹುದು.

ಬಹುಮಾನವೂ ನಗದು ಅಥವಾ ಸೌಲಭ್ಯಗಳ ರೂಪದಲ್ಲಿ ಇರಬಾರದು ಎನ್ನುವುದನ್ನು ಕೇಂದ್ರ ಸರ್ಕಾರ ಆದೇಶದಲ್ಲಿ ಪ್ರಸ್ತಾಪಿಸಿದೆ. ಸರ್ಕಾರೀ ನೌಕರರು ಸರ್ಕಾರದ ಅನುಮತಿಯಿಲ್ಲದೆ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.

Join Nadunudi News WhatsApp Group

Join Nadunudi News WhatsApp Group