IMPS Rule: Online ಮೂಲಕ ಹಣ ಕಳುಹಿಸುವವರಿಗೆ ಹೊಸ ರೂಲ್ಸ್, IMPS ನಿಯಮದಲ್ಲಿ ಬದಲಾವಣೆ

ಫೆಬ್ರವರಿ 1 ರಿಂದ IMPS ನಿಯಮದಲ್ಲಿ ಮಹತ್ವದ ಬದಲಾವಣೆ

New Rule For IMPS: ಸದ್ಯ ದೇಶದಲ್ಲಿ ಅನೇಕ ನಿಯಮಗಳು ಬದಲಾಗುತ್ತಿದೆ. ಹೊಸ ಆರಂಭವಾದ ಕಾರಣ ಅನೇಕ ರೀತಿಯ ನಿಯಮಗಳು ಬದಲಾಗಿವೆ. ಇನ್ನು ಈ ಹೊಸ ವರ್ಷವೂ ಹಣಕಾಸಿನ ವಹಿವಾಟಿನಲ್ಲಿ ಅನೇಕ ರೀತಿಯ ಬದಲಾವಣೆಯನ್ನು ಮಾಡಿಕೊಟ್ಟಿದೆ. ದೇಶದಲ್ಲಿ ಇದೀಗ ಈ ಆನ್ಲೈನ್ ಹಣ ಪಾವತಿ ನಿಯಮದಲ್ಲಿ ಬದಲಾವಣೆ ಆಗಲಿದೆ.

New Rule For IMPS
Image Credit: Dailybharat

ಇನ್ನುಮುಂದೆ ಬದಲಾಗಲಿದೆ ಆನ್ಲೈನ್ ಪಾವತಿ ನಿಯಮ
ದೇಶದಲ್ಲಿ ಗ್ರಾಹಕರು ಆನ್ಲೈನ್ ಮೂಲಕ ಹಣ ಪಾವತಿ ಮಾಡಲು ವಿವಿಧ ರೀತಿಯ ವಿಧಾನವನ್ನು ಬಳಸುತ್ತಾರೆ. UPI, NEFT, IMPS ಸೇರಿದಂತೆ ಇನ್ನಿತರ ವಿಧಾನದ ಮೂಲಕ ಆನ್ಲೈನ್ ಪಾವತಿ ನಡೆಯುತ್ತಿದೆ. ಸದ್ಯ ದೊಡ್ಡ ಮೊತ್ತದ ಹಣದ ಪಾವತಿಗೆ ಬಳಸಲಾಗುತ್ತಿದ್ದ IMPS ಅಥವಾ Immediate Payment Service ನಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ.

IMPS ನಿಯಮದಲ್ಲಿ ಮಹತ್ವದ ಬದಲಾವಣೆ
ನೀವು NIFT , RTGS ಮೂಲಕ ಹಣ ಕಳುಹಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ IMPS ನಲ್ಲಿ ತಕ್ಷಣವೇ ಹಣವನ್ನು ವರ್ಗಾವಣೆ ಮಾಡಬಹುದು. ಈಗ National Payments Corporation ಐಎಂಪಿಎಸ್ ವ್ಯವಸ್ಥೆಯನ್ನು ಸರಳಗೊಳಿಸಿದೆ. NEFT ಮತ್ತು IMPS ನಲ್ಲಿ ಬೆನಿಫಿಶಿಯರಿ ಸೇರಿಸಿಕೊಳ್ಳಬೇಕು. ಯಾರಿಗೆ ಹಣ ಕಳುಹಿಸಬೇಕೋ ಅವರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ ಎಸ್ ಸಿ ಕೋಡ್ ಇತ್ಯಾದಿಗಳನ್ನು ನಮೂದಿಸಬೇಕು.

IMPS Online Money Transfer
Image Credit: The Economic Times

ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ ಹೊಸ ನಿಯಮ
ಹೊಸ ನಿಯಮದ ಪ್ರಕಾರ, ಇನ್ನುಮುಂದೆ IMPS ಮೂಲಕ ವಹಿವಾಟು ಮಾಡಲು ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸುವ ಅಗತ್ಯವಿಲ್ಲ. ಬೆನಿಫಿಶಿಯರಿ ಸೇರಿಸುವ ಅಗತ್ಯವೂ ಇಲ್ಲ. ಪಾವತಿದಾರರ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರನ್ನು ಮಾತ್ರ ನಮೂದಿಸಿದರೆ ಸಾಕಾಗುತ್ತದೆ. ಈ ಮೂಲಕ 5 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದು. ಈ ಹೊಸ ನಿಯಮ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ.

Join Nadunudi News WhatsApp Group

Join Nadunudi News WhatsApp Group