Property Rule: ಆಸ್ತಿ, ಮನೆ ಮತ್ತು ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಏನಾಗುತ್ತದೆ, ಕಾನೂನು ನಿಯಮ

ಆಸ್ತಿ, ಮನೆ ಮತ್ತು ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

New Rule For Property: ಸದ್ಯ ರಾಜ್ಯ ಸರ್ಕಾರ ಒಂದೊಂದೇ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಜನರ ಅನುಕೂಲಕ್ಕಾಗಿ ಸರ್ಕಾರ ಈಗಾಗಲೇ ಸಾಕಷ್ಟು ಬದಲಾವಣೆಯನ್ನು ಮಾಡಿದೆ. ಸದ್ಯ ರಾಜ್ಯ ಸರ್ಕಾರ ಸ್ವಂತ ಆಸ್ತಿ ಹೊಂದಿದವರಿಗೆ ಹೊಸ ನಿಯಮವನ್ನು ಪರಿಚಯಿಸಲು ಮುಂದಾಗಿದೆ.

ಸ್ವಂತ ಆಸ್ತಿ ಹೊಂದಿದವರು ತಮ್ಮ ಆಸ್ತಿ ನಿಯಮದಲ್ಲೂ ಬದಲಾವಣೆ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಆಸ್ತಿ ಮತ್ತು ಜಮೀನನ್ನು ರೈತರು ಹೊಂದಿರುತ್ತಾರೆ. ಸರ್ಕಾರ ಈ ಹೊಸ ಸ್ವಂತ ಜಾಮೀನು ಹೊಂದಿರುವವರಿಗೆ ಅನ್ವಯವಾಗಲಿದೆ.

Property Law Latest Update
Image Credit: raas

ಆಸ್ತಿ, ಮನೆ ಮತ್ತು ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಪ್ರಸ್ತುತ ರಾಜ್ಯದಲ್ಲಿ ಒಟ್ಟಾರೆ 70 % ರಷ್ಟು ಸಣ್ಣ ರೈತರಿದ್ದಾರೆ ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ. 44 ರಷ್ಟು ಮಾತ್ರ. ಇದರಿಂದಾಗಿ ಕೇಂದ್ರದಿಂದ ಲಭ್ಯವಾಗುವ ಸಾಕಷ್ಟು ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಿಕೊಳಲು ರಾಜ್ಯದ ರೈತರು ತಮ್ಮ RTC ಜೊತೆ Aadhaar Link ಮಾಡುವುದು ಕಡ್ಡಾಯವಾಗಿದೆ.

RTC ಜೊತೆ ಆಧಾರ್ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ ಅಂಶಗಳ ಬಗ್ಗೆ ಮಾಹಿತಿ ಲಭಿಸುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಜ್ಯದ ರೈತರು ಆದಷ್ಟು ಬೇಗ ತಮ್ಮ RTC ಜೊತೆ Aadhaar Link ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಯೊಂದಿಗೆ ಅಧಿಕೃತ ವೆಬ್ ಸೈಟ್ https://landrecords.karnataka.gov.in/service4 ಗೆ ಲಾಗಿನ್ ಮಾಡುವ ಮೂಲಕ ತಮ್ಮ ಭೂ ದಾಖಲೆಗಳನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ.

New Rule For Property
Image Credit: Guptadocumentcentre

ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿದ್ದರೆ ಏನಾಗುತ್ತದೆ
ದೇಶದ ಬೆನ್ನೆಲುಬಾಗಿರುವ ರೈತನಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಗಾಗ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಇರುತ್ತದೆ. ರೈತರ ಕೃಷಿ ಬೆಳೆವಣಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ರಾಜ್ಯದ ಎಲ್ಲಾ ರೈತರು ತಮ್ಮ RTC ಜೊತೆ Aadhaar Link ಮಾಡಿಕೊಳ್ಳುವ ಮೂಲಕ ಸರ್ಕಾರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ಈ ಹೊಸ ನಿಯಮವನ್ನು ರೂಪಿಸಿದೆ. ರಾಜ್ಯ ಸರ್ಕಾರ ರೈತರಿಗಾಗಿ ಪರಿಚಯಿಸುವ ಯೋಜನೆಗಳ ಲಾಭ ಪಡೆಯಲು ಆಧಾರ್ ಲಿಂಕ್ ಅಗತ್ಯವಾಗಿದೆ.

Join Nadunudi News WhatsApp Group

Join Nadunudi News WhatsApp Group