TRAI Rules: ನವೆಂಬರ್ 1 ರಿಂದ ಮೊಬೈಲ್ ಬಳಸುವ ಎಲ್ಲರಿಗೂ ಹೊಸ ನಿಯಮ, ಕೇಂದ್ರದ ಅಧಿಕೃತ ಘೋಷಣೆ.

ಸಿಮ್ ಕಾರ್ಡ್ ಖರೀದಿಸುವ ಮುನ್ನ ಹೊಸ ನಿಯಮ ತಿಳಿದುಕೊಳ್ಳಿ.

New Rules For Mobile Users: ಇತ್ತೀಚಿಗೆ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವಂಚನೆಯು ಕೂಡ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದೆ. ಸರ್ಕಾರ ಹೆಚ್ಚುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಸರ್ಕಾರ Sim Card Purchase ಮಾಡುವವರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಟೆಲಿಕಾಂ ಸಚಿವರಾದ Ashwini Vaishnaw ಅವರು ಸಿಮ್ ಖರೀದಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಹೌದು ದೇಶದಲ್ಲಿ ಆಗುತ್ತಿರುವ ಕೆಲವು ವಂಚನೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಈಗ ಕೇಂದ್ರ ಸರ್ಕಾರ ನವೆಂಬರ್ 1 ರಿಂದ ಹೊಸ ನಿಯಮವನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದ್ದು ಈ ನಿಯಮ ಎಲ್ಲರಿಗೂ ಅನ್ವಯ ಆಗಲಿದೆ.

New Rule For Sim Card
Image Credit: Original Source

ಸಿಮ್ ಕಾರ್ಡ್ ಖರೀದಿಸುವ ಮುನ್ನ ಹೊಸ ನಿಯಮ ತಿಳಿದುಕೊಳ್ಳಿ
ಇತ್ತೀಚಿಗೆ ಜನರು ಸುಳ್ಳು ಮಾಹಿತಿಯನ್ನ ನೀಡಿ ಹೆಚ್ಚು ಹೆಚ್ಚು ಸಿಮ್ ಗಳನ್ನೂ ಖರೀದಿಸುತ್ತಿದ್ದಾರೆ. ದೂರ ಸಂಪರ್ಕ ಇಲಾಖೆ ಬಲ್ಕ್ ಸಿಮ್ ಖರೀದಿಯನ್ನು ನಿಷೇದಿಸಿದ್ದು, ಇದರ ಬದಲಾಗಿ ವ್ಯಾಪಾರ ಸಂಪರ್ಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಲಾಗುತ್ತದೆ. ಬಿಸಿನೆಸ್ KYC ಮಾತ್ರವಲ್ಲದೆ, ಆ ಸಿಮ್ ಪಡೆದುಕೊಂಡ ವ್ಯಕ್ತಿಯ KYC ಕೂಡ ಮಾಡಲಾಗುತ್ತದೆ.

ನಿಯಮ ಉಲಂಘಿಸಿದವರಿಗೆ 10 ಲಕ್ಷ ದಂಡ
ನವೆಂಬರ್ 1 ರ ನಂತರ ಯಾವುದೇ ಟೆಲಿಕಾಂ ಕಂಪನಿ ಯಾವುದೇ ಮಾರಾಟಗಾರರಿಗೆ ನೋಂದಣಿ ಇಲ್ಲದೆ ಸಿಮ್ ಮಾರಾಟ ಮಾಡಿದರೆ 10 ಲಕ್ಷ ದಂಡವನ್ನು ವಿಧಿಸಲಾಗುತ್ತದೆ. ನಕಲಿ ಸಿಮ್ ಕಾರ್ಡ್ ತಡೆಗಟ್ಟಲು ಹಾಗೂ ಹಣಕಾಸು ವಂಚನೆಯನ್ನು ತಡೆಯಲು ಈ ನಿಯಮವನ್ನು ಜಾರಿಗೆ ತರಲಾಗಿದೆ. ಸಿಮ್ ಕಾರ್ಡ್ ಗೆ KYC ಮಾಡಲು ನವೆಂಬರ್ 30 ರವರೆಗೆ ಅವಕಾಶ ಕಲ್ಪಿಸಲಾಗಿದೆ.

New Rule For Sim Card
Image Credit: Original Source

ದೇಶದಲ್ಲಿ ಒಟ್ಟು 10 ಲಕ್ಷ ಸಿಮ್ ಕಾರ್ಡ್ ಮಾರಾಟಗಾರರಿದ್ದಾರೆ
ದೇಶದಲ್ಲಿ ಪರಿಶೀಲನೆಯಿಲ್ಲದೆ ಸಿಮ್ ಕಾರ್ಡ್‌ಗಳನ್ನು ನೀಡುವ ಅನೇಕ ಸಿಮ್ ಕಾರ್ಡ್ ಮಾರಾಟಗಾರರು ಇದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಸಿಮ್ ಕಾರ್ಡ್ ಮಾರಾಟಗಾರರನ್ನು ಮೂರು ವರ್ಷಗಳವರೆಗೆ ಡಿಬಾರ್ ಮತ್ತು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಪ್ರಸ್ತುತ ದೇಶದಲ್ಲಿ ಸುಮಾರು 10 ಲಕ್ಷ ಸಿಮ್ ಕಾರ್ಡ್ ಮಾರಾಟಗಾರರಿದ್ದಾರೆ ಎಂದು ಮಾಹಿತಿ ಲಭಿಸಿದೆ.

Join Nadunudi News WhatsApp Group

Join Nadunudi News WhatsApp Group