SBI Card Rules: ಸ್ಟೇಟ್ ಬ್ಯಾಂಕ್ ನ ಕಾರ್ಡ್ ಹೊಂದಿರುವವರಿಗೆ ಮೇ 1 ರಿಂದ ಹೊಸ ನಿಯಮ

ಎಸ್ ಬಿ ಐ ಕಾರ್ಡ್ ನಲ್ಲಿ ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲಾಂಜ್ ಪ್ರಯೋಜನ ನೀಡಲಾಗುತ್ತಿತ್ತು. ಇನ್ನು ಮುಂದೆ ಈ ಸೇವೆ ಲಭ್ಯವಿಲ್ಲ ಎಂದು ಎಸ್ ಬಿ ಐ ತಿಳಿಸಿದೆ.

SBI Card New Rules: ಎಸ್ ಬಿ ಐ(SBI) ತನ್ನ ಬ್ಯಾಂಕ್ ನಲ್ಲಿ(Bank) ನೀಡಲಾಗುವ ಕಾರ್ಡ್ ಗಳಲ್ಲಿ ಈ ಒಂದು ಸೇವೆಯನ್ನು ಸ್ಥಗಿತಗೊಳಿಸುವುದರ ಮೂಲಕ ಬಳಕೆದಾರರಿಗೆ ದೊಡ್ಡ ಹೊಡೆತ ನೀಡಲಿದೆ.

ಎಸ್ ಬಿ ಐ ಕಾರ್ಡ್ ನಲ್ಲಿ ಕಾಂಪ್ಲಿಮೆಂಟರಿ ಡೊಮೆಸ್ಟಿಕ್ ಏರ್ಪೋರ್ಟ್ ಲಾಂಜ್ ಪ್ರಯೋಜನ ನೀಡಲಾಗುತ್ತಿತ್ತು. ಇನ್ನು ಮುಂದೆ ಈ ಸೇವೆ ಲಭ್ಯವಿಲ್ಲ ಎಂದು ಎಸ್ ಬಿ ಐ ತಿಳಿಸಿದೆ.

SBI Card new rules
Image Source: NDTV.Com

 

ಮೇ 1ರಿಂದ ಜಾರಿಯಾಗಲಿರುವ ಹೊಸ ನಿಯಮ:

ಎಫ್ ಬಿ ಐ ಮುಂದಿನ ತಿಂಗಳ ಆರಂಭದಲ್ಲಿಯೇ ಈ ನಿರ್ಧಾರವನ್ನು ಕೈಗೊಳ್ಳಲಿದೆ 21 ವಿಮಾನ ನಿಲ್ದಾಣಗಳು ಮತ್ತು 42 ಲಾಂಜ್ ಗಳಲ್ಲಿ ಈ ಸೇವೆಯನ್ನು ರದ್ದುಪಡಿಸಲಾಗುತ್ತದೆ. ಇದರಿಂದಾಗಿ ಎಸ್ಬಿಐ ಕಾರ್ಡ್ ಬಳಕೆದಾರರು ಈ ಕೆಲವು ಸ್ಥಳಗಳಲ್ಲಿ ಕ್ಯಾಶ್ ಬ್ಯಾಕ್(Cash Back) ಸೇವೆ ಪಡೆಯಲು ಸಾಧ್ಯವಿಲ್ಲ.

Join Nadunudi News WhatsApp Group

SBI Card new rules
Image Source: Cardinfo

ರಿಯಾಯಿತಿಗೂ ಬಿತ್ತು ಕತ್ತರಿ:

ಲಾಂಜ್ ಪ್ರವೇಶ ಅಂತಿಮಗೊಂಡ ನಂತರ ಎಸ್‌ಬಿಐ ಕಾರ್ಡ್ ಮಿತಿಯನ್ನು ನಿಗದಿಪಡಿಸಲು ಬ್ಯಾಂಕ್ ನಿರ್ಧರಿಸಿದೆ. ಅಂದರೆ ಆನ್ಲೈನ್ ಮತ್ತು ಆಫ್ಲೈನ್ ವೆಚ್ಚಗಳ ಮೇಲೆ ಗರಿಷ್ಠ ಮಿತಿ 5 ಸಾವಿರದವರೆಗೆ ಆಗಬಹುದು. ಅದೇ ರೀತಿಯಾಗಿ ಆಭರಣಗಳ ಖರೀದಿ, ಶಾಲಾ ಶಿಕ್ಷಣ, ಗಿಫ್ಟ್, ವಿಮಾ ಸೇವೆ ಮೊದಲಾದವುಗಳಲ್ಲಿ ಸಿಗುತ್ತಿದ್ದ ಕ್ಯಾಶ್ ಬ್ಯಾಕ್ ಪ್ರಯೋಜನವನ್ನು ಸ್ಥಗಿತಗೊಳಿಸಲು ಎಸ್ ಬಿ ಐ ನಿರ್ಧರಿಸಿದೆ.

SBI Card new rules
Image Source: India Today

ಕುಸಿಯುತ್ತಿರುವ ಬ್ಯಾಂಕ್ ವ್ಯವಹಾರ:

ಎಸ್ ಬಿ ಐ ನ ವ್ಯವಹಾರ ನಿರಂತರವಾಗಿ ಕುಸಿಯುತ್ತಿದೆ. ಕಳೆದ ಕೆಲವು ತಿಂಗಳ ವ್ಯವಹಾರವನ್ನು ನೋಡುವುದಾದರೆ, 2021 ಜೂನ್ ನಲ್ಲಿ 45% ನಷ್ಟಿದ್ದ ಬಿಸಿನೆಸ್, 2022 ಡಿಸೆಂಬರ್ ಹೊತ್ತಿಗೆ 24% ಗೆ ಕುಸಿತ ಕಂಡು ಬಂದಿದೆ. ಅದೇ ರೀತಿ ಆದಾಯವು ಶೇಕಡಾ 22.4 ನಿಂದ 16.4% ಗೆ ಇಳಿಕೆಯಾಗಿದೆ. ಇನ್ನು ಇಂಟರೆಸ್ಟ್ ಮಾರ್ಜಿನ್ ಡಿಸೆಂಬರ್ 2022 ರಲ್ಲಿ ಕಡಿಮೆ ಮಟ್ಟ ತಲುಪಿದೆ. ಎಸೆಟ್ ಗುಣಮಟ್ಟ ಎನ್ ಎನ್ ಪಿ ಎ ಹೆಚ್ಚಾಗಿದ್ದು 2.2% ಗೆ ತಲುಪಿದೆ. ಒಟ್ಟಿನಲ್ಲಿ ಎಸ್ ಬಿ ಐ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್, ಈವರೆಗೆ ನೀಡುತ್ತಿದ್ದ ಕೆಲವು ಸೇವೆಗಳನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ.

SBI Card new rules
Image Source: India Today

Join Nadunudi News WhatsApp Group