April Rule: ಏಪ್ರಿಲ್ 1 ರಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು, ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ.

April 1 ರಿಂದ ಬದಲಾಗುವ ಕೆಲವು ನಿಯಮಗಳ ಬಗ್ಗೆ ಮಾಹಿತಿ

New Rule from April 1st 2024: ಇನ್ನೇನು ಕೇವಲ 6 ದಿನಗಳಲ್ಲಿ 2023 -24 ರ ಹಣಕಾಸು ವರ್ಷ ಮುಗಿಯಲಿದೆ. ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ 2024 -25 ಆರಂಭಗೊಳ್ಳುತ್ತದೆ. ಇನ್ನು ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರೊಳಗೆ ಅನೇಕ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ.

ಏಕೆಂದರೆ April 1 ಹೊಸ ಹಣಕಾಸು ವರ್ಷದಿಂದ ಹೊಸ ಹೊಸ ನಿಯಮಗಳು ಜಾರಿಯಾಗುತ್ತದೆ. ಹೊಸ ನಿಯಮಗಳು ಜಾರಿಯಾಗುತ್ತಿದ್ದಂತೆ ಅನೇಕ ರೀತಿಯ ವ್ಯವಹಾರಗಳು ಬದಲಾಗುತ್ತವೆ. ಇದೀಗ ನಾವು ಈ ಲೇಖನದಲ್ಲಿ April 1 ರಿಂದ ಬದಲಾಗುವ ಕೆಲವು ನಿಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Fastag New Rules
Image Credit: Aajtak

ಏಪ್ರಿಲ್ 1 ರಿಂದ ದೇಶದಲ್ಲಿ ಬದಲಾಗಲಿದೆ ಈ ಎಲ್ಲಾ ನಿಯಮಗಳು
•FASTag ಹೊಸ ನಿಯಮ
ನೀವು ಬ್ಯಾಂಕ್‌ ನಿಂದ ನಿಮ್ಮ ಕಾರಿನ ಫಾಸ್ಟ್‌ ಟ್ಯಾಗ್‌ ನ KYC ಅನ್ನು ನವೀಕರಿಸದಿದ್ದರೆ ಏಪ್ರಿಲ್ 1 ರಿಂದ ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ FASTag ನ KYC ಅನ್ನು ನೀವು ಮಾಡದಿದ್ದರೆ ಇಂದೇ ಮಾಡಿ. ಏಕೆಂದರೆ ಮಾರ್ಚ್ 31 ರ ನಂತರ ಬ್ಯಾಂಕ್ FASTag ಅನ್ನು ನಿಷ್ಕ್ರಿಯಗೊಳಿಸುತ್ತದೆ ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದಾದ ನಂತರ ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇದ್ದರೂ ಹಣ ಪಾವತಿಯಾಗುವುದಿಲ್ಲ. RBI ಮಾನದಂಡಗಳ ಪ್ರಕಾರ FASTag ಗಾಗಿ KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಲು NHAI FASTag ಗ್ರಾಹಕರನ್ನು ಕೇಳಿದೆ.

NPS New Rules
Image Credit: India TV

•NPS ನಿಯಮದಲ್ಲಿ ಬದಲಾವಣೆ
ಏಪ್ರಿಲ್ ತಿಂಗಳಿನಿಂದ ಪಿಂಚಣಿ ನಿಧಿ ನಿಯಂತ್ರಕ ಅಂದರೆ PFRDA ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಸ್ತಿತ್ವದಲ್ಲಿರುವ ಲಾಗಿನ್ ಪ್ರಕ್ರಿಯೆಯನ್ನು ಬದಲಾಯಿಸಲು ನಿರ್ಧರಿಸಿದೆ. ಹೊಸ ನಿಯಮವು ಏಪ್ರಿಲ್ 1, 2024 ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಅಡಿಯಲ್ಲಿ NPS ಖಾತೆಗೆ ಲಾಗಿನ್ ಮಾಡಲು ಎರಡು ಪರಿಶೀಲನೆಗಳು ಅಂದರೆ ಎರಡು ಅಂಶಗಳ ದೃಢೀಕರಣದ ಅಗತ್ಯವಿದೆ. NPS ಚಂದಾದಾರರು ಆಧಾರ್ ಪರಿಶೀಲನೆ ಮತ್ತು ಮೊಬೈಲ್‌ ನಲ್ಲಿ ಸ್ವೀಕರಿಸಿದ OTP ಮೂಲಕ ಲಾಗಿನ್ ಮಾಡಬಹುದು.

•ಪಾನ್ ಕಾರ್ಡ್ ನೊಂದಿಗೆ ಆಧಾರ್ ಲಿಂಕ್
ಪ್ಯಾನ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಲು ಹಲವಾರು ಗಡುವನ್ನು ವಿಸ್ತರಿಸಲಾಗಿದೆ. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ ಗೆ ಲಿಂಕ್ ಮಾಡಲು ಕೊನೆಯ ದಿನಾಂಕ 31 ಮಾರ್ಚ್ 2024. ಈ ಮಾರ್ಚ್ ಅಂತ್ಯದೊಳಗೆ ಆಧಾರ್ ನೊಂದಿಗೆ ಪಾನ್ ಅನ್ನು ಲಿಂಕ್  ಮಾಡದಿದ್ದರೆ ಅಂತವರ  ಪ್ಯಾನ್ ಸಂಖ್ಯೆಯನ್ನು ರದ್ದುಗೊಳಿಸಲಾಗುತ್ತದೆ.

Join Nadunudi News WhatsApp Group

EPFO Rules Change
Image Credit: Informal Newz

•EPFO ನಿಯಮದಲ್ಲಿ ಬದಲಾವಣೆ
ಹೊಸ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿಯು ಏಪ್ರಿಲ್ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ, ನೀವು ಉದ್ಯೋಗವನ್ನು ಬದಲಾಯಿಸಿದರೆ ನಿಮ್ಮ ಹಳೆಯ ಪಿಎಫ್ ಅನ್ನು ಆಟೋ ಮೋಡ್‌ ಗೆ ವರ್ಗಾಯಿಸಲಾಗುತ್ತದೆ. ಅಂದರೆ, ಉದ್ಯೋಗವನ್ನು ಬದಲಾಯಿಸುವಾಗ ನೀವು ಪಿಎಫ್ ಮೊತ್ತವನ್ನು ವರ್ಗಾಯಿಸಲು ವಿನಂತಿಸುವ ಅಗತ್ಯವಿಲ್ಲ. ಹೊಸ ಆರ್ಥಿಕ ವರ್ಷದಿಂದ ಈ ಅವ್ಯವಸ್ಥೆ ಕೊನೆಗೊಳ್ಳಲಿದೆ.

•SBI ಕ್ರೆಡಿಟ್ ಕಾರ್ಡ್ ನಿಯಮ
ಇನ್ನು SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಲಿಗೂ ಕೂಡ ಹೊಸ ನಿಯಮ ಜಾರಿಯಾಗಲಿದೆ. ಏಪ್ರಿಲ್ 1, 2024 ರಿಂದ, SBI ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಏಪ್ರಿಲ್ 1 ರಿಂದ ನೀವು ಬಾಡಿಗೆಯನ್ನು ಪಾವತಿಸಿದರೆ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್‌ ಗಳನ್ನು ನೀಡಲಾಗುವುದಿಲ್ಲ. ಈ ನಿಯಮವು ಕೆಲವು ಕ್ರೆಡಿಟ್ ಕಾರ್ಡ್‌ ಗಳಿಗೆ ಏಪ್ರಿಲ್ 1 ರಿಂದ ಅನ್ವಯಿಸುತ್ತದೆ ಮತ್ತು ಕೆಲವು ಕ್ರೆಡಿಟ್ ಕಾರ್ಡ್‌ ಗಳಿಗೆ ಈ ನಿಯಮವು ಏಪ್ರಿಲ್ 15 ರಿಂದ ಅನ್ವಯಿಸುತ್ತದೆ.

SBI Credit Card Rule
Image Credit: Zeenews

Join Nadunudi News WhatsApp Group