2024 New Rules: ಸಾರ್ವಜನಿಕರ ಗಮನಕ್ಕೆ, ಜನವರಿ 1 ದಿಂದ ಬದಲಾಗಲಿದೆ ಈ ಎಲ್ಲಾ ನಿಯಮಗಳು,

ಹೊಸ ವರ್ಷದಿಂದ ಈ ಎಲ್ಲಾ ವ್ಯವಸ್ಥೆಯಲ್ಲಿ ಬಾರಿ ಬದಲಾವಣೆ, ಹೊಸ ನಿಯಮಗಳನ್ನು ಜಾರಿಗೆ ತಂದ ಇಲಾಖೆ

New Rules From January 2024: ನಾವು 2023ರ ಕೊನೆಯ ಹಂತಕ್ಕೆ ಬಂದು ನಿಂತಿದ್ದೇವೆ. ಇನ್ನೇನು ಸ್ವಲ್ಪ ದಿನದಲ್ಲಿ 2024 ರ ಹೊಸ ವರ್ಷ ಪ್ರಾರಂಭ ಆಗುತ್ತಿದೆ. ಈಗಾಗಲೇ ವರ್ಷಂತ್ಯದಲ್ಲಿ ಹಲವು ನಿಯಮಗಳು ಬದಲಾಗಿದ್ದು, ಇನ್ನು ಹೊಸ ವರ್ಷದಿಂದ ಯಾವೆಲ್ಲಾ ನಿಯಮದಲ್ಲಿ ಏನೆಲ್ಲಾ ಬದಲಾಗಲಿದೆ, ಈ ಬದಲಾವಣೆಗಳು ಜನ ಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂದು ನೋಡಬೇಕಿದೆ.

ಹೊಸ ವರ್ಷದಲ್ಲಿ ಆಗುವ ಬದಲಾವಣೆಗಳು ಎಷ್ಟು ಅನುಕೂಲಕರ ಹಾಗು ಎಷ್ಟು ಅನಾನುಕೂಲಕರ ಆಗಿದೆ ಎನ್ನುವುದು ಬಹಳ ಮುಖ್ಯ ಆಗಿದೆ. ಹೊಸ ಬದಲಾವಣೆಗಳು ಜಿಎಸ್‌ಟಿ ದರದಿಂದ, ಸಿಮ್ ಖರೀದಿಸುವವರೆಗಿನ ನಿಯಮಗಳನ್ನು ಒಳಗೊಂಡಿವೆ. 2024 ರ ಕೆಲವು ಪ್ರಮುಖ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Sim Card Rules Change From January
Image Credit: India TV News

ಸಿಮ್ ಕಾರ್ಡ್ ಖರೀದಿ ಹಾಗು ಮಾರಾಟದಲ್ಲಿ ಹೊಸ ನಿಯಮ

ಸಿಮ್ ಕಾರ್ಡ್ ಮಾರಾಟ ಮಾಡುವವರು ಹಾಗು ಖರೀದಿ ಮಾಡುವವರಿಗೆ ಹೊಸ ವರ್ಷದಿಂದ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಇದ್ದ ಹಾಗೆ ಸಿಮ್ ಕಾರ್ಡ್ ಖರೀದಿ ಮತ್ತು ಮಾರಾಟ ಮಾಡುವಂತಿಲ್ಲ. ಸಿಮ್ ಕಾರ್ಡ್ ಮಾರಾಟ ಮಾಡುವವರು ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಮೊದಲು ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ಅವರು ಯಾರಿಗೆ ಸಿಮ್ ಮಾರಾಟ ಮಾಡಿದ್ದಾರೆ ಎಂಬ ದಾಖಲೆಗಳನ್ನು ಸಹ ನಿರ್ವಹಿಸಬೇಕಾಗುತ್ತದೆ. ಅವರು ಗ್ರಾಹಕರ ಗುರುತಿನ ಮಾಹಿತಿಯನ್ನು ಸಹ ಒದಗಿಸಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದ್ದರೆ ಶಿಕ್ಷೆ ಖಚಿತ ಆಗಿರುತ್ತದೆ.

ಉದ್ಯೋಗ ಕಾನೂನು ಬದಲಾಗಲಿದೆ

Join Nadunudi News WhatsApp Group

ಹೊಸ ವರ್ಷದಿಂದ ಉದ್ಯೋಗ ಕಾನೂನಿನಲ್ಲಿ ಹಲವು ಬದಲಾವಣೆಗಳು ಆಗಲಿವೆ. ಇದು ಅರೆಕಾಲಿಕ ಕೆಲಸಗಾರರಿಗೆ ಮತ್ತು ಅನಿಯಮಿತ ಸಮಯಗಳಿಗೆ ಹೊಸ ರಜೆ ವಿಧಾನವನ್ನು ಒಳಗೊಂಡಿದೆ ಹಾಗು ಇನ್ನಿತರ ನಿಯಮಗಳು ಬದಲಾಗಲಿದೆ ಎನ್ನಲಾಗಿದೆ.

GST Price Hike From January
Image Credit: News 18

ಜಿಎಸ್‌ಟಿ ದರ ಏರಿಕೆ ಆಗಲಿದೆ

2024ರಲ್ಲಿ ಜಿಎಸ್‌ಟಿ ದರದಲ್ಲಿ ಬದಲಾವಣೆಯಾಗಲಿದೆ. ಜಿಎಸ್‌ಟಿ ದರ ಶೇ 8ರಿಂದ ಶೇ 9ಕ್ಕೆ ಏರಿಕೆಯಾಗಲಿದೆ. ಇದು 2022 ರ ಬಜೆಟ್‌ನಲ್ಲಿ ಡಬಲ್ ದರ ಹೆಚ್ಚಳದ ಅಂತಿಮ ಹಂತವಾಗಿದೆ. ಹೆಚ್ಚಿದ GST ದರವು ಜನವರಿ 1, 2024 ರಿಂದ ಅನ್ವಯವಾಗುತ್ತದೆ. ವ್ಯಾಪಾರಗಳು ತಮ್ಮ ಸಿಸ್ಟಂಗಳನ್ನು ನವೀಕರಿಸಲು ಸಿದ್ಧರಾಗಿರಬೇಕು. ಅದೇ ರೀತಿಯಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಹಲವು ನಿಯಮಗಳು ಹೊಸ ವರ್ಷದಲ್ಲಿ ಬದಲಾಗಲಿದ್ದು ಇದು ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group