Ayushman Bharath: ಆಯುಷ್ಮಾನ್ ಯೋಜನೆಯಲ್ಲಿ ಉಚಿತ ಚಿಕಿತ್ಸೆ ಪಡೆಯುವವರಿಗೆ ಹೊಸ ರೂಲ್ಸ್, ಈ ದಾಖಲೆ ಕಡ್ಡಾಯ.

ಆಯುಷ್ಮಾನ್ ಕಾರ್ಡ್ ಮಾಡಿಸುವವರಿಗೆ ಹೊಸ ರೂಲ್ಸ್, ನಿಯಮದಲ್ಲಿ ಬದಲಾವಣೆ

Document Requird For Ayushman Bharath Yojana: ದೇಶದಲ್ಲಿ ಸಾಕಷ್ಟು ಯೋಜನೆಗಳು ಪರಿಚಯವಾಗುತ್ತಿದೆ. ಭಾರತ ಸರ್ಕಾರ ದೇಶದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಯನ್ನು ಪರಿಚಯಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸ್ಥಿರತೆ ನೀಡುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಪರಿಚಯಿಸಿದೆ.

ಇನ್ನು ಕೇಂದ್ರ ಸರ್ಕಾರ ಉಚಿತ ಆರೋಗ್ಯ ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಪರಿಚಯಿಸಿದೆ. Ayushman Bharath ಯೋಜನೆಯಡಿ ಅರ್ಹರು ಉಚಿತ ಚಿಕಿತ್ಸೆಯ ಲಾಭವನ್ನು ಪಡೆಯಬಹುದು. ಸದ್ಯ ಸರ್ಕಾರ ಆಯುಷ್ಮಾನ್ ಯೋಜನೆಯ ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳ ಬಗ್ಗೆ ಅಪ್ಡೇಟ್ ನೀಡಿದೆ. ಈ ದಾಖಲೆ ಇದ್ದರೆ ಮಾತ್ರ ಅಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

Documents Required For Ayushman Bharat Yojana
Image Credit: Saam TV

ದೇಶದ ಜನತೆಗಾಗಿ ಉಚಿತ ಆರೋಗ್ಯ ಚಿಕಿತ್ಸೆ
ದೇಶದ ಬಡ ಜನರ ಆರೋಗ್ಯ ಸುರಕ್ಷತೆಗಾಗಿ ಕೇಂದ್ರ ಸರ್ಕಾರ Pradhan Mantri Ayushman Bharath Yojana ಪರಿಚಯಿಸಿದೆ. ಬಡವರು ಗುಣಮಟ್ಟದ ಆರೋಗ್ಯ ಸೌಲಭ್ಯವನ್ನು ಪಡೆಯಲಿ ಎನ್ನುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ. ಈ ಯೋಜನೆಯಡಿ ಲಾಭ ಪಡೆಯಲು ಜನರು Ayushman Card ಅನ್ನು ಹೊಂದುವುದು ಕಡ್ಡಾಯವಾಗಿದೆ. ಅರ್ಹ ಫಲಾನುಭವಿಗಳು ವಾರ್ಷಿಕವಾಗಿ ತಲಾ 5,00,000 ರೂ. ಗಳ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಉಚಿತ ಚಿಕಿಸ್ಥೆಗೆ ಆಯುಷ್ಮಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಈ ದಾಖಲೆಗಳು ಅಗತ್ಯವಾಗಿದೆ.

ಉಚಿತ ಚಿಕಿತ್ಸೆ ಪಡೆಯಲು ಈ ದಾಖಲೆ ಕಡ್ಡಾಯ
•Aadhaar card

•Ration card

Join Nadunudi News WhatsApp Group

•Mobile number

•Address proof

•Residence Certificate

•Income Certificate

•Photo

Ayushman Bharat Card
Image Credit: beshak

ಆಯುಷ್ಮಾನ್ ಕಾರ್ಡ್ ಈ ಎಲ್ಲಾ ವೆಚ್ಚಗಳನ್ನು ಒಳಗೊಂಡಿದೆ
*ವೈದ್ಯಕೀಯ  ಪರೀಕ್ಷೆ, ಚಿಕಿತ್ಸೆ ಮತ್ತು ಸಮಾಲೋಚನೆ

*ಔಷಧ ಮತ್ತು ವೈದ್ಯಕೀಯ ಬಳಕೆ ವಸ್ತುಗಳು

*ತೀವ್ರವಲ್ಲದ ಮತ್ತು ತೀವ್ರ ನಿಗಾ ಸೇವೆಗಳು

*ರೋಗನಿರ್ಣಯ ಮತ್ತು ಪ್ರಯೋಗಾಲಯ ತನಿಖೆಗಳು

*ವಸತಿ ಸೌಲಭ್ಯಗಳು

*ಆಹಾರ ಸೇವೆಗಳು

*ಆಸ್ಪತ್ರೆಗೆ ದಾಖಲಾದ ನಂತರದ ಅನುಸರಣಾ ಆರೈಕೆ 15 ದಿನಗಳವರೆಗೆ.

ಈ ರೀತಿಯಾಗಿ ನೀವು ಆಯುಷ್ಮನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
~ಅಧಿಕೃತ ವೆಬ್ ಸೈಟ್ http://beneficiary.nha.gov.in ಲಾಗಿನ್ ಆಗುವ ಮೂಲಕ ಸುಲಭವಾಗಿ ಆಯುಷ್ಮಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

~ಅಲ್ಲಿ ನೀಡಲಾದ ಫಲಾನುಭವಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೊಬೈಲ್‌ ನಲ್ಲಿ ಸ್ವೀಕರಿಸಿದ OTP ಅನ್ನು ಪರಿಶೀಲಿಸಿ.

~ಅಲ್ಲಿ ಆಯುಷ್ಮಾನ್ ಕಾರ್ಡ್‌ ಗಾಗಿ ರೇಷನ್ ಕಾರ್ಡ್ ಆಯ್ಕೆಯನ್ನು ನೀವು ನೋಡುತ್ತೀರಿ. ನಿಮ್ಮ ಕುಟುಂಬದ ಹೆಸರನ್ನು ಇಲ್ಲಿ ಹುಡುಕಿ ನಂತರ, ಕಾರ್ಡ್ ಅನ್ನು ಯಾರ ಹೆಸರಿನಲ್ಲಿ ಮಾಡಬೇಕೋ ಅವರ ಹೆಸರು ಮತ್ತು ವಿವರಗಳನ್ನು ನಮೂದಿಸಿ.

~ವಿವರಗಳಲ್ಲಿ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಪರಿಶೀಲಿಸಿ. ಸಮ್ಮತಿಯ ನಮೂನೆಯು ತೆರೆಯುತ್ತದೆ, ಅದರ ಎಲ್ಲಾ ಆಯ್ಕೆಗಳನ್ನು ಟಿಕ್ ಮಾಡಿ ಮತ್ತು ಬಲಭಾಗದಲ್ಲಿರುವ Submit ಬಟನ್ ಕ್ಲಿಕ್ ಮಾಡಿದರೆ ಆಯುಷ್ಮನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Ayushman Card Eligibility
Image Credit: India

Join Nadunudi News WhatsApp Group