Home Loan: ಗೃಹಸಾಲ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ, ಇನ್ಮುಂದೆ ಈ ನಿಯಮಗಳು ಕಡ್ಡಾಯ.

ಗೃಹಸಾಲ ಮಾಡಲು ಇನ್ನುಮುಂದೆ ಈ ದಾಖಲೆಗಳು ಕಡ್ಡಾಯ

RBI Home Loan Rule: ಸ್ವಂತ ಮನೆ ನಿರ್ಮಾಣದ ಕನಸು ಯಾರಿಗೆ ತಾನೇ ಇರುವುದಿಲ್ಲ. ಜೀವನದಲ್ಲಿ ಒಮ್ಮೆಯಾದರೂ ಒಂದು ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಸ್ವಂತ ಮನೆ ನಿರ್ಮಾಣದ ಕನಸಿಗೆ ಅಡ್ಡವಾಗುವುದೇ ಆರ್ಥಿಕ ಸಮಸ್ಯೆ. ಇನ್ನು ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ಗಳು ನೀಡುವ ಸಾಲ ನೆನಪಾಗುತ್ತದೆ. ಬ್ಯಾಂಕ್ ನೀಡುವ Home Loan ನಿಂದ ಸಾಲವನ್ನು ಪಡೆದು ಮನೆಯನ್ನು ಕಟ್ಟಬಹುದು.

ಆದರೆ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ನೀವು ಬ್ಯಾಂಕ್ ನಿಂದ ಸಾಲ ಪಡೆಯಲು ಬಯಸಿದರೆ ನಾವೀಗ ಈ ಲೇಖನದಲ್ಲಿ ಗೃಹ ಸಾಲದ ಸಂಪೂರ್ಣ ನಿಯಮದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಗೃಹ ಸಾಲದ ಮೊತ್ತಕ್ಕೆ ಎಷ್ಟು ಬಡ್ಡಿದರವಿರುತ್ತದೆ..? ಸಾಲ ಪಡೆಯಲು ನೀವು ನೀಡಬೇಕಾದ ದಾಖಲೆಗಳೇನು…? ಡೌನ್ ಪೇಮೆಂಟ್ ನ ಲೆಕ್ಕಾಚಾರ ಯಾವ ರೀತಿ ಇರುತ್ತದೆ..? ಸಾಲದ LTV ರೆಷ್ಯೋ ಎಷ್ಟಿರುತ್ತದೆ…? ಎನ್ನುವ ಎಲ್ಲ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ.

documents for home loan
Image Credit: Original Source

ಗೃಹಸಾಲ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ, ಇನ್ಮುಂದೆ ಈ ನಿಯಮಗಳು ಕಡ್ಡಾಯ
•ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ ಗಳು ಆಸ್ತಿ ಮೌಲ್ಯದ ಈ ಮಿತಿಯವರೆಗೆ ಮಾತ್ರ ಸಾಲ ನೀಡಲು ಸಾಧ್ಯವಾಗುತ್ತದೆ. ಸಾಲದ ಮೊತ್ತವು ಈ ಸಾಲದ ಮೌಲ್ಯದ ಅನುಪಾತವನ್ನು ಆಧರಿಸಿದೆ. ಇದು ಮನೆಯ ಮೌಲ್ಯದ ಆಧಾರದ ಮೇಲೆ ಎಷ್ಟು ಸಾಲ ಲಭ್ಯವಿದೆ ಎಂಬುದನ್ನು ಸೂಚಿಸುತ್ತದೆ.

•ಆರ್‌ಬಿಐ ನಿಯಮಗಳ ಪ್ರಕಾರ ಮನೆಯ ಮೌಲ್ಯ 30 ಲಕ್ಷ ರೂ.ವರೆಗೆ ಇದ್ದರೆ ಬ್ಯಾಂಕ್‌ ಗಳು ಶೇ.90ರಷ್ಟು ಸಾಲ ನೀಡಬಹುದು. ಮನೆಯ ಮೌಲ್ಯವು 30 ಲಕ್ಷ ಮತ್ತು 75 ಲಕ್ಷದ ನಡುವೆ ಇದ್ದರೆ ಈ ಸಾಲದ ಮೌಲ್ಯದ ರೆಷ್ಯೋ 80 ಪ್ರತಿಶತದವರೆಗೆ ಇರಬಹುದು. ಅದೇ ಆಸ್ತಿಯ ಮೌಲ್ಯವು 75 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ, ಬ್ಯಾಂಕ್‌ ಗಳು ಮನೆಯ ಮೌಲ್ಯದ 75 ಪ್ರತಿಶತದವರೆಗೆ ಸಾಲ ನೀಡಬಹುದು.

Join Nadunudi News WhatsApp Group

•ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದರೆ, ನಿಮಗೆ ಬೇಕಾದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆಯುತ್ತದೆ ಎಂದು ನಂಬಬೇಡಿ. ಈ LTV ಅನುಪಾತವನ್ನು ನಿರ್ಧರಿಸಲು ಬ್ಯಾಂಕುಗಳು ಹಲವು ಅಂಶಗಳನ್ನು ಪರಿಗಣಿಸುತ್ತವೆ. ಅಂದರೆ, ಸಾಲಗಾರನ ಮರುಪಾವತಿ ಸಾಮರ್ಥ್ಯ, ಅವರ ಆದಾಯ, ಪ್ರಸ್ತುತ ಇರುವಂತಹ ಸಾಲ, ವಯಸ್ಸು, ಖರೀದಿಸಿದ ಆಸ್ತಿಯ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗೆಯೆ ವಾರ್ಷಿಕ ಆದಾಯ, ವಯಸ್ಸು, ಖರೀದಿದಾರನ ಕ್ರೆಡಿಟ್ ಇತಿಹಾಸವು ಸಾಲ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

•ಹೋಮ್ ಲೋನ್ ತೆಗೆದುಕೊಳ್ಳುವ ಮೊದಲು, ಡೌನ್ ಪೇಮೆಂಟ್ ಮಾಡಲು ನೀವು ಸಾಕಷ್ಟು ಹಣವನ್ನು ಉಳಿಸಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನೀವು ಬಡ್ಡಿದರದ ಮೇಲೆ ಬ್ಯಾಂಕ್‌ ನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.

new rules of home loan in india
Image Credit: Original Source

Join Nadunudi News WhatsApp Group