Gruha Lakshmi Rule: 6 ಮತ್ತು 7 ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯುವ ಮಹಿಳೆಯರಿಗೆ ಹೊಸ ರೂಲ್ಸ್, ಬೇಗ ಈ ಕೆಲಸ ಮಾಡಿ.

ಗೃಹಲಕ್ಷ್ಮಿ 6 ಮತ್ತು 7 ಕಂತಿನ ಹಣ ಪಡೆಯುವ ಮಹಿಳೆಯರು ಬೇಗನೆ ಈ ಕೆಲಸ ಮುಗಿಸಿಕೊಳ್ಳಿ

Gruha Lakshmi New Rules: ರಾಜ್ಯ ಸರ್ಕಾರ ಪರಿಚಯಿಸುವ ಐದು ಉಚಿತ ಜ್ಞಾನಾರ್ಥಿ ಯೋಜನೆಗಳಲ್ಲಿ Gruha Lakshmi ಯೋಜನೆಯು ಇದೀಗ ಹೆಚ್ಚು ಚರ್ಚೆಗೆ ಗುರಿಯಾಗಿದೆ. ಇದಕ್ಕೆ ಕಾರಣ ಯೋಜನೆ ಅನುಷ್ಠಾನಗೊಂಡು ಆರು ತಿಂಗಳು ಕಳೆದರು ಯೋಜನೆಯ ಲೋಪ ದೋಷಗಳು ಇನ್ನೂ ಕೂಡ ಬಗೆಹರಿಯದೆ ಇರುವುದು. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕೇವಲ 90 % ಅರ್ಹರಿಗೆ ಹಣ ಜಮಾ ಆಗಿದೆ ಎನ್ನಬಹುದು.

ಇನ್ನುಳಿದ10 % ಮಹಿಳೆಯರು ಇನ್ನು ಕೂಡ ಒಂದು ಕಂತಿನ ಹಣ ಖಾತೆಗೆ ಜಮಾ ಆಗಿಲ್ಲ. ಸದ್ಯ ರಾಜ್ಯ ಸರ್ಕಾರ 6 ಮತ್ತು 7 ನೇ ಕಂತಿನ ಹಣ ಬಿಡುಗಡೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಅರ್ಹರು ಮುಂದಿನ ಕಂತುಗಳ ಹಣವನ್ನು ಯಾವುದೇ ತೊಂದರೆಯಿಲ್ಲದೆ ಪಡೆಯಬೇಕಿದ್ದರೆ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಬಾಕಿ ಇದೆ. ಹೀಗಾಗಿ 6 ಮತ್ತು 7 ನೇ ಕಂತಿನ ಹಣ ಪಡೆಯಲು ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ.

Gruha Lakshmi Scheme New Rule
Image Credit: Karnataka Times

6 ಮತ್ತು 7 ನೇ ಕಂತಿನ ಗೃಹಲಕ್ಷ್ಮಿ ಹಣ ಪಡೆಯುವ ಮಹಿಳೆಯರಿಗೆ ಹೊಸ ರೂಲ್ಸ್
•ಮುಖ್ಯವಾಗಿ ಗೃಹ ಲಕ್ಷ್ಮಿ ಅರ್ಜಿದಾರರು KYC , Aadhar Link , ಹಾಗೂ NPCI Link ಆಗಿದೆಯೋ ಅಥವಾ ಇಲ್ಲವೋ ಎನ್ನುವುದನ್ನು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳುವುದು ಅಗತ್ಯ.

•ಇನ್ನು ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದರೆ ನಿಮ್ಮ ಪೋಸ್ಟ್ ಆಫೀಸ್ ಖಾತೆಗೆ ಯಾವುದೇ ಸಮಸ್ಯೆ ಇಲ್ಲದಯೇ ಹಣ ನೇರವಾಗಿ ಜಮಾ ಆಗಲಿದೆ.

•ಗೃಹ ಲಕ್ಷ್ಮಿ ಯೋಜನೆಯಡಿ ಹಣ ಜಮಾ ಆಗದೆ ಇದ್ದರೆ, ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

Join Nadunudi News WhatsApp Group

•ಇಲಾಖೆಯವರು ಯಾವ ತಾಂತ್ರಿಕ ಸಮಸ್ಯೆಯಿಂದ ನಿಮ್ಮ ಖಾತೆಗೆ ಹಣ ಬಂದಿಲ್ಲ ಎನ್ನುವ ಬಗ್ಗೆ ತಿಳಿಸುತ್ತಾರೆ. ಇದರ ನಂತರ ನೀವು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ನಿಮ್ಮ ಖಾತೆಗೆ ಹಣ ಜಮಾ ಆಗುವಂತೆ ಮಾಡಿಕೊಳ್ಳಬಹುದು.

Gruha Lakshmi latest Update 2024
Image Credit: Original Source

•ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಅನರ್ಹ ಪಟ್ಟಿ ಮಾಡುವಾಗ ಆದಾಯ ತೆರಿಗೆ ಪಾವತಿ ಮಾದವರ ಹೆಸ್ರಯೂ ಕೂಡ ಸೇರಿದ್ದು, ಒಂದು ವೇಳೆ ನಿಮ್ಮ ಹೆಸರು ಪಟ್ಟಿಯಲ್ಲಿ ಸೇರಿದ್ದರೆ ತಕ್ಷಣ ನೀವು “ತೆರಿಗೆ ಪಾವತಿ ಮಾಡುತ್ತಿಲ್ಲ ಎನ್ನುವ ದೃಡೀಕರಣ ಪ್ರಮಾಣಪತ್ರವನ್ನು” ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಗೆ ತಲುಪಿಸಬೇಕು.

•ಸಿಡಿಪಿಒ ಕಚೇರಿಯಲ್ಲಿ ನಿಮ್ಮ ಅರ್ಜಿ ಅನುಮೋದನೆ ಬಾಕಿಯಿದ್ದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇದರ ನಂತರ, ನಿಮ್ಮ ಖಾತೆಗೆ KYC ಪ್ರಕ್ರಿಯೆಯು ಪೂರ್ಣಗೊಂಡರೆ, ಬಾಕಿ ಇರುವ ಮೊತ್ತವನ್ನು ಸಹ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Join Nadunudi News WhatsApp Group