PM Kisan: ಕಿಸಾನ್ ಸಮ್ಮಾನ್ ಹಣ ಪಡೆಯುವ ರೈತರಿಗೆ ಇಂದಿನಿಂದ ಹೊಸ ರೂಲ್ಸ್, ದೇಶಾದ್ಯಂತ ಜಾರಿ

ಕಿಸಾನ್ ಸಮ್ಮಾನ್ ಯೋನನೆಯ ನಿಯಮವನ್ನು ಮತ್ತೆ ಬದಲಾಯಿಸಿದ ಕೇಂದ್ರ ಸರ್ಕಾರ

PM Kisan Saturation Drive Scheme: ದೇಶದಲ್ಲಿ ಕೇಂದ್ರ ಮೋದಿ ಸರ್ಕಾರ ರೈತರಿಗಾಗಿ PM Kisan ಯೋಜನೆಯನ್ನು ಆಯೋಜಿಸಿದೆ. ಈ ಯೋಜನೆಯಡಿ ರೈತರು ವಾರ್ಷಿಕವಾಗಿ 6000 ರೂ. ಪಡೆಯುತ್ತಿದ್ದಾರೆ. ಸದ್ಯ ಕೇಂದ್ರ ಸರ್ಕಾರ PM ಕಿಸಾನ್ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರ PM Kisan ಯೋಜನೆಗಾಗಿ ಅತ್ಯಂತ ಮಹತ್ವಾಕಾಂಶೆಯ ಸೌಲಭ್ಯವನ್ನು ನೀಡಲು ಮುಂದಾಗಿದೆ. ಸರ್ಕಾರದ ಈ ನಿರ್ಧಾರವು ಅನ್ನದಾತರಿಗೆ ನೆಮ್ಮದಿ ನೀಡಲಿದೆ.

new rules of kisan samman yojana
Image Credit: Original Source

ಕಿಸಾನ್ ಸಮ್ಮಾನ್ ಹಣ ಪಡೆಯುವ ರೈತರಿಗೆ ಇಂದಿನಿಂದ ಹೊಸ ರೂಲ್ಸ್
ಕೇಂದ್ರ ಸರ್ಕಾರವು ಜೂನ್ 5 ರಿಂದ ಜೂನ್ 15 ರ ವರೆಗೆ ಪಿಎಂ ಕಿಸಾನ್ ಸ್ಯಾಚುರೇಶನ್ ಡ್ರೈವ್ ಅನ್ನು ಆಯೋಜಿಸುತ್ತದೆ. ಈ ಡ್ರೈವ್ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಇದರ ಮೂಲಕ ಫಲಾನುಭವಿಗಳು ನಿಮ್ಮ KYC ಅನ್ನು ಪೂರ್ಣಗೊಳಿಸಬಹುದು. ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುವ ಅನ್ನದಾತರು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. KYC ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂದರೆ ಅವರ ಖಾತೆಗಳಿಗೆ 17ನೇ ಕಂತಿನ ಹಣ ಜಮಾ ಆಗುತ್ತಿಲ್ಲ.

ಪಿಎಂ ಕಿಸಾನ್ ಸ್ಯಾಚುರೇಶನ್ ಡ್ರೈವ್ ಸ್ಕೀಮ್ ನಿಂದ ಏನು ಪ್ರಯೋಜನವಾಗಲಿದೆ…?
ಪಿಎಂ ಕಿಸಾನ್ ಸ್ಯಾಚುರೇಶನ್ ಡ್ರೈವ್ ಸಮಯದಲ್ಲಿ, ಸರ್ಕಾರವು ನಾಲ್ಕು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಬಹುದು.

1. ರೈತರು PM:Kisan ಪೋರ್ಟಲ್ ಅಥವಾ ಅಪ್ಲಿಕೇಶನ್ ಮೂಲಕ KYC ಅನ್ನು ಪೂರ್ಣಗೊಳಿಸಬಹುದು.

Join Nadunudi News WhatsApp Group

2. ಯೋಜನೆಗೆ ಸಹ ಅರ್ಜಿ ಸಲ್ಲಿಸಬಹುದು.

3. ಅಲ್ಲದೆ ಭೂಮಿಯ ವಿವರಗಳನ್ನು ಪೋರ್ಟಲ್‌ ಗೆ ಅಪ್‌ ಲೋಡ್ ಮಾಡಬಹುದು.

4. ಬ್ಯಾಂಕ್ ಖಾತೆಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.

ಈ ದಿನದಂದು ಜಮಾ ಆಗಲಿದೆ 17 ನೇ ಕಂತಿನ ಹಣ
ಸದ್ಯ PM ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಸರಕಾರವು ಶೀಘ್ರದಲ್ಲೇ ವರ್ಗಾಯಿಸಲಿದೆ. ಕೋಟ್ಯಾಂತರ ರೈತರು ಈ ಕಂತಿನ ಲಾಭ ಪಡೆಯಲಿದ್ದಾರೆ. ಸರ್ಕಾರ ಈ ಹಣವನ್ನು ಖಾತೆಗೆ ಜಮಾ ಮಾಡುವ ದಿನಾಂಕದಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ಏಪ್ರಿಲ್ ನಿಂದ ಜುಲೈ ನಡುವೆ, ಎರಡನೇ ಕಂತು ಆಗಸ್ಟ್ ನಿಂದ ನವೆಂಬರ್ ವರೆಗೆ ಮತ್ತು ಮೂರನೇ ಕಂತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಬಿಡುಗಡೆಯಾಗಲಿದೆ. ಇದರ ಪ್ರಕಾರ ನೋಡಿದರೆ, ಜೂನ್ ಮತ್ತು ಜುಲೈ ನಡುವೆ 17 ನೇ ಕಂತು ಬಿಡುಗಡೆಯಾಗುವ ಸಾಧ್ಯತೆ ಇದೆ.

Pm kisan samman yojana rules updated
Image Credit: Original Source kisan samman yojana

 

Join Nadunudi News WhatsApp Group