Minors: ಮಕ್ಕಳ ಪೋಷಕರಿಗೆ ಪೊಲೀಸ್ ಇಲಾಖೆಯ ಎಚ್ಚರಿಕೆ, ಇನ್ನುಮುಂದೆ ಪೋಷಕರು ಕಟ್ಟಬೇಕು ದಂಡ.

ಅಪ್ರಾಪ್ತ ಮಕ್ಕಳು ವಾಹನಗಳನ್ನ ಚಲಾಯಿಸಿದರೆ ಅವರ ಪೋಷಕರು ದಂಡವನ್ನ ಪಾವತಿ ಮಾಡಬೇಕು.

New Traffic Rule For Minors: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ (Traffic Rules) ಸಾಕಷ್ಟು ಬದಲಾವಣೆ ಆಗಿವೆ. ಹೊಸ ಹೊಸ ನಿಯಮಗಳು ಸಂಚಾರ ನಿಯಮದಲ್ಲಿ ಸೇರಿಕೊಳ್ಳುತ್ತಿವೆ. ಇನ್ನು ಕೇಂದ್ರ ರಸ್ತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಂಚಾರ ನಿಯಮದಲ್ಲಿ ಅನೇಕ ಬದಲಾವಣೆಯನ್ನು ಜಾರಿಮಾಡಿದ್ದಾರೆ. ಇದೀಗ ಸಂಚಾರ ನಿಯಮದಲ್ಲಿ ಹೊಸ ಬದಲಾವಣೆ ತರಲಾಗಿದೆ. ಈ ಹೊಸ ನಿಯಮದ ಕುರಿತು ಮಾಹಿತಿ ತಿಳಿಯೋಣ.

If minor children drive vehicles their parents have to pay the fine.
Image Credit: Thehansindia

ಹೊಸ ಟ್ರಾಫಿಕ್ ರೂಲ್ ಜಾರಿ
ಇನ್ನು ಸಾಮಾನ್ಯವಾಗಿ 18 ವರ್ಷ ಮೇಲ್ಪಟ್ಟವರಿಗೆ ವಾಹನ ಪವಾರವಾನಗಿಯನ್ನು ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ವಾಹನವನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಇನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನವನ್ನು ಚಲಾಯಿಸುವುದು ಕಾನೂನು ವಿರೋಧವಾಗಿದೆ. ಈ ಕಾನೂನಿನ ನಿಯಮವನ್ನು ಉಲ್ಲಂಘಿಸಿ ಕೆಲ ಪೋಷಕರು ತಮ್ಮ ಮಕಾಳಿಗೆ ವಾಹನವನ್ನು ಚಲಾಯಿಸಲು ಕೊಡುತ್ತಾರೆ. ಈ ಕಾರಣದಿಂದ ಸಂಚಾರ ನಿಯಮದಲ್ಲಿ ಬದಲಾವಣೆ ತರಲಾಗಿದೆ.

ಅಪ್ರಾಪ್ತರು ವಾಹನ ಚಲಾಯಿಸಿದರೆ ಕಟ್ಟಬೇಕು ಹೆಚ್ಚಿನ ದಂಡ
ವಾಹನ ಚಲಾಯಿಸಲು ನಿಗದಿತ ವಯೋಮಿತಿಯನ್ನು ಇರಿಸಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ. ಇನ್ನು ದ್ವಿಚಕ್ರವಾಹನದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದರೆ ಹೆಚ್ಚಿನ ದಂಡ ವಿಧಿಸಲಾಗುತ್ತದೆ. ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ.

If minor children drive vehicles their parents have to pay the fine.
Image Credit: informalnewz

ವ್ಯಕ್ತಿಯೊಬ್ಬರ ಪುತ್ರ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ ಕಾರಣ ಬಾಲಕನ ತಂದೆಗೆ 20,000 ದಂಡ ವಿಧಿಸಲಾಗಿದೆ. ಅಪ್ರಾಪ್ತನ ತಂದೆ ವಿರುದ್ಧ ಸಂಚಾರ ನಿಯಮ ಉಲ್ಲಾಘನೆ ಪ್ರಕರಣ ದಾಖಲಾಗಿದೆ. ನ್ಯಾಯಾಲಯ ಈ ಪ್ರಕರಣದ ಟಾನಿಕ್ ನಡೆಸಿ ಬಾಲಕನ ತಂದೆಗೆ 20 ಸಾವಿರ ದಂಡ ನೀಡುವಂತೆ ಆದೇಶ ನೀಡಿದೆ.

ಇನ್ನುಮುಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವ ಮುನ್ನ ಪೋಷಕರು ಎಚ್ಚರ ವಹಿಸುವುದು ಸೂಕ್ತ. ಸಂಚಾರ ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group