Traffic Rule: ಇಂದಿನಿಂದ ವಾಹನ ಚಲಾಯಿಸುವವರಿಗೆ ಹೊಸ ರೂಲ್ಸ್, ಇಂದಿನಿಂದ 25000 ರೂ. ದಂಡ.

ಇಂದಿನಿಂದ ಈ ತಪ್ಪಿಗೆ 25000 ರೂ. ದಂಡ, ಹೊಸ ನಿಯಮ

New Traffic Rule From June 1st: ಸದ್ಯ ಎಲ್ಲೆಡೆ ಅಪಘಾತಗಳು ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಟ್ರಾಫಿಕ್ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುತ್ತಿರುವವವರ ವಿರುದ್ಧ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನು ಸಂಚಾರ ನಿಯಮ ಉಲ್ಲಂಘನೆಯನ್ನು ಕಂಡುಹಿಡಿಯಲು ಸದ್ಯ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಸದ್ಯ ಯಾವುದೇ ರೀತಿಯ ಸಂಚಾರ ನಿಯಮ ಉಲ್ಲಂಘನೆ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನಬಹದು. ಇದೀಗ ಜೂನ್ ತಿಂಗಳ ಆರಂಭದಲ್ಲಿ ಸಂಚಾರ ನಿಯಮಗಳು ಇನ್ನಷ್ಟು ಕಠಿಣವಾಗಿದೆ. ಇಂದಿನಿಂದ ವಾಹನ ಚಲಾಯಿಸುವವರಿಗೆ ಹೊಸ ರೂಲ್ಸ್ ಜಾರಿಯಾಗಲಿದೆ. ಸಂಚಾರ ನಿಯಮದಲ್ಲಿ ಈ ತಪ್ಪನ್ನು ಮಾಡಿದರೆ ವಾಹನ ಸವಾರರು ಇಷ್ಟು ದಂಡವನ್ನು ಕಟ್ಟಬೇಕಾಗುತ್ತದೆ.

New Traffic Rule From June 1st
Image Credit: Original Source

ಇಂದಿನಿಂದ ವಾಹನ ಚಲಾಯಿಸುವವರಿಗೆ ಹೊಸ ರೂಲ್ಸ್
ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಿ ಪರೀಕ್ಷೆಗೆ ಹಾಜರಾಗುವ ಅಗತ್ಯವಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಗೆ ಚಾಲನಾ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲು ಅಧಿಕಾರ ನೀಡಲಾಗಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ. ಜೂನ್ 1 ರಿಂದ ಹೊಸ ನಿಯಮದ ಪ್ರಕಾರ ವಾಹನ ಸವಾರರು DL ಅನ್ನು ಪಡೆದುಕೊಳ್ಳಬಹುದು.

ಈ ಹೊಸ ನಿಯಮವನ್ನು ಜಾರಿಗೊಳಿಸುವುದರ ಜೊತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆಯ ದಾನದಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ. ಹೌದು, ಇನ್ನುಮುಂದೆ ಈ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದರೆ ನೀವು ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಹೊಸ ಟ್ರಾಫಿಕ್ ನಿಯಮವು ಇಂದಿನಿಂದ ಜಾರಿಗೆ ಬರಲಿದೆ.

New Traffic Rules
Image Credit: Siasat

ಈ ತಪ್ಪಿಗೆ ಇಂದಿನಿಂದ 25000 ರೂ. ದಂಡ
ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲೂ ನಿಯಮ ಬದಲಾಗಿದೆ. ಅತಿವೇಗದ ಚಾಲನೆಗೆ 1,000 ರೂ. ನಿಂದ 2,000 ರೂ.ವರೆಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಹಾಗೆಯೆ ಮುಖ್ಯವಾಗಿ  ಅಪ್ರಾಪ್ತರು ವಾಹನ ಚಲಾಯಿಸಿದರೆ 25,000 ರೂ.ಗಳ ದಂಡ ಹಾಗೂ ನೋಂದಣಿ ರದ್ದತಿಯ ನಿಯಮ ಜಾರಿಗೊಳಿಸಲಾಗಿದೆ. ಚಾಲಕ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅವರಿಗೆ ರೂ. 25,000 ದಂಡ ವಿಧಿಸಲಾಗುವುದು.

Join Nadunudi News WhatsApp Group

ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಿದರೆ ರೂ. 100 ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಕರು 25 ವರ್ಷ ವಯಸ್ಸಿನವರೆಗೆ ಚಾಲನಾ ಪರವಾನಗಿಗೆ ಅರ್ಹರಾಗಿರುವುದಿಲ್ಲ. ಈ ಕಟ್ಟುನಿಟ್ಟಿನ ಕ್ರಮವು ಅಪ್ರಾಪ್ತ ವಯಸ್ಸಿನ ಚಾಲನೆಯನ್ನು ತಡೆಯುತ್ತದೆ ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ನೀವು ನಿಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಯಲ್ಲಿ ವಾಹನವನ್ನು ನೀಡುವ ಮುನ್ನ ಒಮ್ಮೆ ಯೋಚಿಸಿ. ನಿಮ್ಮ ಈ ಸಣ್ಣ ತಪ್ಪಿನಿಂದ ದೊಡ್ಡ ಮೊತ್ತದ ದಂಡಕ್ಕೆ ಗುರಿಯಾಗಬೇಕಾಗಬಹುದು.

New Traffic Rules Update
Image Credit: Informalnewz

Join Nadunudi News WhatsApp Group