RX 100 2024: ಮತ್ತೆ ಮಾರುಕಟ್ಟೆಗೆ ರೀ ಎಂಟ್ರಿ ಕೊಟ್ಟ RX100, ಕಡಿಮೆ ಬೆಲೆ ಮತ್ತು ಭರ್ಜರಿ 65 Km ಮೈಲೇಜ್

ಹೊಸ ಅವತಾರದಲ್ಲಿ ಮತ್ತೆ ಮಾರುಕಟ್ಟೆಗೆ ರೀ ಎಂಟ್ರಿ ಕೊಡಲಿದೆ ಯಮಹಾ RX 100

New Yamaha RX 100: ದಶಕಗಳ ಹಿಂದೆ ಸ್ಥಗಿತಗೊಂಡಿದ್ದ Yamaha RX 100 ಈಗಲೂ ಕೂಡ ಯುವಕ ನೆಚ್ಚಿನ ಬೈಕ್ ಲಿಸ್ಟ್ ನಲ್ಲಿದೆ. ಈ Bike ಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಇದಿತ್ತು. ಸ್ಥಗಿತಗೊಂಡಿದ್ದರು ಕೂಡ RX 100 ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ ಎನ್ನಬಹುದು. ಸದ್ಯ ಯಮಹಾ ಕಂಪನಿಯು ಮಾರುಕಟ್ಟೆಯಲ್ಲಿ ಮತ್ತೆ Yamaha RX 100 ಅನ್ನು Relaunch ಮಾಡಲು ಸಿದ್ಧತೆ ಮಾಡಿಕೊಂಡಿದೆ.

ತನ್ನ ಐಕಾನಿಕ್ RX100 ಬೈಕ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಕಂಪನಿಯು ತಯಾರಿ ನಡೆಸುತ್ತಿದೆ. ಕಡಿಮೆ ಬೆಲೆ ಹಾಗೂ ಆಕರ್ಷಕ ಮೈಲೇಜ್ ಆಯ್ಕೆಯೊಂದಿಗೆ Yamaha RX 100 ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೊಸ ಅವತಾರದಲ್ಲಿ ಯಮಹಾ RX100 ಮಾರುಕಟ್ಟೆಗೆ ಬರುತ್ತಿದ್ದು ಹೊಸ ಅವತಾರದಲ್ಲಿ ನಾವು Yamaha RX100 Bike ಕಾಣಬಹುದಾಗಿದೆ.

New Yamaha RX 100
Image Credit: Gaadiwaadi

ಮಾರುಕಟ್ಟೆಗೆ ಮತ್ತೆ ರೀಎಂಟ್ರಿ ಕೊಡುತ್ತಿದೆ ಯಮಹಾ RX 100
Yamaha RX 100CC ಶಕ್ತಿಶಾಲಿ 98 cc ಎಂಜಿನ್‌ ನೊಂದಿಗೆ ಬರಲಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬೈಕ್ ಪ್ರತಿ ಲೀಟರ್‌ ಗೆ 65 Kilometer ಗಳ ವರೆಗೆ Mileage ನೀಡುವ ನಿರೀಕ್ಷೆಯಿದೆ. Yamaha RX 100CC ಆಕರ್ಷಕ ರೆಟ್ರೊ ವಿನ್ಯಾಸವನ್ನು ಹೊಂದಿದೆ. ಕಂಪನಿಯು ಆರಾಮದಾಯಕ ಆಸನಗಳು ಮತ್ತು ನವೀಕರಿಸಿದ ವಿನ್ಯಾಸದೊಂದಿಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಬೈಕ್ ನಲ್ಲಿ ಅಳವಡಿಸಿದೆ.

ಬೈಕ್ ಉತ್ತಮ ಇಂಧನ ಟ್ಯಾಂಕ್‌ ನೊಂದಿಗೆ ಬರಲಿದ್ದು ವಾಹನ ಸವಾರರಿಗೆ ಆರಾಮದಾಯಕ ಪ್ರಯಾಣ ನೀಡಲಿದೆ. ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಯಮಹಾ RX 100CC ಹೊಸ ಬೈಕ್ ಅನ್ನು ಬಿಡುಗಡೆ ಮಾಡಲಿದ್ದು, ನೂತನ RX ಮಾದರಿ Bullet Bike ಗಳಿಗೆ ನೇರ ಸ್ಪರ್ಧೆ ನೀಡಲಿದೆ. ಇನ್ನು ಮಾರುಕಟ್ಟೆಯಲ್ಲಿ Yamaha RX100 ಸರಿಸುಮಾರು 1.25 ಲಕ್ಷದಿಂದ 1 .50 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

New Yamaha RX 100 Bike Feature
Image Credit: Gaadiwaadi

ನೂತನ RX ಮಾದರಿಯಲ್ಲಿ ಏನೆಲ್ಲಾ ಫೀಚರ್ ಇರಲಿದೆ..?
Yamaha RX100 ಬೈಕ್ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್-ಟೈಪ್ ಸೀಟ್, ದೊಡ್ಡ ಹ್ಯಾಂಡಲ್‌ಬಾರ್, ರೌಂಡ್ ಹೆಡ್‌ಲ್ಯಾಂಪ್ ಘಟಕ, ಕ್ರೋಮ್ಡ್ ಫೆಂಡರ್‌ಗಳು, ಅಪ್ಲಿಫ್ಟ್ ಎಕ್ಸಾಸ್ಟ್ ಸಿಸ್ಟಮ್, ಕ್ಲಾಸಿಕ್-ಲುಕಿಂಗ್ ಟೈಲ್‌ಲ್ಯಾಂಪ್ ಮತ್ತು ಆಧುನಿಕ ಅರೆ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇನ್ನೇನು ಕೆಲವೇ ಸಮಯದಲ್ಲಿ RX 100 ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದ್ದು ಯುವಕರ ನೆಚ್ಚಿನ ಬೈಕ್ ಅವರ ಕೈತಲುಪಲಿದೆ.

Join Nadunudi News WhatsApp Group

Join Nadunudi News WhatsApp Group