Nexon CNG: ಲಾಂಚ್ ಆಗಿದೆ ಟಾಟಾ Nexon CNG ಮಾದರಿ, ನೂತನ CNG ಮಾದರಿಯು ಬೆಲೆ ಮತ್ತು ಮೈಲೇಜ್ ಎಷ್ಟಿದೆ…?

ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಟಾಟಾ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಿದೆ. ಟಾಟಾದ ಈ ನೂತನ ಮಾದರಿಯ ಬಗ್ಗೆ ಮಾಹಿತಿ ಇಲ್ಲಿದೆ.

Nexon CNG Launch In India: ಭಾರತೀಯ ಆಟೋ(Auto) ವಲಯದಲ್ಲಿ TATA ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಟಾಟಾ ಕಾರ್ ಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹದು. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಟಾಟಾ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಿದೆ.

ಪೆಟ್ರೋಲ್, CNG ಹಾಗೆಯೆ ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಟಾಟಾ ಮಾದರಿಯ ಕಾರ್ ಗಳನ್ನೂ ಖರೀದಿಸಬಹುದು. ಸದ್ಯ ಜನಪ್ರಿಯ ಕಾರ್ ತಯಾರಕ ಕಂಪೆನಿಯಾದ ಟಾಟಾ ಗ್ರಾಹಕರಿಗೆ ಹೊಸ CNG ಆಯ್ಕೆಯ ಕಾರ್ ಅನ್ನು ಪರಿಚಯಿಸಿದೆ. ಟಾಟಾದ ಈ ನೂತನ ಮಾದರಿಯ ಬಗ್ಗೆ ಮಾಹಿತಿ ಇಲ್ಲಿದೆ.

Tata Nexon EV 2024
Image Credit: Team BHP

Tata Nexon CNG
ಟಾಟಾ ಕಂಪನಿಯು ಮಾರುಕಟ್ಟೆಯಲ್ಲಿಹಲವು ಮಾದರಿಯ ಕಾರ್ ಗಳನು ಪರಿಚಯಿಸಿದ್ದು, CNG ಆಯ್ಕೆಗಳು ಕೂಡ ಸಾಕಷ್ಟಿವೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾ ತನ್ನ ಜನಪ್ರಿಯ Tata Nexon ಮಾದರಿಯನ್ನು CNG ರೂಪಾಂತರದಲ್ಲಿ ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. Tata Nexon CNG ದೇಶದಲ್ಲಿ ಪ್ರಥಮ ಟರ್ಬೊ ಪೆಟ್ರೋಲ್ ಚಾಲಿತ CNG ವಾಹನವಾಗಿದೆ. ಈ ಸಿನ್ಗ್ ಮಾದರಿಯ ವಿಶೇಷತೆಗಳ ಬಗ್ಗೆ ತಿಳಿಯೋಣ.

ಲಾಂಚ್ ಆಗಿದೆ ಟಾಟಾ Nexon CNG ಮಾದರಿ
ಟಾಟಾ ನೆಕ್ಸಾನ್ ಸಿಎನ್‌ಜಿ ರೂಪಾಂತರವು 1.2-ಲೀಟರ್ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಈ ಎಂಜಿನ್ 118 ಬಿಹೆಚ್‌ಪಿ ಪೀಕ್ ಪವರ್ ಮತ್ತು 170 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಕಾರು ರೂಪಾಂತರವನ್ನು ಅವಲಂಬಿಸಿ 5-ಸ್ಪೀಡ್ ಮ್ಯಾನುವಲ್ ಅಥವಾ ಸ್ವಯಂಚಾಲಿತವಾಗಿ ಲಭ್ಯವಿರುತ್ತದೆ. ಜೊತೆಗೆ ಸಿಎನ್ ಜಿ ಕಿಟ್ ಒಳಗೊಂಡಿದ್ದರೂ 230 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆಯಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Tata Nexon Price And Feature
Image Credit: Car Wale

ನೂತನ CNG ಮಾದರಿಯು ಬೆಲೆ ಮತ್ತು ಮೈಲೇಜ್ ಎಷ್ಟಿದೆ…?
ಹೊಸ ನೆಕ್ಸಾನ್ ಸಿಎನ್‌ಜಿ ಮಾದರಿಯು ನವೀನ ಸಿಗ್ನೇಚರ್ ಎಲ್‌ಇಡಿ ಡಿಆರ್‌ ಎಲ್‌ ಗಳು, ಆಕರ್ಷಕ ಎಲ್‌ ಇಡಿ ಲೈಟ್‌ ಬಾರ್, ಹೊಸ ಹೆಡ್‌ ಲೈಟ್‌ ಗಳು, ಫಾಗ್‌ ಲ್ಯಾಂಪ್‌ ಗಳು, ಅತ್ಯಾಧುನಿಕ ಗ್ರಿಲ್ ಮತ್ತು ಬಂಪರ್ ಅನ್ನು ಒಳಗೊಂಡಿದೆ. ಹಿಂಭಾಗದ ವಿನ್ಯಾಸವು ಅತ್ಯುತ್ತಮವಾಗಿದೆ ಮತ್ತು ಸಂಪರ್ಕಿತ ಎಲ್ಇಡಿ ಟೈಲ್ ಲೈಟ್ ಅನ್ನು ಪಡೆಯುತ್ತದೆ. ನೆಕ್ಸಾನ್ ಫೇಸ್‌ ಲಿಫ್ಟ್ ಎಸ್‌ಯುವಿಯಂತೆ ಒಳಭಾಗವು ಆಕರ್ಷಕವಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Join Nadunudi News WhatsApp Group

ಇನ್ನು ನೆಸ್ವ್ನ್ ಮಾದರಿಯ ಮೈಲೇಜ್ ಬಗ್ಗೆ ಹೇಳುವುದಾರೆ ಟಾಟಾ ಪಂಚ್ ಮಾದರಿಗಿಂತ ಹೆಚ್ಚಿನ ಮೈಲೇಜ್ ನೀಡಲಿದೆ. Tata ಪಂಚ್ ಮಾದರಿಯು ಪ್ರತಿ ಕೆಜಿಗೆ 26km ಮೈಲೇಜ್ ನೀಡಲಿದೆ ಎನ್ನುವುದು ನಿಮಗೆ ತಿಳಿದಿರಲಿ. ಇನ್ನು ಮಾರುಕಟ್ಟೆಯಲ್ಲಿ ನೂತನ ನೆಸ್ವ್ನ್ ಮಾದರಿಯು ರೂ.8.10 ಲಕ್ಷದಿಂದ ರೂ.15.50 ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group