Nikhil And Sudeep: ಬಿಜೆಪಿ ಪರವಾಗಿ ನಿಂತ ಸುದೀಪ್ ಗೆ ಟಾಂಗ್ ಕೊಟ್ಟ ನಿಖಿಲ್ ಕುಮಾರಸ್ವಾಮಿ, ನಮ್ಮಲ್ಲೂ ಸ್ಟಾರ್ ಗಳು ಇದ್ದಾರೆ.

ಸುದೀಪ್ ಅವರ ಬಿಜೆಪಿ ಪ್ರಚಾರದ ಬಗ್ಗೆ ಮಾತನಾಡಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿಯವರು.

Nikhil Kumaraswamy About Kiccha Sudeep Join BJP: ನಟ ಕಿಚ್ಚ ಸುದೀಪ್ (Kiccha Sudeep) ಬಿಜೆಪಿ (BJP) ಸೇರ್ಪಡೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಹೊರ ಬಿದ್ದಿದೆ. ನಟ ಸುದೀಪ್ ನಾನು ಎಲೆಕ್ಷನ್ ನಲ್ಲಿ ಭಾಗವಹಿಸುವುದಿಲ್ಲ ಆದರೆ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ ಎಂದ ಮಾತು ಕೆಲವರಲ್ಲಿ ಕಿಡಿ ಕಾರುವಂತೆ ಮಾಡಿದೆ.

ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಪಕ್ಷದವರು ನಟ ಸುದೀಪ್ ಮಾತನ್ನು ಕೇಳಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Nikhil Kumaraswamy talks about Kiccha Sudeep entering politics.
Image Credit: PTI/ REPRESENTATIONAL (FILE).

ನಟ ಪ್ರಕಾಶ್ ರಾಜ್ ಅವರು ಸಹ ಕಾಂಗ್ರೆಸ್ ಪಕ್ಷದವರಾಗಿದ್ದರಿಂದ ನಟ ಸುದೀಪ್ ಅವರ ಮಾತಿಗೆ ಟ್ವೀಟ್ ಮಾಡುವ ಮೂಲಕ ಟಾಂಗ್ ಕೊಟ್ಟಿದ್ದರು, ಅಲ್ಲದೆ ಜೆಡಿಎಸ್ ಪಕ್ಷದವರು ನಟ ಸುದೀಪ್ ವಿರುದ್ಧವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದೀಗ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಈ ವಿಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ.

ನಟ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ
ನಟ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡುವುದಾಗಿ ಮಾತನಾಡಿರುವುದರ ಬಗ್ಗೆ ನಿಖಿಲ್ ಕುಮಾರಸ್ವಾಮಿ ಕೂಡ ಮಾತನಾಡಿದ್ದಾರೆ. ಅಪಾರವಾದ ಅಭಿಮಾನಿಗಳ ಬಳಗ ಇರುವ ಸ್ಟಾರ್ ನಟರು ಸೆಲಬ್ರೆಟಿಗಳು ಚುನಾವಣಾ ಸಂದರ್ಭದಲ್ಲಿ ಯಾವುದಾದರೂ ರಾಜಕೀಯ ಪಕ್ಷದ ಪರವಹಿಸಿ ಪ್ರಚಾರ ಮಾಡುವುದು ಸಹಜ.

Nikhil Kumaraswamy said that while big star actors campaign in the BJP party, the workers in our party are the stars.
Image Credit: theprint

ನಾನು ಸುದೀಪ್ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಬಿಜೆಪಿ ಅನ್ನುವುದ್ದಕ್ಕಿಂತ ಅವರು ಬೊಮ್ಮಾಯಿ ಅವರ ಮೇಲಿರುವ ಬಾಂಧವ್ಯ, ಸಂಬಂಧದಿಂದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅದು ಅವರ ವಯಕ್ತಿಕ ವಿಚಾರ ಆ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದಿದ್ದಾರೆ.

Join Nadunudi News WhatsApp Group

ದೇವಗೌಡ ಆವರೇ ನಮ್ಮ ಪಕ್ಷಕ್ಕೆ ದೊಡ್ಡ ಸ್ಟಾರ್ ಎಂದ ನಿಖಿಲ್ ಕುಮಾರಸ್ವಾಮಿ
ಇನ್ನು ನಿಮ್ಮ ಪಕ್ಷದಿಂದಲೂ ಯಾರಾದರೂ ಸ್ಟಾರ್ ನಟರು ಪ್ರಚಾರ ಮಾಡಲಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಟ ನಿಖಿಲ್ ಕುಮಾರಸ್ವಾಮಿ, ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಸ್ಟಾರ್ ಪ್ರಚಾರಕರು. ದೇವಗೌಡ ಆವರೇ ನಮ್ಮ ಪಕ್ಷಕ್ಕೆ ದೊಡ್ಡ ಸ್ಟಾರ್ ಪ್ರಚಾರಕರು. ಹೀಗಾಗಿ ಯಾವ ಸ್ಟಾರ್ ನಟರ ಜೊತೆನೂ ಪ್ರಚಾರ ಮಾಡಲು ಇನ್ನು ಸಂಪರ್ಕ ಮಾಡಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

Join Nadunudi News WhatsApp Group