Nikshay Poshan: ಇಂತಹ ರೋಗಿಗಳಿಗೆ ಸಿಗಲಿದೆ ತಿಂಗಳಿಗೆ 500 ರೂ, ಹೊಸ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ಕೇಂದ್ರ ಸರ್ಕಾರ ನಿಕ್ಷಯ ಪೌಷ್ಟಿಕಾಂಶ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.

Nikshay Poshan Yojana For TB Disease: ಕೇಂದ್ರ ಸರ್ಕಾರ (Central Government) ಜನರಿಗಾಗಿ ಸಾಕಷ್ಟು ಜನಕಲ್ಯಾಣ ಯೋಜನೆಯನ್ನು ಪರಿಚಯಿಸಿದೆ. ಸಮಾಜದ ಪ್ರತಿಯೊಂದು ವರ್ಗಾವರಿಗೂ ಆರ್ಥಿಕವಾಗಿ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಇನ್ನು ಸರ್ಕಾರ ನೀಡುತ್ತಿರುವ ಅದೆಷ್ಟೋ ಯೋಜನೆಗಳ ಬ್ಯಾಗ್ ಜನರಿಗೆ ತಿಳಿದಿರುವುದಿಲ್ಲ. ಜನರಿಗೆ ಅರಿವಿಲ್ಲದೆ ಸಾಕಷ್ಟು ಯೋಜನೆಗಳು ಕೇಂದ್ರ ಸರ್ಕಾರದಲ್ಲಿದೆ ಎನ್ನಬಹುದು.

ಅದರಲ್ಲಿ ಟಿಬಿ ರೋಗಿಗಳಿಗಾಗಿ ಸರ್ಕಾರ ನೀಡುತ್ತಿರುವ ಯೋಜನೆ ಕೂಡ ಸೇರಿಕೊಂಡಿದೆ. ಇದೀಗ ನಾವು ಟಿಬಿ ರೋಗಿಗಳಿಗಾಗಿ ಸರ್ಕಾರ ನೀಡುತ್ತಿರುವ ಯೋಜನೆಗಳು ಯಾವುದೂ? ಯೋಜನೆಯ ಪ್ರಯೋಜನೆಗಳೇನು? ಯೋಜನೆಯ ಲಾಭ ಪಡೆಯಲು ಯಾರು ಅರ್ಹರು? ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಎನ್ನುವ ಬಗ್ಗೆ ವಿವರ ತಿಳಿಯೋಣ.

Nikshay Poshan Yojana For TB Disease
Image Credit: Abplive

Nikshay Poshan Yojana
ಆರ್ಥಿಕವಾಗಿ ಹಿಂದುಳಿದ ಟಿಬಿ ರೋಗಿಗಳಿಗಾಗಿ ಸರ್ಕಾರ Nikshay Poshan Yojana ಯನ್ನು ಪ್ರಾರಂಭಿಸಿದೆ. ಏಕೆಂದರೆ ಟಿಬಿ ರೋಗಿಗೆ ಅಗತ್ಯವಿರುವ ಔಷಧಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಈ ಯೋಜನೆಯನ್ನು ಪರಿಚಯಿಸಿದೆ. ಸರ್ಕಾರವು ವಿಶೇಷವಾಗಿ ಕ್ಷಯ ರೋಗಿಗಳಿಗೆ ಈ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ ಈ ಯೋಜನೆಯ ಲಾಭ ಪಡೆಯಲು ಕೆಲವು ಅರ್ಹತೆಗಳಿರಬೇಕು. ಕ್ಷಯ ರೋಗವಿರುವ ಎಲ್ಲರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

ಇಂತಹ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಮುಂದಾದ ಸರ್ಕಾರ
ದೇಶದಲ್ಲಿ ಕ್ಷಯ ರೋಗವು ಒಂದು ರೀತಿಯ ಮಾರಣಾಂತಿಕ ಕಾಯಿಲೆ ಎನ್ನಬಹುದು. ಸರ್ಕಾರವು ದೇಶದಿಂದ ಟಿಬಿಯನ್ನು ತೊಡೆದುಹಾಕಲು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಟಿಬಿ ರೋಗಿಗಳಿಗೆ ಔಷಧಿಗಳ ಬದಲಿಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಆದರೆ ಹಲವು ಬಾರಿ ಹಣದ ಕೊರತೆಯಿಂದ ಸಂಬಂಧಿಸಿದ ರೋಗಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಇದರಿಂದ ರೋಗಿಯ ಜೀವಕ್ಕೆ ಅಪಾಯವಾಗುತ್ತಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ನಿಕ್ಷಯ ಪೌಷ್ಟಿಕಾಂಶ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ.

Nikshay Poshan Yojana For TB Disease
Image Credit: Thehindu

ಈ ಯೋಜನೆಯಡಿ ಸಿಗಲಿದೆ ತಿಂಗಳಿಗೆ 500 ರೂ.
Nikshay Poshan ಯೋಜನೆಯಡಿ ಅರ್ಹ ರೋಗಿಗಳಿಗೆ ತಿಂಗಳಿಗೆ 500 ರೂ. ಆರ್ಥಿಕ ನೆರವು ನೀಡಲಿದೆ. ಕ್ಷಯರೋಗಿಗಳ ಆಹಾರ ಪದ್ಧತಿ ಉತ್ತಮಗೊಂಡರೆ ರೋಗಿಗಳ ಮರಣ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿತ್ತು.

Join Nadunudi News WhatsApp Group

ನಿಕ್ಷಯ ಪೌಷ್ಟಿಕಾಂಶ ಯೋಜನೆಯಡಿ ಕೇವಲ ಟಿಬಿ ರೋಗಿಗಳನ್ನು ಮಾತ್ರ ಒಳಗೊಂಡಿದೆ. ನೀವು ಹತ್ತಿರದ PHC ಅಥವಾ CHC ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಕಡ್ಡಾಯವಾಗಿ BPL ಕಾರ್ಡ್ ಅನ್ನು ಹೊಂದಿದ್ದು Nikshay Portal ನಲ್ಲಿ ನೋಂದಣಿ ಅಗತ್ಯವಾಗಿದೆ.

Join Nadunudi News WhatsApp Group