Indian Muslims: ಭಾರತದಲ್ಲಿ ಮುಸ್ಲಿಮರ ಸ್ಥಿತಿ ಹೇಗಿದೆ ಎಂದು ತಿಳಿಸಿದ ನಿರ್ಮಲ ಸೀತಾರಾಮನ್, ನಮ್ಮ ಭಾರತವೇ ಗ್ರೇಟ್.

ಭಾರತದಲ್ಲಿ ಮುಸ್ಲಿಮರು ಹೇಗೆ ವಾಸ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ ನಿರ್ಮಲ ಸೀತಾರಾಮನ್, ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದರೆ ನಮ್ಮ ಭಾರತವೇ ಗ್ರೇಟ್

Nirmala Sitharaman About Indian Muslims: ದೇಶದಲ್ಲಿ ಹಿಂದೂ ಮುಸ್ಲಿಮರ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ. ಭಾರತ ದೇಶ ವಿಶ್ವದಲ್ಲಿ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಇದೀಗ ಭಾರತದಲ್ಲಿ ಮುಸ್ಲಿಮರ ನಿಲುವಿನ ಬಗ್ಗೆ ನಿರ್ಮಲ ಸೀತಾರಾಮನ್ (Nirmala Sitharaman) ಮಾತನಾಡಿದ್ದಾರೆ. ಪಾಕಿಸ್ತಾನದಲ್ಲಿ ವಾಸಿಸುವ ಮುಸ್ಲಿಮರಿಗೂ ಹಾಗು ಭಾರತದಲ್ಲಿ ವಾಸಿಸುವ ಮುಸ್ಲಿಮರಿಗೂ ಇರುವ ವ್ಯತ್ಯಾಸದ ಬಗ್ಗೆ ನಿರ್ಮಲ ಸೀತಾರಾಮನ್ ಮಾತನಾಡಿದ್ದಾರೆ.

Nirmala Sitharaman About Indian Muslims
Image Source: India Today

ಭಾರತದಲ್ಲಿ ಮುಸ್ಲಿಮರ ಸ್ಥಿತಿಯ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್
ಇತ್ತೀಚಿಗೆ ಅಮೇರಿಕಾದಲ್ಲಿ ನಡೆದ ಪೀಟರ್ಸನ್ ಇನ್ ಸ್ಟಿಟ್ಯೂಟ್ ಫಾರ್ ಇಂಟೆರ್ ನ್ಯಾಷನಲ್ ಎಕನಾಮಿಕ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್ ಭಾರತದಲ್ಲಿ ಮುಸ್ಲಿಮರ ನಿಲುವಿನ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಮುಸ್ಲಿಮರ ಸ್ಥಿತಿ ಗಂಭೀರವಾಗಿದೆ ಎನ್ನುವ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ.

Nirmala Sitharaman About Indian Muslims
Image Source: Times Of India

ಭಾರತದಲ್ಲಿ ಮುಸ್ಲಿಮರು ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ
ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರ ಬದುಕು ಸಂಕಷ್ಟದಲ್ಲಿದೆ ಅಥವಾ ಸರ್ಕಾರವೇ ಅವರನ್ನು ಕಷ್ಟಕ್ಕೆ ಒಳಪಡಿಸುತ್ತಿದೆ ಎನ್ನುವ ಮಾತು ನಿಜವಾಗಿದ್ದರೆ, 1947 ರ ನಂತರದ ಕಾಲದಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತಿರಲಿಲ್ಲ. ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರು ಪಾಕಿಸ್ತಾನದಲ್ಲಿ ವಾಸಿಸುವ ಮುಸ್ಲಿಮರಿಗಿಂತ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

Nirmala Sitharaman About Indian Muslims
Image Source: India Today

ಪಾಕಿಸ್ತಾನ ಮುಸ್ಲಿಂ ರಾಷ್ಟ್ರ ಹಾಗೂ ಅಲ್ಪ ಸಂಖ್ಯಾತರ ರಕ್ಷಣೆಗೆ ಬದ್ದ ಎಂದು ಪಾಕಿಸ್ತಾನ ಘೋಷಿಸಿದೆ. ಇದು ಸತ್ಯದಿಂದ ತುಂಬಾ ದೂರ ಇದೆ. ಭಾರತದಲ್ಲಿ ಮುಸ್ಲಿಮರು ವ್ಯಾಪಾರ ಮಾಡಿಕೊಂಡಿದ್ದಾರೆ. ಮುಸ್ಲಿಮರ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸರ್ಕಾರದಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ನೀಡಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.

Join Nadunudi News WhatsApp Group

Nirmala Sitharaman About Indian Muslims
Image Source: NDTV.com

 

Join Nadunudi News WhatsApp Group