Pension Rules: ಪಿಂಚಣಿ ವಿಷಯವಾಗಿ ಸರ್ಕಾರೀ ನೌಕರರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದ ಘೋಷಣೆ.

ಹಳೆ ಮತ್ತು ಹೊಸ ಪಿಂಚಣಿ ನಿಯಮದ ಬಗ್ಗೆ ನಿರ್ಧಾರ ಹೊರಹಾಕಿದ ಕೇಂದ್ರ ಸರ್ಕಾರ.

Indian Old Pension Scheme: ಇತ್ತೀಚಿನ ದಿನಗಳಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ವಿಷ್ಯಗಳು ಸಾಕಷ್ಟು ಹರಿದಾಡುತ್ತಿವೆ. ಇನ್ನು ಸರ್ಕಾರೀ ನೌಕರರು ತಮ್ಮ ವೇತನದ ವಿಚಾರವಾಗಿ ಸಿಹಿ ಸುದ್ದಿ ಪಡೆಯುತ್ತಲೇ ಇದ್ದಾರೆ.

ಇದೀಗ ದೇಶದಾದ್ಯಂತ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ವಿಷಯವಾಗಿ ಸುದ್ದಿಗಳು ವೈರಲ್ ಆಗುತ್ತಿದೆ. ಇನ್ನು ಹಳೆಯ ಪಿಂಚಣಿ (Old Pension) ವ್ಯವಸ್ಥೆ ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ (Central Government) ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.

 

The central government has now implemented a new rule in the new and old pension system
Imge Credit: pragativadi

ಹಳೆ ಪಿಂಚಣಿ ಜಾರಿಗೊಳಿಸುವಲ್ಲಿ ಸರ್ಕಾರದಿಂದ ಮಹತ್ವದ ನಿರ್ಧಾರ
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಹೊಣೆ ಇದೀಗ ಸರ್ಕಾರದ ಮೇಲಿದೆ. ಇನ್ನು ಈ ಬಗ್ಗೆ ಹಣಕಾಸು ಸಚಿವಾಲಯದಿಂದ ಮಹತ್ವದ ನಿರ್ಧಾರ ಹೊರಬಿದ್ದಿದೆ. ಸರ್ಕಾರ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಯಾವಾಗ ಜಾರಿಗೆ ತರಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ
ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ನೌಕರರ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಹಣಕಾಸು ಸಚಿವಾಲಯ ಸಮಿತಿಯನ್ನು ರಚಿಸಿದೆ ಎನ್ನಲಾಗುತ್ತಿದೆ. ಆದರೆ ಸರ್ಕಾರಿ ನೌಕರರಿಗೆ ಅನ್ವಯವಾಗುವ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ಆಗುವ ಅಗತ್ಯವಿದೆಯೇ ಎಂದು ಸಮಿತಿ ಪ್ರಶ್ನಿಸುತ್ತಿದೆ.

Join Nadunudi News WhatsApp Group

Samitayanna has now been formed to take a decision on the pension of government employees.
Image Credit: ifamagazine

ಈ ಹಿಂದೆ 2003 ಕ್ಕಿಂತ ಮೊದಲಿನ ಸರ್ಕಾರೀ ನೌಕರರಿಗೆ ಹಳೆ ಪಿಂಚಣಿ ಪದ್ದತಿಯು ಲಾಭವನ್ನು ನೀಡುತ್ತಿತ್ತು. ಇನ್ನು ರಾಜಸ್ಥಾನವು ಮೊದಲ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ಆಗಸ್ಟ್ ನಲ್ಲಿ ಸಿಗಲಿದೆ ಹಳೆಯ ಪಿಂಚಣಿ ಆಯ್ಕೆ
ಆಗಸ್ಟ್ ನ ಒಳಗೆ ಸರ್ಕಾರಿ ನೌಕರರು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಆಯ್ಕೆ ಮಾಡಬಹುದು ಎಂದು ಸರ್ಕಾರ ಸೂಚನೆ ನೀಡಿದೆ. ನೌಕರರು ಆಗಸ್ಟ್ 31 ರವಳಗೆ ಪಿಂಚಣಿ ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಇದರೊಂದಿಗೆ ಆಗಸ್ಟ್ 31 ರವರೆಗೆ ಹಳೆಯ ಪಿಂಚಣಿ ಯೋಜನೆ (OPS) ಆಯ್ಕೆ ಮಾಡದ ಅರ್ಹ ಉದ್ಯೋಗಿಗಳನ್ನು ಹೊಸ ಪಿಂಚಣಿ ಯೋಜನೆಗೆ ಸೇರಿಸಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ.

2004 ರ ನಂತರ ನೌಕರರು ಹೊಸ ಪಿಂಚಣಿಯನ್ನ ಪಡೆಯುತ್ತಾರೆ ಮತ್ತು 2003 ಕ್ಕಿಂತ ಮೊದಲು ಬಂದ ನೌಕರರು ಹಳೆಯ ಪಿಂಚಣಿ ಪಡೆಯುತ್ತಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Join Nadunudi News WhatsApp Group