Pan Card Link Dealine: ಅವಧಿ ಮುಗಿದ ಮೇಲೆ ಪಾನ್ ಆಧಾರ್ ಲಿಂಕ್ ಮಾಡಿದರೆ ದಂಡ ಹೆಚ್ಚು, ನಿರ್ಮಲ ಸೀತಾರಾಮನ್ ಸ್ಪಷ್ಟನೆ.

ಅವಧಿ ಮುಗಿದ ನಂತರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿದರೆ ಹೆಚ್ಚು ದಂಡವನ್ನ ಕಟ್ಟಬೇಕು ಎಂದು ನಿರ್ಮಲ ಸೀತಾರಾಮನ್ ಹೇಳಿದ್ದಾರೆ.

Pan Card And Aadhar Card Link Deadline: ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhar Card) ಲಿಂಕ್ ಸಂಬಂಧಿತ ಸಾಕಷ್ಟು ಸುದ್ದಿಗಳು ಹರಡಿದ್ದವು. ಪ್ಯಾನ್ ಆಧಾರ್ ಲಿಂಕ್ ನ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದ್ದವು.

ಇದೀಗ ಪ್ಯಾನ್ ಹಾಗು ಆಧಾರ್ ಲಿಂಕ್ ಕಡ್ಡಾಯವಾಗಿದೆ. ಭಾರತದ ಪ್ರಜೆಯಾದವರು ತಮ್ಮ ಪ್ಯಾನ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲೇ ಬೇಕು. ಆದಾಯ ತೆರಿಗೆ ಪಾವತಿಯಲ್ಲಿ ಪ್ಯಾನ್ ಕಾರ್ಡ್ ಮುಖ್ಯ ಪಾತ್ರ ವಹಿಸುತ್ತದೆ. ನೀಡಿದ ಗಡುವಿನ ಒಳಗೆ ಆಧಾರ್ ಪ್ಯಾನ್ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.

If PAN card and Aadhaar card are linked after the expiry of the period, more penalty has to be paid
Image Credit: news18

ಆಧಾರ್ ಪ್ಯಾನ್ ಲಿಂಕ್ ಗೆ ದಂಡ
ಈ ಹಿಂದೆ ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 2023 ಕೊನೆಯ ದಿನಾಂಕವಾಗಿತ್ತು. ಸಾಕಷ್ಟು ಜನರು ಇನ್ನು ಪ್ಯಾನ್ ಆಧಾರ್ ಲಿಂಕ್ ಮಾಡದೆ ಇದ್ದ ಕಾರಣ ಸರ್ಕಾರ ಪ್ಯಾನ್ ಆಧಾರ್ ಲಿಂಕ್ ಗಡುವನ್ನು ವಿಸ್ತರಣೆ ಮಾಡಿದೆ. ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30 2023 ಕೊನೆಯ ದಿನಾಂಕವನ್ನು ನಿಗದಿ ಮಾಡಿದೆ.

ಇನ್ನು ಪ್ಯಾನ್ ಆಧಾರ್ ಲಿಂಕ್ ಗೆ ಈಗಾಗಲೇ 1,000 ದಂಡವನ್ನು ವಿಧಿಸಲಾಗಿದೆ. ಇನ್ನು ಅಧಿಕ ದಂಡ ಪಾವತಿಸಬೇಕಾಗುತ್ತದೆ ಎನ್ನುವ ಸುದ್ದಿಗಳು ಸಾಕಷ್ಟು ಹರಡಿದೆ. ಪ್ಯಾನ್ ಆಧಾರ್ ಲಿಂಕ್ ಪ್ರಕ್ರಿಯೆಗೆ ಅಧಿಕ ದಂಡ ವಿಧಿಸುವ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸ್ಪಷ್ಟನೆ ನೀಡಿದ್ದಾರೆ.

Nirmala Sitharaman has clarified the news that if you link PAN card and Aadhaar card after the expiry of the period, you will have to pay more penalty.
Image Credit: ndtv

ಪ್ಯಾನ್ ಆಧಾರ್ ಲಿಂಕ್ ದಂಡದ ಬಗ್ಗೆ ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್
ಪ್ಯಾನ್ ಆಧಾರ್ ಲಿಂಕ್ ಮಾಡಲು ಸಮಯವನ್ನು ಮೊದಲೇ ನಿಗದಿಮಾಡಲಾಗಿತ್ತು. ಎಲ್ಲರು ಈಗಲೇ ಪ್ಯಾನ್ ಆಧಾರ್ ಲಿಂಕ್ ಮಾಡಿಕೊಳ್ಳಿ. ಲಿಂಕ್ ಮಾಡಲು ಗಡವು ಮುಗಿದರೆ ದಂಡದ ಮೊತ್ತವನ್ನು ಹೆಚ್ಚಿಸಲಾಗುವುದು.

Join Nadunudi News WhatsApp Group

ಪ್ಯಾನ್ ಆಧಾರ್ ಲಿಂಕ್ ಮಾಡಲು ಇನ್ನು ಜೂನ್ 30 ರವರೆಗೆ ಸಮಯಾವಕಾಶವಿದೆ. ಪ್ಯಾನ್ ಆಧಾರ್ ಲಿಂಕ್ ಮಾಡುವ ಗಡುವು ಮುಗಿದ ನಂತರವೇ ಮೊತ್ತವನ್ನು ಹೆಚ್ಚಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

Join Nadunudi News WhatsApp Group