Nita Ambani: ಮಗನ ಮದುವೆಗೆ ಬಂದ ಹಾರ್ಧಿಕ್ ಪಾಂಡ್ಯಗೆ ಖಡಕ್ ಎಚ್ಚರಿಕೆ ನೀಡಿದ ನೀತಾ ಅಂಬಾನಿ, ಅಷ್ಟಕ್ಕೂ ಆಗಿದ್ದೇನು.

ಪಾಂಡ್ಯಗೆ ಖಡಕ್ ಎಚ್ಚರಿಕೆ ನೀಡಲು ಕಾರಣವೇನು..? ಅಷ್ಟಕ್ಕೂ ಹಾರ್ಧಿಕ್ ಪಾಂಡ್ಯ ಮಾಡಿದ್ದೇನು

Nita Ambani And Hardik Pandya: ಅನಂತ್ ಅಂಬಾನಿ (Anant Ambani) ಅವರ ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಂಬಾನಿ ಕುಟುಂಭದಲ್ಲಿ ಮದುವೆಯ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಇನ್ನು ಮಾರ್ಚ್ 1 ರಿಂದ ಮಾರ್ಚ್ 3 ರ ವರೆಗೆ ಅಂಬಾನಿ ಅವರು ತಮ್ಮ ಮಗನ ಮಾಡುವೆಯ ಪೂರ್ವ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ತಾರೆಯರು, ಕ್ರಿಕೆಟಿಗರು, ರಾಜಕೀಯ ನಾಯಕರು ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಭಾಗಿಯಾಗಿದ್ದಾರೆ.

ಸೋಶಿಯಲ್ ಮಿಡಿಯದಲ್ಲಂತೂ ಅನಂತ್ ಅಂಬಾನಿ ಮದುವೆಯ ಕಾರ್ಯಕ್ರಮದ ಬಗ್ಗೆ ಸುದ್ದಿ ವೈರಲ್ ಆಗುತ್ತಲೇ ಇದೆ. ಮದುವೆಯ ಸಮ್ಬರದ ನಡುವೆ ಇದೀಗ ನೀತಾ ಅಂಬಾನಿ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಮದುವೆಯ ಪೂರ್ವ ಕಾರ್ಯಕ್ರಮದಲ್ಲಿ ಆಗಿದ್ದೇನು..? ಎನ್ನುವ ಬಗ್ಗೆ ತಿಳಿಯೋಣ.

Nita Ambani And Hardik Pandya
Image Credit: Thefauxy

ಮಗನ ಮದುವೆಗೆ ಬಂದ ಹಾರ್ಧಿಕ್ ಪಾಂಡ್ಯಗೆ ಖಡಕ್ ಎಚ್ಚರಿಕೆ ನೀಡಿದ ನೀತಾ ಅಂಬಾನಿ
ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ  ಬಾಲಿವುಡ್ ಮತ್ತು ಹಾಲಿವುಡ್ ತಾರೆಯರು ಭಾಗವಹಿಸಿ ಮದುವೆಯ ಪೂರ್ವ ಕಾರ್ಯಕ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ದ್ವೇನ್ ಬ್ರಾವೋ ದಾಂಡಿಯಾ ಆಡುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಈ ಘಟನೆಯ ಹಲವು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಎಲ್ಲಾ ಗಣ್ಯರಂತೆ ಅನಂತ್- ರಾಧಿಕಾ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ನೀತಾ ಅಂಬಾನಿ ಅವರು ಸಂಭ್ರಮಾಚರಣೆಯಲ್ಲಿ ಕುಣಿಯದಂತೆ ಎಚ್ಚರಿಕೆ ನೀಡಿದ್ದಾರೆ. ನೀತಾ ಅಂಬಾನಿ ಹಾರ್ಧಿಕ್ ಪಾಂಡ್ಯಗೆ ಎಚ್ಚರಿಕೆ ನೀಡಲು ಕಾರಣವೇನಿರಬಹುದು ಎನ್ನುವ ಬಗ್ಗೆ ಎಲ್ಲರು ಕುತೂಹಲರಾಗಿದ್ದಾರೆ.

Nita Ambani warned Hardik Pandya
Image Credit: Latestly

ಪಾಂಡ್ಯಗೆ ಖಡಕ್ ಎಚ್ಚರಿಕೆ ನೀಡಲು ಕಾರಣವೇನು..?
ಪಾದದ ಗಾಯದಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಇದೀಗ ಗಾಯದಿಂದ ಚೇತರಿಸಿಕೊಂಡಿದ್ದು, ಐಪಿಎಲ್ 2024ರ ಆವೃತ್ತಿಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಮಾಲಕಿಯಾಗಿರುವ ನೀತಾ ಅಂಬಾನಿ ತಮ್ಮ ತಂಡದ ನೂತನ ನಾಯಕ ಹಾರ್ದಿಕ್ ಪಾಂಡ್ಯ ಅವರು ಮದುವೆಯ ಸಂಭ್ರಮದಲ್ಲಿ ಕುಣಿಯುವುದು ಬೇಡ ಎಂದಿದ್ದಾರೆ. ಕಾಲಿನ ಗಾಯದ ಬಗ್ಗೆ ಎಚ್ಚರದಿಂದಿರಿ. ಇದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹುಷಾರಾಗಿರಿ ಎಂದು ನೀತಾ ಅಂಬಾನಿ ಹಾರ್ದಿಕ್ ಪಾಂಡ್ಯಗೆ ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group