Nita Ambani Saree: ಕೈಯಿಂದ ನೇಯ್ದ ನೀತಾ ಅಂಬಾನಿ ಅವರ ಬನಾರಸಿ ಸೀರೆಯ ಬೆಲೆ ಎಷ್ಟು ಗೊತ್ತಾ…? ದುಬಾರಿ ಸೀರೆ.

ಕೈಯಿಂದ ನೇಯ್ದ ನೀತಾ ಅಂಬಾನಿ ಅವರ ಬನಾರಸಿ ಸೀರೆಯ ಬೆಲೆ ಎಷ್ಟು...?

Nita Ambani Expensive Banarasi Saree: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ Mukesh Ambani ಅವರ ಪತ್ನಿ Nita Ambani ಎನ್ನುವ ವಿಚಾರ ಎಲ್ಲರಿಗು ತಿಳಿದಿದೆ. ಮುಖೇಶ್ ಅಂಬಾನಿ ಅವರು ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಆಗಾಗ ಸುದ್ದಿಯಾಗುತ್ತಾರೆ.

ನೀತಾ ಅಂಬಾನಿ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೈಲೈಟ್ ಆಗುತ್ತಾರೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಪತ್ನಿ ನೀತಾ ಅಂಬಾನಿ (Nita Ambani) ಅವರು ಬಾರಿ ಐಷಾರಾಮಿ ಜೀವನವನ್ನು ನಡೆಸುತ್ತಾರೆ.

Nita Ambani Expensive Banarasi Saree
Image Source: India Today

ಐಷಾರಾಮಿ ಜೀವನ ನಡೆಸುತ್ತಿರುವ ನೀತಾ ಅಂಬಾನಿ
ನೀತಾ ಅಂಬಾನಿ ಅವರು ಆಗಾಗ ತಮ್ಮ ದುಬಾರಿ ವಸ್ತುಗಳ ಬಳಕೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತಾರೆ. ನೀತಾ ಅಂಬಾನಿ ಬಳಸುವ ಟಿ ಕಪ್ ನಿಂದ ಹಿಡಿದು ಸ್ಯಾಂಡಲ್ ತನಕ ಎಲ್ಲವೂ ಲಕ್ಷ, ಕೋಟಿ ಬೆಲೆಯದ್ದೇ ಆಗಿದೆ. ದುಬಾರಿ ಡ್ರೆಸ್, ವಾಚ್, ಜ್ಯುವೆಲರಿ , ಸ್ಯಾಂಡಲ್ಸ್, ಬ್ಯಾಗ್, ಗ್ಲಾಸ್, ಫೋನ್ ಸೇರಿದಂತೆ ಹೀಗೆ ನೀತಾ ಅಂಬಾನಿ ಬಳಸುವ ಪ್ರತಿ ವಸ್ತು ಕೂಡ ಹೆಚ್ಚಿನ ಮೌಲ್ಯದ್ದಾಗಿದೆ.

ದುಬಾರಿ ಉಡುಗೆಯ ವಿಚಾರವಾಗಿ ಮತ್ತೆ ಸುದ್ದಿಯಾದ ನೀತಾ ಅಂಬಾನಿ
ಇನ್ನು ನೀತಾ ಅಂಬಾನಿ ಅವರು ಆಗರ್ಭ ಶ್ರೀಮಂತರಾಗಿದ್ದರು ಕೂಡ ಸರಳ ಜೀವನವನ್ನು ನಡೆಸುತ್ತಾರೆ. ಹೆಚ್ಚಿನ ಯಾವುದೇ ಕಾರ್ಯಕ್ರಮಗಳಿಗೂ ಭೇಟಿ ನೀಡಿದರು ಅವರು ಹೆಚ್ಚಾಗಿ ಸೀರೆಯನ್ನೇ ಧರಿಸುತ್ತಾರೆ. ಸಿಂಪಲ್ ಮೇಕಪ್ ನಲ್ಲಿ ದುಬಾರಿ ಉಡುಗೆ ಧರಿಸಿ ನೀತಾ ಅಂಬಾನಿ ಎಲ್ಲರ ಗಮನ ಸೆಳೆಯುತ್ತಾರೆ. ಸದ್ಯ ನೀತಾ ಅಂಬಾನಿ ಅವರು ಮತ್ತೆ ತಮ್ಮ ದುಬಾರಿ ಉಡುಗೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ ತಮ್ಮ ಬನಾರಸಿ ಬ್ರೊಕೇಡ್ ಸೀರೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Nita Ambani Expensive Banarasi Saree
Image Source: India Today

ಕೈಯಿಂದ ನೇಯ್ದ ಬನಾರಸಿ ಸೀರೆ ಧರಿಸಿದ ನೀತಾ ಅಂಬಾನಿ
ಇನ್ನು RIL ನ 46 ನೇ AGM ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗವಹಿಸಿದ್ದರು. ಈ ವೇಳೆ ಅವರು ಇಕ್ಬಾಲ್ ಅಹಮದ್ ಬ್ರೊಕೇಡ್ ಸೀರೆಯನ್ನು ಧರಿಸಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದಾರೆ. ನೀತಾ ಅಂಬಾನಿ ಧರಿಸಿದ ಸೀರೆ ಸೊಗಸಾದ ಲ್ಯಾವೆಂಡರ್ ನೇಯ್ಗೆ ವಾರಣಾಸಿಯ ಹಳೆಯ ಕರಕುಶಲತೆಯನ್ನು ಆಚರಿಸುತ್ತದೆ.

Join Nadunudi News WhatsApp Group

ಈ ಸೀರೆ ಬರ್ಫಿ ಬೂಟಿ, ಕೋನಿಯಾ ಪೈಸ್ಲಿ ಮೋಟಿಫ್‌ ಗಳು ಮತ್ತು ಸಾಂಪ್ರದಾಯಿಕ ಝರಿ ಕೆಲಸಗಳೊಂದಿಗೆ ಭಾರತೀಯ ಕಲಾತ್ಮಕತೆಯ ವೈವಿಧ್ಯತೆಯನ್ನು ಬಿಂಬಿಸುವ ವೈಶಿಷ್ಟ್ಯವನ್ನು ಹೊಂದಿದೆ. ಬನಾರಸಿ ನೇಯ್ಗೆ ರಿಲಯನ್ಸ್ ಫೌಂಡೇಶನ್‌ ನ ಸ್ವದೇಶ್‌ ನಿಂದ ಬೆಂಬಲಿತವಾದ ಅನೇಕ ಪ್ರಾದೇಶಿಕ ಕಲಾ ಪ್ರಕಾರಗಳಲ್ಲಿ ಒಂದಾಗಿದೆ ಎನ್ನಬಹುದು.

ನೀತಾ ಅಂಬಾನಿ ಧರಿಸಿದ ಪಿಂಕ್ ಬಣ್ಣದ ಬನಾರಸಿ ಸೀರೆ ಭಾರತೀಯ ಸಂಪ್ರದಾಯದಂತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇನ್ನು ನೀತಾ ಅಂಬಾನಿ ಧರಿಸುವ ಬನಾರಸಿ ಸೀರೆಯ ಬೆಲೆ ಸುಮಾರು 40 ಲಕ್ಷ ಎಂದು ಅಂದಾಜು ಮಾಡಲಾಗಿದೆ. ಇದು ಕೈಯಿಂದ ನೇಯ್ದ ಸೀರೆ ಆಗಿದ್ದು ನೀತಾ ಅಂಬಾನಿ ಅವರಿಗಾಗಿಯೇ ಈ ಸೀರೆಯನ್ನ ತಯಾರು ಮಾಡಲಾಗಿದೆ ಎಂದು ಹೇಳಬಹುದು.

Join Nadunudi News WhatsApp Group